ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.26:
ಕಳೆದ ಮೂರು ತಿಂಗಳಿಂದ ವಿದ್ಯುತ್ ಬಿಲ್ ಹಣ ಪಾವತಿಸದ ಹಿನ್ನೆೆಲೆ
ಕೊಪ್ಪಳ ಮುನಿರಾಬಾದ್ ವಲಯ ಅರಣ್ಯಾಾಧಿಕಾರಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ನಡೆದಿದೆ.
ವಿದ್ಯುತ್ ಕಡಿತವಾಗಿರುವ ಕತ್ತಲೆಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿಿದ್ದಾಾರೆ. ಅರಣ್ಯ ಇಲಾಖೆಯು ಜೆಸ್ಕಾಾಂ ವಿದ್ಯುತ್ ಬಿಲ್ ಪಾವತಿಸದೆ ನಿರ್ಲಕ್ಷ್ಯ ವಹಿಸಿದೆ. ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ದೆೆ ಇಲಾಖೆ ಸಿಬ್ಬಂದಿ ಪರದಾಡುತ್ತಿಿದ್ದಾಾರೆ. ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಇರುವ ಮಾಹಿತಿ ಲಭ್ಯವಾಗಿದೆ. ಬಿಲ್ ಪಾವತಿಸಲು ಅಸಡ್ಡೆೆ ತೋರಿದ್ದಕ್ಕೆೆ ಜೆಸ್ಕಾಾಂ ಸಿಬ್ಬಂದಿ ಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾಾರೆ.
ವಿದ್ಯುತ್ ಸಂಪರ್ಕ ಇಲ್ಲದ ಕಚೇರಿ ಕೆಲಸಗಳು ಸ್ಥಗಿತವಾಗಿದೆ. ವಿದ್ಯುತ್ ಇಲ್ದೆೆ ಕಂಪ್ಯೂೂಟರ್ ಕೆಲಸಗಳು ನಿಂತಿವೆ. ಈ ಕುರಿತು ಪ್ರತಿಕ್ರಿಿಯೆ ನೀಡಲು ಇಲಾಖೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿಿದ್ದಾಾರೆ. ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲ. ವಿದ್ಯುತ್ ಬಿಲ್ ಪಾವತಿ ಸೇರಿದಂತೆ ವಿವಿಧ ಕಡತಗಳು ಬಾಕಿಯಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಚೇರಿ ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಕಡಿತ

