ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.5:ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ತಲೆ ಮೇಲೆ ಖಾಲಿ ಬಿಂದಿಗೆ ಹೊತ್ತು ಪ್ರತಿಭಟನೆ ನಡೆಸಿದರು.
ರಾಜ್ಯದ ಮುಖ್ಯಮಂತ್ರಿ, ನೀರಾವರಿ ಮಂತ್ರಿಗೆ ಇಂಡಿಯಾ ಒಕ್ಕೂಟ ಬೇಕೋ ಅಥವಾ ರಾಜ್ಯದ ಜನ ಬೇಕೋ ಎಂಬುದನ್ನು ನಿರ್ಧರಿಸಿ, ಪದೇ ಪದೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಾತಿನ ಒತ್ತಡಕ್ಕೆ ಅಂಜಬೇಡಿ ಎಂದರು.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಬೆದರಿಕೆಗೆ ಅಂಜಿ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುವ ನೀರು ನಿಲ್ಲಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಮಂತ್ರಿಗಳಿಗೆ ಗೇರಾವ್ ಮಾಡುವ ಚಳವಳಿಗೆ ಕರೆ ನೀಡಬೇಕಾಗುತ್ತದೆ. ದಸರಾ ಆಚರಣೆಗೆ ಅಡ್ಡಿ ಮಾಡುವುದಾಗಿ ಸರ್ಕಾರಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ ಜನರಿಗೆ ಆಗುತ್ತಿರುವ ಸಂಕಷ್ಟದ ಬಗ್ಗೆ ವಿವರಿಸಲು ಕೇಂದ್ರ ಸರ್ಕಾರದ ಗಮನ ಸಳೆಯಲು
ಸದ್ಯದಲ್ಲಿಯೇ ಸಮಿತಿಯ ಮುಖಂಡರ ನಿಯೋಗ ದೆಹಲಿಗೆ ತೆರಳಲಾಗುವುದು. ಕಾವೇರಿ ಅಚ್ಚುಕಟ್ಟು ಭಾಗದ ಎಲ್ಲಾ ಲೋಕಸಭಾ ಸದಸ್ಯರಿಗೆ ಪತ್ರ ಬರೆಯಲಾಗಿದೆ. ನಿಯೋಗದ ಜೊತೆ ಜಲಶಕ್ತಿ ಸಚಿವರ ಭೇಟಿಗೆ ಅವಕಾಶ ಕೋರಬೇಕೆಂದು ಲೋಕಸಭಾ ಸದಸ್ಯರಿಗೆ ವಿನಂತಿಸಲಾಗಿದೆ ಎಂದರು.
ಧರಣಿಯಲ್ಲಿ ಕನ್ನಡ ಚಳುವಳಿಯ ಗುರುದೇವ ನಾರಾಯಣ್ ಮುಖಂಡ ನಾಡ ಸೇನಾನಿ ಕೆಂಪೇಗೌಡ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ದಲಿತ ಸಂಘಟನೆಗಳ ಒಕ್ಕೂಟದ ವೆಂಕಟಸ್ವಾಮಿ, ಆಮ್ ಆದ್ಮಿ ಪಕ್ಷದ ವಿಶ್ವನಾಥ್ ಟಿ , ಸಾಹಿತಿ ಶ್ರೀನಿವಾಸ್, ಸೂರ್ಯನಾರಾಯಣ್ ರೈತ ಮುಖಂಡ ಗಜೇಂದ್ರ , ಕಮಲಮ್ಮಸೇರಿದಂತೆ ಹಲವರು ಉಪಸ್ಥಿತರಿದ್ದರು.