ದೊಡ್ಮನಿ ಸ್ವಾಗತಕ್ಕೆ ಹರಿದು ಬಂದ ಜನಸಾಗರ!
ದೇವರ ಆಶೀರ್ವಾದ ಅಭಿಮಾನಿಗಳ ಪ್ರೀತಿ ಎಂದೂ ಮರೆಯುವುದಿಲ್ಲ: ಧರ್ಮಣ್ಣ ದೊಡ್ಡಮನಿ
ಯಡ್ರಾಮಿ : ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ರಾಜ್ಯಾಧ್ಯಕ್ಷರಾದ ಧರ್ಮಣ್ಣ ದೊಡ್ಡಮನಿಯವರಿಗೆ ಯಲಗೋಡದಿಂದ ಅಣಜಿಗಿ ರೇವಣಸಿದ್ದೇಶ್ವರ ಮಠದವರಿಗೆ 101 ಡೊಳ್ಳುಗಳು ವಾದ್ಯಗಳ ಮೂಲಕ ಮರಣವನ್ನೇ ಗೆದ್ದ ಮೃತ್ಯುಂಜಯ ದೊಡ್ಮನೆ ಅವರಿಗೆ ವಿವಿಧ ಕಲಾ ತಂಡಗಳ ಸ್ವಾಗತಿಸಿದ ಅಭಿಮಾನಿಗಳು.
ಮೂರು ತಿಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಪ್ರಥಮ ಬಾರಿಗೆ ಜೇವರಿಗೆ ಯಡ್ರಾಮಿ ತಾಲೂಕಿನ ಯಲಗೋಡ ಮತ್ತು ಅಣಜಿಗಿ ಗ್ರಾಮದ ಆರಾಧ್ಯ ದೈವ ಹಾಗೂ ಕುರುಬ ಸಮಾಜದ ಕುಲ ದೇವರೆಂದೇ ಖ್ಯಾತಿಯಾದ ಜಗದ್ಗುರು ರೇವಣಸಿದ್ದೇಶ್ವರ ದರ್ಶನಕ್ಕೆ ಆಗಮಿಸುವ ಸಂದರ್ಭದಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಜೈ ಘೋಷದೊಂದಿಗೆ ಸ್ವಾಗತ ಮಾಡಿದರು. ಅಭಿಮಾನಿಗಳ ದಂಡು ಸಾಗರದಂತೆ ಹರಿದು ಬಂದ ದೃಶ್ಯ ಕಂಡು ಬಂದಿರುತ್ತದೆ.
ದೊಡ್ಮನೆ ಅವರ ಜೀವನದಲ್ಲಿ ಒಂದು ಪವಾಡವೇ ನಡೆದಂತಾಗಿದೆ ಅಳಿಜಿಗಿಯ ಬಾಲ ಯೋಗಿ ಶ್ರೀ ಸತ್ಯಪ್ಪ ಮುತ್ಯಾನವರ ಪವಾಡ ಇಂದು ತಾಲೂಕಿನ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸತ್ತ ವ್ಯಕ್ತಿಯನ್ನು ಬದುಕಿದ ಮಹಾನ್ ಪವಾಡಪುರುಷರು ಶ್ರೀ ಸತ್ಯಪ್ಪ ಮುತ್ಯಾನವರು. ಅದು ಏನೆಂದರೆ ಕುರಿ ಮತ್ತು ಉಣ್ಣಿ ನಿಗಮಂಡಳಿಯ ರಾಜ್ಯ ಅಧ್ಯಕ್ಷರಾದ ಧರ್ಮಣ್ಣ ದೊಡ್ಡಮನಿ ಅವರು ರಸ್ತ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಇಡೀ ರಾಜ್ಯಕ್ಕೆ ಗೊತ್ತು ಆದರೆ ಆಸ್ಪತ್ರೆಯಲ್ಲಿ ವೈದ್ಯರು ಧರ್ಮಣ್ಣ ದೊಡ್ಡಮನಿ ಉಳಿಯುವುದಿಲ್ಲ ಹೇಳಿದ ಹೇಳಿಕೆಗಳು ಇಡೀ ರಾಜ್ಯಕ್ಕೆ ಗೊತ್ತು. ಆದರೆ ಸತ್ಯಪ್ಪ ಮುತ್ಯನವರ ಆಶೀರ್ವಾದದಿಂದ ಜೀವನ ಮತ್ತು ಮರಣದ ನಡುವೆ ಹೋರಾಟ ಮಾಡಿ ಚಿಕಿತ್ಸೆ ಪಡೆದು ಮರುಜನ್ಮ ಪಡೆದಂತಾಗಿದೆ ಎಂದು ಭಕ್ತರು ಪೂಜ್ಯರ ಪವಾಡವನ್ನು ಕೊಂಡಾಡುತ್ತಿದ್ದಾರೆ.
