ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.08:
ಅಯುಷ್ಮಾಾನ್ ಯೋಜನೆಯಡಿ ಲಾನುಭವಿಗಳಿಗೆ ಚಿಕಿತ್ಸೆೆ ನೀಡುವ ಖಾಸಗಿ ಆಸ್ಪತ್ರೆೆಗಳ ಚಿಕಿತ್ಸಾಾ ವೆಚ್ಚ ಪರಿಷ್ಕರಿಸಲು ಹಣಕಾಸು ಇಲಾಖೆಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಅದರೆ, ಇನ್ನೂ ಅನುಮತಿ ಸಿಕ್ಕಿಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನ ಪರಿಷತ್ತಿಿನಲ್ಲಿ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಗಳಿಗೆ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಯಶಸ್ವಿಿನಿ ಮತ್ತು ಆರೋಗ್ಯ ಕರ್ನಾಟಕ ಯೊಜನೆಗಳಿಗೆ ಹೆಲ್ತ್ ಪ್ರಮೋಷನ್ ಬೋರ್ಡ್ ಅನ್ವಯ ದರ ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆೆಗಳಿಗೆ ಈಗ ನೀಡುತ್ತಿಿರುವ ದರ ಸುಮಾರು 10 ವರ್ಷಗಳ ಹಿಂದೆ ನಿಗದಿಯಾಗಿದ್ದು. ಈಗಿನ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ದರ ನಿಗದಿಯಾಗಬೇಕು ಎಂಬ ಕಾಳಜಿ ನಮಗೂ ಇದೆ ಎಂದು ಹೇಳಿದರು.
ಒಟ್ಟು 1.43 ಕೋಟಿ ಕುಟುಂಬಗಳಿಗೆ ಆಯುಷ್ಮಾಾನ್ ಭಾರತ್-ಅರೋಗ್ಯ ಕರ್ನಾಟಕ (ಎಬಿ ಆರ್ಕೆ) ಯೊಜನೆಯಡಿ ಸವಲತ್ತು ನೀಡಲಾಗುತ್ತದೆ. ಕೇಂದ್ರ ಸರ್ಕಾರ 69 ಲಕ್ಷ ಕುಟುಂಬಗಳಿಗೆ ಮಾತ್ರ ಸಹಾಯಧನ ನೀಡುತ್ತದೆ. ಸರಾಸರಿ ಎರಡು ಸಾವಿರ ಖರ್ಚು ಮಾಡಿದರೆ ಕೇಂದ್ರ ಒಂದು ಸಾವಿರ ನೀಡುತ್ತದೆ.
ನಾವು ಒಟ್ಟು 1800 ಕೋಟಿ ಖರ್ಚು ಮಾಡುತ್ತೇವೆ. ಕೆಂದ್ರ ಸರ್ಕಾರ ಕೇವಲ 450 ಕೋಟಿ ಮಾತ್ರ ಕೊಡುತ್ತದೆ. ಅಂದರೆ ಶೇ.75 ರಾಜ್ಯ ಸರ್ಕಾರದ ಪಾಲು ಇದೆ. ಒಂದೊಮ್ಮೆೆ ದರ ಹೆಚ್ಚಳ ಮಾಡಿದರೆ ರಾಜ್ಯ ಸರ್ಕಾರದ ಪಾಲು ಶೇ.90ಕ್ಕೆೆ ಏರಿಕೆಯಾದಂತಾಗುತ್ತದೆ ಎಂದು ಹೇಳಿದರು.
ದೇಶದ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆೆ ಹೆಚ್ಚಿಿನ ಅನುದಾನ ನೀಡುವಂತೆ ಒತ್ತಾಾಯ ಮಾಡುತ್ತಿಿವೆ. ಏನೇ ಇರಲಿ ನಾನು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರ ಕೊಡದೇ ಇದ್ದರೂ ಈ ಸಮಸ್ಯೆೆಗೆ ಒಂದು ಪರಿಹಾರ ನಾವೇ ಮಾಡಬೇಕು ಎನ್ನುವ ಕಾರಣಕ್ಕೆೆ. ಅರ್ಹ ಕಡುಬಡವರಿಗೆ ಅನುಕೂಲ ಆಗಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.
