ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ರಾಯಚೂರು ಜಿಲ್ಲೆಯಲ್ಲಿ ೆಬ್ರವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮದ ಅಂಗವಾಗಿ ಜನವರಿ 27ರಂದು ಸೈಕ್ಲಾಾಥಾನ್ ಆಯೋಜನೆ ಮಾಡಲಾಗಿದ್ದು, ಆಸಕ್ತ ಕ್ರೀಡಾಪಟುಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿ ಯಶಸ್ವಿಿಗೊಳಿಸಬೇಕೆಂದು ಸೈಕ್ಲಿಿಂಗ್ ಮ್ಯಾಾರಥಾನ್ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.
ಜನವರಿ 27ರ ಬೆಳಗ್ಗೆೆ 6 ಗಂಟೆಗೆ ಸೈಕ್ಲಾಾಥಾನ್ ಆಯೋ ಜನೆ ಮಾಡಲಾಗಿದೆ. ಪ್ರಥಮ ಬಹುಮಾನ 10 ಸಾವಿರ ಹಾಗೂ ದ್ವಿಿತೀಯ ಬಹುಮಾನ 5 ಸಾವಿರ ರೂ.ಗಳನ್ನು ನೀಡಲಾಗುವುದು. ಆಸಕ್ತರು ಈ ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರ ಮೊಬೈಲ್ ಸಂಖ್ಯೆೆ: 9972316895 ಅಥವಾ ಜಿಲ್ಲಾ ಶಸ್ತ ಚಿಕಿತ್ಸಕರಾದ ಡಾ.ವಿಜಯಶಂಕರ್ ಮೊಬೈಲ್ ಸಂಖ್ಯೆೆ: 9448427601ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬ ಹುದಾಗಿದೆ. ಅಥವಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾಾನ್ ಮಾಡುವ ಮೂಲಕ ಸಹ ನೊಂದಾಯಿಸಿಕೊಳ್ಳಬಹುದಾಗಿದೆ.
ಮ್ಯಾಾರಥಾನ್ ಮಹಾತ್ಮಾಾ ಗಾಂಧಿ ಜಿಲ್ಲಾ ಕ್ರೀೆಡಾಂಗಣದಿಂದ ಆರಂಭವಾಗಿ ಬಸವೇಶ್ವರ ಸರ್ಕಲ್, ಲಿಂಗಸುಗೂರು ರೋಡ್, ಯಕ್ಲಾಾಸಪುರ್, ಯರಮಸರ್ ಬೈಪಾಸ್, ಓಪೆಕ್ ಆಸ್ಪತ್ರೆೆ, ಗಂಜ್ ಸರ್ಕಲ್, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಮಹಾತ್ಮಾಾಗಾಂಧಿ ಜಿಲ್ಲಾ ಕ್ರೀೆಡಾಂಗಣಕ್ಕೆೆ ಬಂದು ತಲುಪುವುದು.
ಸೈಕ್ಲಿಿಂಗ್ ಮ್ಯಾಾರಥಾನ್ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆೆಪಡುವಂತಹ ಕ್ರೀಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವ ಯಶಸ್ವಿಿಗೊಳಿಸಲು ಎಲ್ಲಾ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

