ಧರ್ಮಸ್ಥಳ ಸಂಘದ ವತಿಯಿಂದ ಮಹಿಳೆಯರಿಗೆ ಡಿಜಿಟಲ್ ಸಾಲ ಸೌಲಭ್ಯ
ಸುದ್ದಿಮೂಲ ವಾರ್ತೆ
ಆನೇಕಲ್. ಜೂ 28 : ತಾಲೂಕಿನ ಸಮಂದೂರು ಗ್ರಾಮ ಪಂಚಾಯಿತಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಸಣ್ಣ ಉದ್ಯಮಿಗಳಿಗೆ ಡಿಜಿಟಲ್ ಆಪ್ ಮೂಲಕ ಸಾಲವನ್ನು ನೀಡುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾಗಿರುವ ಸಂಘಗಳಿಗೆ ಡಿಜಿಟಲ್ ಆಪ್ ಮೂಲಕ ಲೋನ್ ಗಳನ್ನು ಹೇಗೆ ಪಡೆದುಕೊಳ್ಳುವ ಎನ್ನುವುದರ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಮುಖವಾಗಿ ಡಿಜಿಟಲ್ ಆಪ್ ಮೂಲಕ ಮತ್ತು ಸಂಘದ ಸದಸ್ಯರುಗಳಿಗೆ ಅತ್ಯಂತ ವೇಗವಾಗಿ ಲೋನ್ ಗಳನ್ನು ಹೇಗೆ ನೀಡುವುದರ ಎಂಬುದರ ಬಗ್ಗೆ ಮಾಹಿತಿ ಸಹ ಹಂಚಿಕೊಳ್ಳಲಾಯಿತು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಆರೋಗ್ಯ ವಿಮೆ ಯೋಜನೆ, ಮೈಕ್ರೋ ಯೋಜನೆ ಸೇರಿದಂತೆ ಅನೇಕ ವಿಚಾರದ ಬಗ್ಗೆ ನೂತನ ಸಂಘ ಸದಸ್ಯರುಗಳಿಗೆ ಮಾಹಿತಿಯನ್ನು ನೀಡಲಾಯಿತು. ಸಂಘದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮುಖಂಡರು ಮನವಿಯನ್ನು ಮಾಡಿಕೊಂಡರು.