ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.24:
ಖ್ಯಾಾತ ಕಾದಂಬರಿಕಾರ ಹಾಗೂ ಸರಸ್ವತಿ ಸಮ್ಮಾಾನ್ ಪ್ರಶಸ್ತಿಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರು ವಯೋಸಹಜ ಕಾಯಿಲೆಗಳಿಂದ ಆಸ್ಪತ್ರೆೆಗೆ ದಾಖಲಾದ ವೇಳೆ ಹೃದಯಸ್ತಂಭನದಿಂದ ಬುಧವಾರ ಮಧ್ಯಾಾಹ್ನ ನಿಧನರಾಗಿದ್ದಾರೆ.
ಭೈರಪ್ಪ ಅವರಿಗೆ 94 ವರ್ಷ ವಯಸ್ಸಾಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋೋತ್ಥಾಾನ ಆಸ್ಪತ್ರೆೆಯಲ್ಲಿ ದಾಖಲಿಸಲಾಗಿತ್ತು. ಬೈರಪ್ಪ ಅವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆೆ ಅಪಾರ ನಷ್ಟವಾಗಿದೆ.
ಮೈಸೂರಿನ ಕುವೆಂಪು ನಗರದ ಉದಯರವಿ ರಸ್ತೆೆಯಲ್ಲಿರುವ ನಿವಾಸದಲ್ಲಿದ್ದ ಬೈರಪ್ಪ ಅವರನ್ನು ಆರು ತಿಂಗಳ ಹಿಂದೆ ಅನಾರೋಗ್ಯ ಹಿನ್ನೆೆಲೆಯಲ್ಲಿ ಆಸ್ಪತ್ರೆೆಗೆ ದಾಖಲಿಸಲಾಗಿತ್ತು. ಭೈರಪ್ಪ ಅವರು ಪತ್ನಿಿ ಸರಸ್ವತಿ ಪುತ್ರರಾದ ರವಿಶಂಕರ್ ಹಾಗೂ ಉದಯ ಶಂಕರ್ ಅವರನ್ನು ಅಗಲಿದ್ದಾರೆ.
ರವಿಂದ್ರ ಕಲಾಕ್ಷೇತ್ರದಲ್ಲಿ ದರ್ಶನ
ರಾಜರಾಜೇಶ್ವರಿನಗರದಲ್ಲಿರುವ ಆಸ್ಪತ್ರೆೆಯಲ್ಲಿದ್ದ ಅವರ ಮೃತದೇಹವನ್ನು ಗುರುವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆೆ ಇಟ್ಟು ನಂತರ ಅಲ್ಲಿಂದ ಮೈಸೂರಿಗೆ ಕರೆದೊಯ್ಯಲಾಗುತ್ತದೆ. ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಬ್ರಾಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾಾರ ನಡೆಯಲಿದೆ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಕನ್ನಡದ ಖ್ಯಾಾತ ಬರಹಗಾರ ಡಾ. ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನಕ್ಕೆೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಗುರುವಾರ ಬೆಳಿಗ್ಗೆೆ 8.00 ಗಂಟೆಯಿಂದ ಮಧ್ಯಾಾಹ್ನ 1.00 ಗಂಟೆಯವರೆಗೆ ಅವಕಾಶ ಕಲ್ಪಿಿಸಲಾಗಿದೆ. ಸಾರ್ವಜನಿಕರು ಪೂರ್ಣಿಮಾ ಥಿಯೇಟರ್ ರಸ್ತೆೆ ಹಾಗೂ ಜೆ ಸಿ ರಸ್ತೆೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಮುಖ್ಯ ಪ್ರವೇಶ ದ್ವಾಾರದ ಮೂಲಕ ಪ್ರವೇಶಿಸಿ ಅಂತಿಮ ದರ್ಶನದ ನಂತರ ಟೌನ್ ಹಾಲ್ ಗೇಟ್ ಮೂಲಕ ನಿರ್ಗಮಿಸಲು ಅವಕಾಶ ಕಲ್ಪಿಿಸಿದೆ.
ಬಾಲ್ಯ ಮತ್ತು ಶಿಕ್ಷಣ:
ಬೈರಪ್ಪ ಅವರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಾಮದಲ್ಲಿ 1934ರ ಆಗಸ್ಟ್ 20ರಂದು ಲಿಂಗಣ್ಣಯ್ಯ ಹಾಗೂ ಗೌರಮ್ಮ ದಂಪತಿ ಪುತ್ರನಾಗಿ ಜನಿಸಿದರು. ಪ್ರಾಾಥಮಿಕ ಶಿಕ್ಷಣ ಬಾಗೂರು, ನುಗ್ಗೇಹಳ್ಳಿಿಯಲ್ಲಿ ನಡೆಯಿತು. ಬಳಿಕ ಮೈಸೂರಿನ ಶಾರದಾವಿಲಾಸ ಪ್ರೌೌಢಶಾಲೆ ಸೇರಿದರು. ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಾಲಯದಲ್ಲಿ ಚಿನ್ನದ ಎರಡು ಪದಕಗಳೊಂದಿಗೆ ಎಂ.ಎ.ತತ್ವಶಾಸದಲ್ಲಿ ಪದವಿ ಪಡೆದರು.