ಆಸ್ಪತ್ರೆೆಗಳ ಒತ್ತಡ ಕಡಿಮೆ:
ವಿಕ್ಟೋೋರಿಯಾ, ಬೌರಿಂಗ್, ಮತ್ತು ಕೆ ಸಿ ಜನರಲ್ ಮುಂತಾದ ಆಸ್ಪತ್ರೆೆಗಳಲ್ಲಿ ರೋಗಿಗಳು ಹೆಚ್ಚಿಿನ ಸಮಯ ಕಾಯದಂತೆ ಕಾಳಜಿ ವಹಿಸಲಾಗುತ್ತಿಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಚ್.ಎಸ್. ಗೋಪಿನಾಥ್ ಅವರ ಮತ್ತೊೊಂದು ಪ್ರಶ್ನೆೆಗೆ ಉತ್ತರಿಸಿದರು.
ಕೆಸಿ ಜನರಲ್ ಆಸ್ಪತ್ರೆೆಯಲ್ಲಿ ಕ್ಯೂಆರ್ ಕೊಡ್ ಮುಖಾಂತರ ಚೀಟಿನೀಡಿ ಕಾಯುವಿಕೆಯ ಸಮಯ ಕಡಿಮೆ ಮಾಡಲಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಾಲಯ ಮತ್ತು ಸಂಶೋಧನಾ ಸಂಸ್ಥೆೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಕ್ಟೊೊರಿಯಾ ಆಸ್ಪತ್ರೆೆಗೆ ಆಂಧ್ರ, ತಮಿಳನಾಡು ರಾಜ್ಯಗಳಿಂದಲೂ ರೋಗಿಗಳು ಬರುವುದರಿಂದ ಸೂಕ್ತ ಕ್ರಮ ವಹಿಸಲಾಗಿದ್ದು, ಪ್ರಸ್ತುತ ವಿಕ್ಟೊೊರಿಯಾ ಆಸ್ಪತ್ರೆೆಯಲ್ಲಿ ದೀರ್ಘ ಕಾಯುವಿಕೆ ಇರುವುದಿಲ್ಲ. ಬೌರಿಂಗ್ ಮತ್ತು ಲೆಡಿ ಕರ್ಜನ್, ಘೋಷಾ ಆಸ್ಪತ್ರೆೆ, ಶಿವಾಜಿನಗರದ ಚರಕ ಆಸ್ಪತ್ರೆೆಗಳಲ್ಲಿ ಯಾವುದೇ ಸಮಸ್ಯೆೆ ಇಲ್ಲದೇ ಚಿಕಿತ್ಸೆೆ ದೊರಕುತ್ತಿಿದೆ.
ವಿಕ್ಟೊೊರಿಯಾ ಆಸ್ಪತ್ರಯಲ್ಲಿ ಗುತ್ತಿಿಗೆ ಆಧಾರದಲ್ಲಿ ವೈದ್ಯರು ಮತ್ತು ಪ್ಯಾಾರಾ ಮೆಡಿಕಲ್ ಸಿಬ್ಬಂದಿ ನೇಮಕ ಮಾಡಿ ಸೇವೆ ಪಡೆಯಲಾಗುತ್ತಿಿದೆ.
ಬೌರಿಂಗ್ ಆಸ್ಪತ್ರೆೆಯಲ್ಲಿ ವೈದ್ಯರು ಮತ್ತು ಪ್ಯಾಾರಾ ಮೆಡಿಕಲ್ ಸಿಬ್ಬಂದಿ ಕೊರತೆ ಇರುವುದಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಅಸಾಂಕ್ರಾಾಮಿಕ ರೋಗಗಳ ಕಾರ್ಯಕ್ರಮದಲ್ಲಿ 09 ಆಸ್ಪತ್ರೆೆಗಳಲ್ಲಿ ಪ್ರತ್ಯೇಕ ಎನ್ ಸಿ ಡಿ ಘಟಕ ಸ್ಥಾಾಪಿಸಲಾಗಿದೆ. ಬೆಂಗಳೂರು ನಗರದ ಎಲ್ಲ ಪ್ರಾಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಾಮಿಕ ರೊಗ ತಪಸಣೆ ನಡೆಯುತ್ತದೆ.
ಆರೋಗ್ಯ ಯೋಜನೆಗಳಿಗೆ ಕೇಂದ್ರ ಅನುದಾನ ಅತ್ಯಲ್ಪ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರ ನೀಡಲು ಪ್ರಯತ್ನ : ದಿನೇಶ್ ಗುಂಡೂರಾವ್

