ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.22:
ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ಎಂದು ಜಿಲ್ಲಾಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾಾರೆ.
ನೂತನ ಜಿಲ್ಲಾಾಡಳಿತ ಭವನದ ಜಿಲ್ಲಾಾಧಿಕಾರಿಯವರ ಕಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಾಧಿಕಾರ ಮತ್ತು ಜಿಲ್ಲಾಾ ವಿಪತ್ತು ನಿರ್ವಹಣಾ ಪ್ರಾಾಧಿಕಾರ ಜಿಲ್ಲೆೆಯಲ್ಲಿ ಜನವರಿ 19 ರಿಂದ 24 ರವರೆಗೆ ಹಮ್ಮಿಿಕೊಂಡಿರುವ ಸಮುದಾಯ ಜಾಗೃತಿ ಪ್ರದರ್ಶನಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.
ಜಿಲ್ಲೆೆಯಲ್ಲಿ ಪ್ರವಾಹ ಜೊತೆಗೆ ಇತರೆ ವಿಪತ್ತುಗಳ ಬಗ್ಗೆೆ ಸಹ ಅರಿವು ಮೂಡಿಸುವುದು ಅವಶ್ಯವಿದೆ. ಜಿಲ್ಲೆೆಯಲ್ಲಿ ಸಂಭವಿಸಬಹುದಾದಂತಹ ಅಪಾಯಗಳನ್ನು ಗುರುತಿಸಿ, ಅವುಗಳಿಂದಾಗುವ ವಿಪತ್ತುಗಳನ್ನು ತಪ್ಪಿಿಸಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಸಮುದಾಯಗಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾಾರಿಸ್ ಸುಮೇರ್ ಅವರು, ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವು ಮುಖ್ಯ ಎಂದರು.
ಅಪರ ಜಿಲ್ಲಾಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು, ಜಿಲ್ಲೆೆಯಲ್ಲಿ ವಿಪತ್ತುಗಳು ಸಂಭವಿಸಿದಾಗ ಅತಿ ಅವಶ್ಯವಿರುವ 2040 ಸಾಮಾಗ್ರಿಿಗಳ ಪಟ್ಟಿಿ ಐಡಿಆರ್ಎನ್ ತಂತ್ರಾಾಂಶದಲ್ಲಿ ಕ್ರೋೋಢಿಕರಿಸಲಾಗಿದ್ದು, ಅವಶ್ಯವಿರುವಾಗ ಅತಿಶೀಘ್ರವಾಗಿ ಬಳಸಿಕೊಳ್ಳಲು ಅನುಕೂಲವಾಗಲಿವೆ ಎಂದರು.
ಜಿಲ್ಲಾಾ ವಿಪತ್ತು ನಿರ್ವಹಣಾ ಪರಿಣಿತ ಪರಮೇಶ ಅವರು, ಜಿಲ್ಲೆೆಯಲ್ಲಿ ಪ್ರವಾಹಕ್ಕೆೆ ತುತ್ತಾಾಗಬಹುದಾದ ಗ್ರಾಾಮಗಳನ್ನು ಗುರುತಿಸಲಾಗಿದೆ. ವಿವಿಧ ವಿಪತ್ತುಗಳ ಬಗ್ಗೆೆ ಅರಿವು ಮೂಡಿಸಿ, ವಿಪತ್ತು ಸಂಭವಿಸಿದಾಗ ಸನ್ನದ್ಧಗೊಳಿಸಲು ಬೇಕಾದ ಕೌಶಲ್ಯಗಳನ್ನು ಎನ್ಡಿಆರ್ಎ್ ತಂಡಗಳು ಅಣಕು ಪ್ರದರ್ಶನದ ಮೂಲಕ ಅಭ್ಯಾಾಸ ಮಾಡಿಸುವರು ಎಂದು ಸಭೆಗೆ ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಾಧಿಕಾರದ ಬೆಟಾಲಿಯನ್-10 ಇನ್ಸ್ಪೆಕ್ಟರ್ ಅಜಯಕುಮಾರ್ ಅವರು ಮಾತನಾಡಿ, ಎನ್ಡಿಆರ್ಎ್ ತಂಡದ ಸದಸ್ಯರು, ಸಂಭವಿಸಬಹುದಾದಂತಹ ವಿವಿಧ ವಿಪತ್ತುಗಳ (ಪ್ರವಾಹ, ಭೂಕಂಪ, ಸಿಡಿಲು, ಸೈಕ್ಲೋೋನ್ ಮತ್ತು ಬರಗಾಲ ಇತ್ಯಾಾದಿ) ಬಗ್ಗೆೆ ಅರಿವು ಮೂಡಿಸುವುದು. ವಿಪತ್ತುಗಳು ಸಂಭವಿಸಿದಾಗ ಸನ್ನದ್ಧಗೊಳಿಸಲು ಕೌಶಲ್ಯಗಳನ್ನು ಅಣಕು ಪ್ರದರ್ಶನ ಮೂಲಕ ಅಭ್ಯಾಾಸ ಮಾಡಿಸುವರು ಹಾಗೂ ಪೂರ್ವದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆೆ ಮತ್ತು ಸಿಪಿಆರ್ ವಿಧಾನಗಳು ತಿಳಿಸಲಿದ್ದಾಾರೆ ಎಂದು ಹೇಳಿದರು.
ವಿಪತ್ತು ನಿರ್ವಹಣೆ : ಸಮುದಾಯಗಳಲ್ಲಿ ಜಾಗೃತಿ ಅಗತ್ಯ- ಡಿ.ಸಿ