ಬರೋಡದ ಸಯ್ಯಾಾಜಿರಾವ್ ವಿಶ್ವವಿದ್ಯಾಾಲಯದಲ್ಲಿ ಸತ್ಯ ಮತ್ತು ಸೌಂದರ್ಯ ಪ್ರಬಂಧಕ್ಕೆೆ ಪಿಎಚ್ಡಿ ಪಡೆದರು. ಬಳಿಕ ಹುಬ್ಬಳ್ಳಿಿ ಕಾಡುಸಿದ್ದೇಶ್ವರ ಕಾಲೇಜು, ಗುಜರಾತ್ನ ಸರ್ದಾರ್ ವಲ್ಲಭವಾಯಿ ಪಟೇಲ್ ವಿಶ್ವವಿದ್ಯಾಾಲಯದಲ್ಲಿ ತತ್ವಶಾಸದ ಪ್ರಾಾಧ್ಯಾಾಪಕರಾಗಿದ್ದರು.
ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆೆಯಲ್ಲಿ 1967ರಿಂದ 1971ರವರೆಗೆ ಉಪನ್ಯಾಾಸಕರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಮೈಸೂರಿನ ಪ್ರಾಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾದರು. ಅಲ್ಲಿ ತತ್ವಶಾಸ ಮತ್ತು ಶಿಕ್ಷಣ ವಿಜ್ಞಾನದ ಪ್ರಾಾಧ್ಯಾಾಪಕರಾಗಿ 1991ರಲ್ಲಿ ನಿವೃತ್ತರಾದರು.
ಎಸ್.ಎಲ್.ಭೈರಪ್ಪ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ ಪ್ರಕಾರದತ್ತ ಆಕರ್ಷಿತರಾಗಿದರು. ಹೀಗಾಗಿ ಅವರು ವಿದ್ಯಾಾರ್ಥಿಯಾಗಿದ್ದಾಗಲೇ ಧರ್ಮಶ್ರೀ ಬರೆದರು. ಇದು 1961ರಲ್ಲಿ ಪ್ರಕಟಗೊಂಡಿತು. ಬಳಿಕ ಹಲವು ಕಾದಂಬರಿಗಳನ್ನು ರಚಿಸಿದರು.
ಭೈರಪ್ಪನವರ ಕಾದಂಬರಿಗಳಾದ ವಂಶವೃಕ್ಷ’, ತಬ್ಬಲಿಯು ನೀನಾದೆ ಮಗನೆ’, ನಾಯಿನೆರಳು’, ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಿ ಗಳಿಸಿ ಜನಪ್ರಿಿಯಗೊಂಡಿವೆ. ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆನಿಂತಿದೆ. ವಂಶವೃಕ್ಷ ಸಿನಿಮಾ ತೆಲುಗಿನಲ್ಲಿ ಅನಿಲ್ ಕಪೂರ್ ನಟನೆಯಲ್ಲಿ ರಿಮೇಕ್ ಆಗಿದೆ. ‘ದಾಟ ’ ಹಿಂದಿಯಲ್ಲಿ ಟಿವಿ ಧಾರಾವಾಹಿಯಾಗಿದೆ.
ಹಲವು ಪ್ರಶಸ್ತಿಿಗಳು:
ಕೇಂದ್ರ ಸರ್ಕಾರದ ಪದ್ಮಗೌರವಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ಎರಡೂ ಪ್ರಶಸ್ತಿಿಗಳನ್ನು ಪಡೆದ ಕನ್ನಡದ ಕೆಲವೇ ಬರಹಗಾರರಲ್ಲಿ ಭೈರಪ್ಪ ಒಬ್ಬರು. ಬಿರ್ಲಾ ೌಂಡೇಶನ್ ನೀಡುವ ಸರಸ್ವತಿ ಸಮ್ಮಾಾನ್ ಪ್ರಶಸ್ತಿಿಯನ್ನು ಅವರು ಸ್ವೀಕರಿಸಿದ್ದಾರೆ. ಇದು ಭಾರತದಲ್ಲೇ ಅತಿ ಹೆಚ್ಚಿಿನ ನಗದು ಮೊತ್ತ ನೀಡುವ (15 ಲಕ್ಷ ರೂ.) ಪ್ರಶಸ್ತಿಿ ಇದಾಗಿದೆ.
ವಂಶವೃಕ್ಷ ಕಾದಂಬರಿಗೆ 1996ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ, ದಾಟು ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 1985ರಲ್ಲಿ ಮಾಸ್ತಿಿ, 2005 ರಲ್ಲಿ ಪಂಪ ಪ್ರಶಸ್ತಿಿ, 2010ರಲ್ಲಿ ಸರಸ್ವತಿ ಸಮ್ಮಾಾನ್, 2011ರಲ್ಲಿ ನಾಡೋಜ, 2014ರಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿಿ, 2017ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಿನ ನೃಪತುಂಗ ಪ್ರಶಸ್ತಿಿ ದೊರೆತಿದೆ.
2014ರಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಾಧ್ಯಾಾಪಕ ಪುರಸ್ಕಾಾರ. 2015ರಲ್ಲಿ ಸಾಹಿತ್ಯ ಅಕಾಡೆಮಿ ೆಲೋಶಿಪ್ ಗೌರವಕ್ಕೆೆ ಭಾಜನರಾಗಿದ್ದರು. ಕೇಂದ್ರ ಸರ್ಕಾರ 2016ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮಭೂಷಣ ಪುರಸ್ಕಾಾರವನ್ನು ನೀಡಿ ಗೌರವಿಸಿದೆ.
ಅಲ್ಲದೆ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಿಷ್ಗೆ ಭಾಷಾಂತರಗೊಂಡಿವೆ.

