ಸುದ್ದಿಮೂಲವಾರ್ತೆ
ಕೊಪ್ಪಳ ಜು 18: ನಗರಸಭೆ ನವೀಕರಣದಲ್ಲಿ ನಿಯಮ ಪಾಲಿಸದ ಸಿಬ್ಬಂದಿಯ ಮೇಲೆ ಕ್ರಮ ವಹಿಸಿ ವರದಿ ನೀಡದ ಹಿನ್ನೆಲೆ, ಕೊಪ್ಪಳ ನಗರಸಭೆಯ ಪೌರಾಯುಕ್ತರ ವಿರುದ್ದ ಶಿಸ್ತು ಕ್ರಮಕ್ಕೆ ನಗರಾಭಿವೃದ್ದಿ ಕೋಶದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಪ್ಪಳ ನಗರಾಭಿವೃದ್ದಿ ಕೋಶದಿಂದನಗರಸಭೆ ಪೌರಾಯುಕ್ತ ಹೆಚ್ ಎನ್ ಭಜಕ್ಕನವರ ವಿರುದ್ದ ಶಿಸ್ತು ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕೊಪ್ಪಳ ನಗರಸಭೆಯ ನವೀಕರಣದ ಕಾಮಗಾರಿ ಸ್ಥಗಿತಗೊಳಿಸಿ. ನಗರಸಭೆಭೆಯ ನವೀಕರಣಕ್ಕಾಗಿ
ಒಟ್ಟು 2.50 ಕೋಟಿ ರೂಪಾಯಿ ಕಾಮಗಾರಿ ನಡೆಸಲಾಗುತ್ತಿತ್ತು. ಇಲ್ಲಿ ನಿಯಮ ಪಾಲನೆಯಾಗಿಲ್ಲ. ಕಾಮಗಾರಿ ಸ್ಥಗಿತಗೊಳಿಸಿ ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತು. ಆದರೂ ನಗರಸಭೆ ಪೌರಾಯುಕ್ತರು ವರದಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಎಂಬುವವರು ಇಲ್ಲಿ ನಗರಸಭೆಯು ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ಮಾಡುತ್ತಿದ್ದಾರೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿವೆ ಅವುಗಳನ್ನು ನಿರ್ಲಕ್ಷಿಸಿ ಕಾಮಗಾರಿ ಮಾಡುತ್ತಿದ್ದಾರೆ. ಈ ಕುರಿತು ಹಳ್ಳಿ ನಗರಾಭಿವೃದ್ಧಿ ಕೋಶಕ್ಕೆ ದೂರು ನೀಡಿದ್ದರು.
ಈಗಲಾದರೂ ಪೌರಾಯುಕ್ತರು ನಗರಾಭಿವೃದ್ದಿ ಕೋಶ ವರದಿ ನೀಡಿ ಶಿಸ್ತು ಕ್ರಮದಿಂದ ಪಾರಾಗುತ್ತಾರಾ ಕಾದು ನೋಡಬೇಕು.