ಧರ್ಮಣ್ಣ ದೊಡ್ಮನಿ :- ಆರೋಗ್ಯದಲ್ಲಿ ಚೇತರಿಕೆಗೊಂಡ ನಂತರ ಮೊಟ್ಟ ಮೊದಲು ದರ್ಶನಕ್ಕೆ ಬರುತ್ತೇನೆ. ಗುರುಗಳ ಆಶೀರ್ವಾದದಿಂದ ನಾನು ಜೇವರ್ಗಿ ಮತ್ತೆ ಯಡ್ರಾಮಿ ತಾಲೂಕಿನ ಅಭಿಮಾನಿಗಳನ್ನು ನೋಡುವ ಭಾಗ್ಯ ದೊರಕಿಸಿ ಕೊಟ್ಟಿದ್ದು ಗುರುಗಳು. ಗುರುವಿನ ದರ್ಶನಕ್ಕೆ ಬಂದಿದ್ದೇನೆ. ಇನ್ನು ಮುಂದೆ ಜೇವರ್ಗಿಯ ನನ್ನ ಅಭಿಮಾನಿಗಳ ಋಣ ತೀರಿಸಲು ದುಡಿಯುತ್ತೇನೆ ಎಂದು ಹೇಳಿದರು.ತಾಲೂಕಿನ ಎಲ್ಲಾ ಜಾತಿ ಜನಾಂಗದ ಅಭಿಮಾನಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಲಿಂಗಬೀರ ದೇವರು ತಿಂಥಣಿ ಬ್ರಿಜ್ ಕಲಬುರ್ಗಿ ವಿಭಾಗ ಕನಕ ಗುರು ಪೀಠ, ಪರಮಪೂಜ್ಯ ಸತ್ಯಪ್ಪ ಮುತ್ಯ ಅಣಜಿಗಿ, ರಾಜಕೀಯ ಮಾರ್ಗದರ್ಶಕರಿಂದ ಕರೆಸಿಕೊಂಡ ಮಲ್ಲಿನಾಥ್ ಗೌಡ ಯಲಗೋಡ, ಎಂ ಬಿ ಪಾಟೀಲ್ ಹರವಾಳ, ಶ್ರೀಮತಿ ಶೋಭಾ ಬಾಣೀ, ಮರೆಪ್ಪ ಬಡಿಗೇರ, ಮರೆಪ್ಪ ಕಂಡಳಕರ್, ಶಂಕರಲಿಂಗ ಕರ್ಕಿಹಳ್ಳಿ, ನಿಂಗಣ್ಣ ದೊಡ್ಮನಿ, ನಿಂಗಣ್ಣ ರದ್ದೆವಾಡಗಿ, ರಾಜು ರದೇವಡಗಿ, ರಾಜು ತಳವಾರ್, ಜಟ್ಟಿಂಗರಾಯ, ಯಲಗೋಡು ಮತ್ತು ಅಣಜಿಗಿ ಗ್ರಾಮಸ್ಥರು, ಸಾವಿರಾರು ಧರ್ಮಣ್ಣ ದೊಡ್ಡಮನಿ ಅಭಿಮಾನಿಗಳು ಈ ಭವ್ಯವಾದ ಸ್ವಾಗತದಲ್ಲಿ ಉಪಸ್ಥಿತರಿದ್ದರು.