ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ವಿದ್ಯಾಾರ್ಥಿಗಳು ಸಂಚಾರ ನಿಯಮಗಳ ಪಾಲಿಸಿ ಹೆಲ್ಮೆೆಟ್ ಧರಿಸುವುದರಿಂದ ಆಗುವ ಲಾಭಗಳ ಬಗ್ಗೆೆ ಅಕ್ಕ ಪಕ್ಕದವರಿಗೂ ತಿಳಿಸಬೇಕು ಎಂದು ಜಿಲ್ಲಾಾಧಿಕಾರಿ ಕೆ.ನಿತೀಶ್ ಹೇಳಿದರು.
ಶನಿವಾರ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀೆಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ರಾಯಚೂರು, ರಾಷ್ಟ್ರೀಯ ಹೆದ್ದಾಾರಿ ಪ್ರಾಾಧಿಕಾರ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಸಂಯುಕ್ತಾಾಶ್ರಯದಲ್ಲಿ ರಾಷ್ಟ್ರೀಯ ರಸ್ತೆೆ ಸುರಕ್ಷತಾ ಮಾಸದ ಅಂಗವಾಗಿ ವಿವಿಧ ಕಾಲೇಜಿನ ವಿದ್ಯಾಾರ್ಥಿಗಳಿಗೆ ಉಚಿತವಾಗಿ ಹೆಲ್ಮೆೆಟ್ ವಿತರಿಸಿ ಮಾತನಾಡಿದರು. ಹೆಲ್ಮೆೆಟ್ ಧರಿಸದೇ ತಲೆಗೆ ಪೆಟ್ಟು ಬಿದ್ದು ಜೀವ ಕಳೆದುಕೊಂಡ ಹೆಚ್ಚಿಿನ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿವೆ. ಜೀವ ರಕ್ಷಣೆ ಮತ್ತು ಕುಟುಂಬದ ಭದ್ರತೆಗೆ ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಿ ಸಂಚಾರ ನಿಯಮ ಪಾಲನೆ ಮಾಡಬೇಕು. ನಗರದಲ್ಲಿ ಹೆದ್ದಾರಿ ಹಾದು ಹೋಗಿದ್ದರಿಂದ ಲಾರಿ, ಟಿಪ್ಪರ್, ದೊಡ್ಡ ಪ್ರಮಾಣದ ಬಾರಿ ವಾಹನಗಳ ಸಂಚಾರವಿದ್ದು ಸಂಚಾರ ನಿಯಮ ಪಾಲಿಸದಿರುವುದರಿಂದ ಅಪಘಾತದಲ್ಲಿ ಸಾವುಗಳಾಗುತ್ತಿಿವೆ ಎಂದರು.
ನಗರದಲ್ಲಿ ಭಾರಿ ವಾಹನಗಳ ಸಂಚಾರ ತಡೆಗಾಗಿ ನಗರದ ಹೊರಗಡೆ ರಿಂಗ್ ರಸ್ತೆೆಗೆ ಈಗಾಗಲೆ ಟೆಂಡರ್ ಕರೆಯಲಾಗಿದ್ದು, ತ್ವರಿತವಾಗಿ ಕೈಗೊಳ್ಳಲಾಗುತ್ತದೆ. ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಹಿರಿಯ ಶ್ರೇೇಣಿಯ ದಿವಾಣಿ ನ್ಯಾಾಯಾಧೀಶ ಹೆಚ್.ಎ.ಸಾತ್ವಿಿಕ್ ಮಾತನಾಡಿ, ಅಪಘಾತದಲ್ಲಿ ವಾಹನ ಚಾಲನೆ ಪರವಾನಗಿ ಇಲ್ಲದೆ ಸಾವಿನ್ನಪ್ಪಿಿದರೆ ದೊಡ್ಡ ಪ್ರಮಾಣದ ದಂಡದ ಜೊತೆಗೆ ಕ್ರಿಿಮಿನಲ್ ಪ್ರಕರಣ ದಾಖಲಾಗುತ್ತದೆ. ದೂರು ದಾಖಲಾದರೆ ವಿದ್ಯಾಾಭ್ಯಾಾಸ ಮತ್ತು ಉದ್ಯೋೋಗಕ್ಕೆೆ ತೊಂದರೆ ಉಂಟಾಗುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಾಧಿಕಾರದಿಂದ 500 ಹೆಲ್ಮೆೆಟ್ ವಿತರಣೆ ಮಾಡುತ್ತಿಿದ್ದು, ಹೆಲ್ಮೆೆಟ್ ಪಡೆದವರು ಕಡ್ಡಾಾಯವಾಗಿ ಧರಿಸಬೇಕು. ಹೆಲ್ಮೆೆಟ್ ಪಡೆದವರ ಹೆಸರು ಮತ್ತು ವಿಳಾಸ ನಮೂದಿಸಿಕೊಂಡಿದ್ದು ಹೆಲ್ಮೆೆಟ್ ಇಲ್ಲದೆ ಸಂಚಾರ ಮಾಡಿದರೆ ಹೆಚ್ಚುವರಿ ದಂಡ ವಿಧಿಸುವುದಾಗಿ ಎಚ್ಚರಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೊಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಗ್ಷು ಗಿರಿ, ಹೆದ್ದಾರಿ ಪ್ರಾಾಧಿಕಾರದ ಯೋಜನಾ ನಿರ್ದೇಶಕ ಭಾವನೇಶ ಕುಮಾರ ಗುಪ್ತಾಾ, ಡಿಎಸ್ಪಿ ಶಾಂತವೀರ, ಕುಲಸಚಿವ ಗುರುರಾಜ ಬಿರಾದಾರ, ಸಿಓಎಲ್ ಯೋಜನಾ ನಿರ್ದೇಶಕ ಎಮ್.ಡಿ. ಯೂಸ್ೂ ಸೇರಿದಂತೆ ಅನೇಕರಿದ್ದರು.
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಹೆಲ್ಮೆಟ್ ವಿತರಣೆ ವಿದ್ಯಾರ್ಥಿಗಳು ಸಂಚಾರ ನಿಯಮ ಪಾಲಿಸಿ, ತಿಳಿಸಿ – ಕೆ.ನಿತೀಶ್

