ಸುದ್ದಿಮೂಲ ವಾರ್ತೆ
ಬೆಂಗಳೂರು,ಆ.23:ಚಾಲಕರನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಬೆಂಗಳೂರು ಮೂಲದ ಚಲನಶೀಲ ಅಪ್ಲಿಕೇಶನ್ ನಮ್ಮ ಯಾತ್ರಿ, ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ಚಾಲಕರ ಗಳಿಕೆಯನ್ನು ಹೆಚ್ಚಿಸಲು ನವೀನ ಚಂದಾದಾರಿಕೆ ಮಾದರಿಗಳನ್ನು ಅನಾವರಣಗೊಳಿಸಿದೆ. ಚಾಲಕರು ಯಾವುದೇ ಕಮಿಷನ್ ಪಾವತಿಸದೆ ಒಟ್ಟಾರೆಯಾಗಿ 100 ಕೋಟಿ ಗಳಿಸುತ್ತಿದ್ದಾರೆ. ನಮ್ಮ ಯಾತ್ರಿ ಒಂದು ಮಹತ್ವದ ಮೈಲಿಗಲ್ಲನ್ನು ಆಚರಿಸುತ್ತಿರುವಾಗ ಈ ಪ್ರಕಟಣೆ ಹೊರ ಬಂದಿದೆ. ಈ ವೇದಿಕೆಯ ಯಶಸ್ಸು ಭಾರತದ ಇತರ ನಗರಗಳಿಗೆ ಮಾದರಿಯಾಗಿದೆ.
ಜಸ್ಪೇ ಟೆಕ್ನಾಲಜೀಸ್ ನಿಂದ ಬೆಂಗಳೂರಿನ ಆಟೋ ಚಾಲಕರ ಸಹಭಾಗಿತ್ವದಲ್ಲಿ ನಿರ್ಮಿಸಲಾದ ನಮ್ಮ ಯಾತ್ರಿ, ಗ್ರಾಹಕರು ಕಡಿಮೆ ಪಾವತಿಸುವುದನ್ನು ಖಾತ್ರಿಪಡಿಸುವ ಮೂಲಕ ಚಾಲಕರು ಹೆಚ್ಚು ಗಳಿಸಲು ಅನುವು ಮಾಡಿಕೊಡುವ ಉಪಯುಕ್ತತೆಯಂತೆ ತಂತ್ರಜ್ಞಾನವನ್ನು ಪ್ರವೇಶಿಸುವ ಉದ್ದೇಶವನ್ನು ಇದು ಹೊಂದಿದೆ. 88,000 ಕ್ಕೂ ಅಧಿಕ ಚಾಲಕರ ಅಭಿವೃದ್ಧಿ ಹೊಂದುತ್ತಿರುವ ಸಮುದಾಯದೊಂದಿಗೆ ಮತ್ತು 17 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.
ಕಳೆದ 9 ತಿಂಗಳುಗಳಲ್ಲಿ ಸುಮಾರು 90,000 ದೈನಂದಿನ ಟ್ರಿಪ್ ಗಳನ್ನು ಮತ್ತು 70 ಲಕ್ಷಕ್ಕೂ ಹೆಚ್ಚು ಟ್ರಿಪ್ ಗಳನ ಮಾಡಿದೆ.
ಆಟೋ ಚಾಲಕ ಪ್ರಸನ್ನ ಅವರು ನಮ್ಮ ಯಾತ್ರಿಯ ಬಗ್ಗೆ ಮಾತನಾಡಿ “ನಮ್ಮ ಯಾತ್ರಿ ಅಪ್ಲಿಕೇಶನ್ ಮಾತ್ರ ಇದ್ದರೆ, ಅದು ನಮಗೆ ತುಂಬಾ ಪ್ರಯೋಜನ. ಏಕೆಂದರೆ ನಾವು ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುತ್ತೇವೆ ಮತ್ತು ಯಾವುದೇ ಕಮಿಷನ್ ಇಲ್ಲದೆ ಪಾವತಿಯನ್ನು ಸ್ವೀಕರಿಸುತ್ತೇವೆ, ಇದು ಗ್ರಾಹಕರು ಮತ್ತು ಚಾಲಕರನ್ನು ಸಂತೋಷಪಡಿಸುತ್ತಿದೆ ಎಂದರು.
ಮತ್ತೋರ್ವ ಆಟೋ ಚಾಲಕ ಮುನಿರಾಜು ಮಾತನಾಡಿ, “ನಮ್ಮ ಯಾತ್ರಿ ಬಂದಾಗಿನಿಂದ ಇದು ನಿಜವಾಗಿಯೂ ನಮಗೆ ಅನುಕೂಲಕರವಾಗಿದೆ; ಗ್ರಾಹಕರು ಮತ್ತು ಚಾಲಕರು ಬೇಗನೆ ಸವಾರಿ ಮಾಡುತ್ತಾರೆ. ನಾವು ಈಗ ಹೆಚ್ಚಿನ ಹಣವನ್ನು ಗಳಿಸಲು ಸಮರ್ಥರಾಗಿದ್ದೇವೆ. ನಮ್ಮ ಯಾತ್ರಿ ಪರಿಚಯಿಸಿದ ಚಂದಾದಾರಿಕೆ ಯೋಜನೆಗಳು ಹೊಂದಿಕೊಳ್ಳುವ ಮತ್ತು ಕೈಗೆಟುಕುವಂತದ್ದು.” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಯಾತ್ರಿ ಚಾಲಕರ ಆದ್ಯತೆಗಳಿಗೆ ಅನುಗುಣವಾಗಿ ಎರಡು ಚಂದಾದಾರಿಕೆ ಯೋಜನೆಗಳನ್ನು ನೀಡುತ್ತದೆ. “ಪ್ರತಿದಿನ ಅನ್ಲಿಮಿಟೆಡ್” ಯೋಜನೆಯು ದಿನಕ್ಕೆ ಕೇವಲ 25ರೂ ನಿಂದ ಸೀಮಿತವಿಲ್ಲದೇ ಸವಾರಿಗಳನ್ನು ನೀಡುತ್ತದೆ, ಹಾಗೂ ಮೊದಲ ಸವಾರಿ ಉಚಿತವಾಗಿದೆ. ಪರ್ಯಾಯವಾಗಿ, “ಪ್ರತಿದಿನ ಪ್ರತಿ ಸವಾರಿ” ಯೋಜನೆಯು ಪ್ರತಿದಿನ 10 ಸವಾರಿಗಳಿಗೆ ಪ್ರತಿ ಸವಾರಿಗೆ ರೂ.3.50 ಶುಲ್ಕವನ್ನು ವಿಧಿಸುತ್ತದೆ, ಅದಕ್ಕೂ ಮೀರಿದ ಸವಾರಿಗಳು ಉಚಿತವಾಗಿರುತ್ತದೆ. ಎರಡೂ ಯೋಜನೆಗಳು ಕಮಿಷನ್ ಆಧಾರಿತ ಮಾದರಿಯಿಂದ ಮೂಲಭೂತವಾಗಿ ವಿಭಿನ್ನವಾಗಿವೆ ಮತ್ತು ಸಾಂಪ್ರದಾಯಿಕ ಅಗ್ರಿಗೇಟೊಗೆ ಹೋಲಿಸಿದರೆ ಚಾಲಕರಿಗೆ ಗಣನೀಯ ವೆಚ್ಚದ ಉಳಿತಾಯವನ್ನು ನೀಡುತ್ತವೆ.