ಸುದ್ದಿಮೂಲವಾರ್ತೆ
ಕೊಪ್ಪಳ ಸೆ 16: ಮೈಕ್ರೋಫೈನಾನ್ಸ್ ಸಿಬ್ಬಂದಿ ಓರ್ವ ಲೋನ್ ಕೊಡಲು ವಿವಾಹಿತ ಮಹಿಳೆ ಮೇಲೆ ಕೆಟ್ಟದೃಷ್ಟಿ ಬೀರಿ ಸಾಕಷ್ಟು ಚಪ್ಪಲಿ ಏಟು ತಿಂದಿದ್ದಾನೆ.
ಒಬ್ಬರಲ್ಲ ಮೂವರು ಚಪ್ಪಲಿ ಏಟು ಕೊಟ್ಟ ಘಟನೆ ಕೊಪ್ಪಳ ತಾಲೂಕಿನ ಹಳೇಬಂಡಿಹರ್ಲಾಪುರದಲ್ಲಿ ನಡೆದಿದೆ.
ಮಹಿಳಾ ಗುಂಪಿನ ಸದಸ್ಯೆ ನಾಗಮ್ಮಗೆ ಲೋನ್ ಮಂಜೂರು ಆಗಿದ್ದರೂ ಮೈಕ್ರೋಫೈನಾನ್ಸ್ ನ ಯಮನೂರಪ್ಪ ಲೋನ್ ಹಣ ಬಿಡುಗಡೆಗೆ ನಾಗಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡು ಒಂದು ದಿನ ಜೊತೆಗೆ ಕಾಲಕಳೆಯುವಂತೆ ಹೇಳಿದ್ದನಂತೆ.
50 ಸಾವಿರ ರೂಪಾಯಿ ಲೋನ್ ಮಾಡಿಸುತ್ತೇನೆ ಎಂದು ರಾತ್ರಿ 10 ರ ಹೊತ್ತಿಗೆ ಮೊಬೈಲ್ ಗೆ ಕರೆ ಮಾಡಿ ಯಮನೂರಪ್ಪ ಕೆಟ್ಟದಾಗಿ ಮಾತನಾಡುತ್ತಿದ್ದನಂತೆ.
ಇದರಿಂದ ರೊಚ್ಚಿಗೆದ್ದ ನಾಗಮ್ಮ ಮತ್ತು ಅವರ ತಾಯಿ , ಪತಿ ಸೇರಿ ಯಮನೂರಪ್ಪಗೆ ಸಾರ್ವಜನಿಕವಾಗಿ ಸಾಕು ಸಾಕು ಎನ್ನುವಷ್ಟು ಚಪ್ಪಲಿ ಏಟು ನೀಡಿದ್ದಾರೆ.
ಯಮನೂರಪ್ಪಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ವೈರಲ್ ಆಗಿದೆ. ಯಮನೂರಪ್ಪ ಹೊಸಪೇಟೆ ಮೂಲದವನು ಎಂದು ತಿಳಿದು ಬಂದಿದೆ.