ಸುದ್ದಿಮೂಲ ವಾರ್ತೆ ಸಿಂಧನೂರು, ೆ.10:
ಪೊತ್ನಾಾಳ ಹತ್ತಿಿರ ತಾಲ್ಲೂಕಿನ ಬಳಗಾನೂರು ಕ್ರಾಾಸ್ನಲ್ಲಿ ಅಳವಡಿಸಲಾಗಿರುವ ಸಂವಿಧಾನ ಶಿಲ್ಪಿಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಲಕಕ್ಕೆೆ ಅಡ್ಡವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿ, ಕೆಇಬಿ ಅಧಿಕಾರಿಗಳು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾಾರೆ ಎಂದು ದಲಿತ ಮುಖಂಡ ಬಿ.ತಿಕ್ಕಯ್ಯ ಆರೋಪಿಸಿದರು.
ಮಂಗಳವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿನಡೆಸಿ ಮಾತನಾಡಿದರು. ಬಳಗಾನೂರು ಕ್ರಾಾಸ್ ಬಳಿ ದಶಕದ ಹಿಂದೆ ದಲಿತ, ಪ್ರಗತಿಪರ, ರೈತ ಸಂಘಟನೆ ಮುಖಂಡರು ಸಂವಿಧಾನ ಶಿಲ್ಪಿಿ ಬಾಬಾಸಾಹೇಬರ ಭಾವಚಿತ್ರವುಳ್ಳ ನಾಮಲಕ ಅಳವಡಿಸಿ, ಅನೇಕ ಕಾಯಕ್ರಮಗಳನ್ನು ಅದೇ ಜಾಗದಲ್ಲಿ ನಡೆಸಲಾಗಿದೆ. ಆದರೀಗ ಕೆಇಬಿ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆೆ ಮಣಿದು, ಸರ್ಕಾರಿ ಭೂಮಿ ಕಬಳಿಕೆಗೆ ಮುಂದಾಗಿರುವ ಕೆಲವರ ಮಾತಿನಂತೆ ನಾಮಲಕ ತೆರವು ಮಾಡಿ ಅದೇ ಜಾಗದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಅವಮಾನ ಮಾಡುತ್ತಿಿದ್ದಾಾರೆ ಎಂದು ಆಪಾದಿಸಿದರು.
ವಿದ್ಯುತ್ ಕಂಬಗಳ ಅಳವಡಿಕೆ ಮುನ್ನವೇ ಕೆಇಬಿ ಅಧಿಕಾರಿಗಳಿಗೆ ಕಂಬಗಳನ್ನು ಅಳವಡಿಸಿದಂತೆ ಮನವಿ ಮಾಡಲಾಗಿತ್ತು. ಆದರೆ ದಿಢೀರ್ ರಾತ್ರೋೋರಾತ್ರಿಿ ಅಧಿಕಾರಿಗಳು ಈ ಕೆಲಸಕ್ಕೆೆ ಮುಂದಾಗಿದ್ದು, ದಲಿತ ಮುಖಂಡರ ಆಕ್ರೋೋಶಕ್ಕೆೆ ಕಾರಣವಾಗಿದೆ. ವಾರದೊಳಗೆ ನಾಮಲಕದ ಜಾಗದಲ್ಲಿ ಹಾಕಲಾಗಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಡಾ.ರಾಮಣ್ಣ ಗೋನವಾರ, ಮೌನೇಶ ಜಾಲವಾಡಗಿ, ಶರಣಬಸವ ಮಲ್ಲಾಾಪುರ, ಮೌನೇಶ ದಿದ್ದಗಿ, ಕರಿಯಪ್ಪ ರಾಮತ್ನಾಾಳ, ಆಲಂಭಾಷಾ ಬೂದಿವಾಳಕ್ಯಾಾಂಪ್, ಹುಸೇನಪ್ಪ ರಾಗಲಪರ್ವಿ ಇದ್ದರು.
ಡಾ.ಬಿ.ಆರ್.ಅಂಬೇಡ್ಕರ್ ನಾಮಲಕಕ್ಕೆ ಅವಮಾನ : ಬಿ.ತಿಕ್ಕಯ್ಯ

