ಸುದ್ದಿಮೂಲ ವಾರ್ತೆ
ಬೆಂಗಳೂರು, ನ 22: ಉತ್ತರ ಜಿಲ್ಲೆಯ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಲ್ಲೇಶ್ವರಂನ ಬಿಇಒ ಕಚೇರಿಯಲ್ಲಿ ಡಿಜಿಟಲ್ ಕೌಶಲ್ಯ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಶಿಕ್ಷಣ ಫೌಂಡೇಶನ್, ಡೆಲ್ಲಿ ಟೆಕ್ನಾಲಜಿ,ಡಿ ಎಸ್ ಸಿ ಆರ್ ಟಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಿನನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಮತ್ತು ಜಾಗರೂಕತೆಯಿಂದ ಡಿಜಿಟಲ್ ಸಾಧನೆಗಳನ್ನು ಬಳಸಿ ತಿಳುವಳಿಕೆ ಬೋಧನೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಶಾಲೆ ಶಿಕ್ಷಕರಿಗೆ ಡಿಜಿಟಲ್ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ.
ಬೆಂಗಳೂರು ಜಿಲ್ಲೆಯ ಶಿಕ್ಷಕರಿಗೆ ಮಲ್ಲೇಶ್ವರಂನ ಬಿಇ ಒ ಕಚೇರಿಯಲ್ಲಿ ಡಿಜಿಟಲ್ ಕೌಶಲ್ಯಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು. ತರಬೇತಿಗೆ ಎಲ್ಲಾತಾಲೂಕಿನ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.
ತಾಲ್ಲೂಕು ಶಿಕ್ಷಣಾಧಿಕಾರಿಗಳಾದ ರಘು ಚಂದ್ರನ್ , ಶೈಲಜಾ, ಡಿಜಿಟಲ್ ತರಬೇತಿ ಕಾರ್ಯಕ್ರಮದ ನೋಡಲ್ ಆಫೀಸರ್ ಬಿ ಆರ್ ಪಿ ಪ್ರಕಾಶ್, ಸುಬ್ರಹ್ಮಣ್ಯ ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳು, ಶಿಕ್ಷಣ ಫೌಂಡೇಶನ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ನೇತ್ರ ಕಾರ್ಯಕ್ರಮದಲ್ಲಿದ್ದರು.