ಸಿರವಾರ: ಏ.೮ ಮಾನ್ವಿ ಕ್ಷೇತ್ರಕ್ಕೆ ವಲಸೆಬಂದಿರುವ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಸ್ಪರ್ಧೆಯಲ್ಲಿ ತಕ್ಕ ಪಾಠಕಲಿಸಲಾಗುವದು ಎಂದು ಮಾನ್ವಿ ಕ್ಷೇತ್ರದ ಮಾಜಿ ಶಾಸಕರಾದ ಹಂಪಯ್ಯ ನಾಯಕ್ ಹೇಳಿದರು.
ಅವರಿಂದು ಸಿರವಾರ ತಾಲೂಕಿನ ಜಾಲಾಪುರ ಕ್ಯಾಂಪ್ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಸ್ಥಳೀಯರಿಗೆ ನೀಡಬೇಕು, ಪಕ್ಷ ಸಂಘಟನೆಯ ಮಾಡಿದ ಮುಖಂಡರಿಗೆ, ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ, ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಮರೇಶಪ್ಪ ಬಲ್ಲಟಿಗಿ, ಶರಣಪ್ಪ ನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ್, ರಾಜಾ ವಸಂತ ನಾಯಕ, ಕಿರಿಲಿಂಗಪ್ಪ, ಗಂಗಣ್ಣನಾಯಕ, ಚಂದ್ರಶೇಖರ ಕುರ್ಡಿ, ದಾನನಗೌಡ, ಸೇರಿದಂತೆ ಅನೇಕರು ಇದ್ದರು.