ಸುದ್ದಿಮೂಲ ವಾರ್ತೆ ಸಿರವಾರ, ಡಿ.24:
ಕ್ರಿಿಸ್ಮಸ್ ಹಬ್ಬದ ಅಂಗವಾಗಿ ಪಟ್ಟಣದ ಮೆಥೋಡಿಸ್ಟ್ ಚರ್ಚ್ ಹಾಗೂ ಹೋಲಿ ಕ್ರಾಾಸ್ ಚರ್ಚ್ಗಳಿಗೆ ಮಾನ್ವಿಿ ಶಾಸಕ ಹಂಪಯ್ಯನಾಯಕ, ಕಾಂಗ್ರೆೆಸ್ ಯುವ ಮುಖಂಡ ರವಿ ಭೋಸರಾಜು ಭೇಟಿನೀಡಿದರು ಅವರು ಚರ್ಚ್ ಾದರ್ ಅವರಿಗೆ ಕೇಕ್ ನೀಡಿ ಸನ್ಮಾಾನಿಸಿ ಹಬ್ಬದ ಶುಭಾಶಯಗಳು ಕೋರಿದರು.
ನಂತರ ಶಾಸಕ ಹಂಪಯ್ಯ ನಾಯಕ ಹಾಗೂ ರವಿ ಭೋಸರಾಜು ಮಾತನಾಡಿ ಕ್ರೈಸ್ತ ಧರ್ಮ ಜನಾಂಗಕ್ಕೆೆ ಅನುಕೂಲವಾಗಲೆಂದು ಸಮುದಾಯ ಭವನ, ರಕ್ಷಣೆ ಗೋಡೆಯ ನಿರ್ಮಾಣಕ್ಕೆೆ ಅನುದಾನ ನೀಡಲಾಗಿದೆ, ಎಲ್ಲರಿಗೂ ಶಾಂತಿ ಬಯಸುವ, ಒಳ್ಳೆೆಯ ಕಾರ್ಯಗಳನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರೆ.ಸುಂದರರಾಜ್, ಏಸುರಾಜಪ್ಪ, ಪ.ಪಂ. ಅಧ್ಯಕ್ಷ ವೈ.ಭೂಪನಗೌಡ, ಚುಕ್ಕಿಿ ಶಿವಕುಮಾರ್, ಬಸವರಾಜ ಪಾಟೀಲ ಅತ್ತನೂರು, ಶಿವಶರಣರ ಸಾಹುಕಾರ್ ಅರಕೇರಿ, ಪಟ್ಟಣ ಪಂಚಾಯತಿ ಸದಸ್ಯರು, ಕಾಂಗ್ರೆೆಸ್ ಪಕ್ಷದ ಮುಖಂಡರು, ಸಮಾಜದ ಮುಖಂಡರು ಭಾಗವಹಿಸಿದ್ದರು.
ಕಿಟ್ ವಿತರಣೆ: ಕ್ರಿಿಸ್ಮಸ್ ಹಬ್ಬದ ಅಂಗವಾಗಿ ಪ.ಪಂ.ಮಾಜಿ ಉಪಾಧ್ಯಕ್ಷ ಹನುಮಂತಿ ಮಲ್ಲಪ್ಪ, ಸವಾರೆಪ್ಪ ಕುಟುಂಬದಿಂದ ಕ್ರೈಸ್ತ ಸಮಾಜದ ಬಡ ಮಹಿಳೆಯರಿಗೆ ಸೀರೆ, ಆಹಾರದ ಕಿಟ್ ಮೆಥೊಡ್ಟ್ಿ ಚರ್ಚ್ ನಲ್ಲಿ ಾಧರ್ ಅವರಿಂದ ವಿತರಣೆ ಮಾಡಲಾಯಿತು.
ಶಾಸಕ ಹಂಪಯ್ಯನಾಯಕ, ರವಿ ಭೋಸರಾಜುರಿಂದ ಕ್ರಿಸ್ಮಸ್ ಕೇಕ್ ವಿತರಣೆ

