ಸುದ್ದಿಮೂಲ ವಾರ್ತೆ ಸಿರವಾರ, ೆ.20:
ತಾಲೂಕಿನ ಮಲ್ಲಟ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ, ಮಕ್ಕಳು ಕುಳಿತುಕೊಳ್ಳುವ 45 ಡೆಸ್ಕ್ ಗಳನ್ನು ಗುರುವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಾಣ್ ವಿತರಣೆ ಮಾಡಿದರು.
ನಂತರ ಮಾತನಾಡಿ ಪ್ರಧಾನ ಮಂತ್ರಿಿ ಕೃಷಿ ಸಿಂಚನ ಯೋಜನೆ ಅಡಿಯಲ್ಲಿ ಪ್ರಾಾಯೋಗಿಕ ಕ್ಷೇತ್ರದ ವ್ಯಾಾಪ್ತಿಿಯಲ್ಲಿ ಬರುವ ಕಾರಣದಿಂದ ಈ ಶಾಲೆಯನ್ನು ಆಯ್ಕೆೆ ಮಾಡಲಾಗಿದೆ. ವಿದ್ಯಾಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಧನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾನ್ವಿಿ ಸಹಾಯಕ ನಿರ್ದೇಶಕ ಗುರುನಾಥ ರಡ್ಡಿಿ ಭೂಸನೂರ, ರೈತರ ಸಂಪರ್ಕ ಕೇಂದ್ರದ ಅಧಿಕಾರಿ ಮಾರುತಿ ನಾಯಕ, ಶಾಲೆಯ ಮುಖ್ಯಗುರು ಹಾಗೂ ಸಹ ಶಿಕ್ಷಕರು, ವಿದ್ಯಾಾರ್ಥಿಗಳು, ರೈತರ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ ಇದ್ದರು.
ಭೇಟಿ : ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ ಚವ್ಹಾಾಣ್ ಹಾಗೂ ಎಡಿ ಗುರುನಾಥ ರಡ್ಡಿಿ ಭೂಸನೂರ ಗುರುವಾರ ರೈತ ಸಂಪರ್ಕ ಕೇಂದ್ರಕ್ಕೆೆ ಹಾಗೂ ಕಲ್ಲಂಗೇರಿ ಗ್ರಾಾಮದ ರೈತರ ಹೊಲ ಗದ್ದೆಗಳಿಗೆ ಭೇಟಿ ನೀಡಿ ಹಿಂಗಾರು ಬೆಳೆಗಳನ್ನು ವೀಕ್ಷಣೆ ಮಾಡಿದರು.
ಮಲ್ಲಟ ಶಾಲೆಗೆ ಕೃಷಿ ಇಲಾಖೆಯಿಂದ ಡೆಸ್ಕ್ಗಳ ವಿತರಣೆ

