ಸುದ್ದಿಮೂಲ ವಾರ್ತೆ ಮಾನ್ವಿ, ಜ.05:
ಜನವರಿ 9 ರಂದು ಮಾನ್ವಿಿ ಎಪಿಎಂಸಿ ಹಮಾಲರಿಗೆ ಸಚಿವ ಎನ್.ಎಸ್.ಬೋಸರಾಜು ಇವರಿಂದ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಎಐಟಿಯುಸಿ ಸಂಯೋಜಿತ ಶ್ರೀ ಉದ್ಬವ ಆಂಜನೇಯ ಎಪಿಎಂಸಿ ಹಮಾಲರ ಸಂಘದ ಕಾರ್ಯಾಧ್ಯಕ್ಷ ಎಂ.ಬಿ.ಸಿದ್ರಾಾಮಯ್ಯಸ್ವಾಾಮಿ ತಿಳಿಸಿದರು.
ಸೋಮವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾನ್ವಿಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆೆ ಸಮಿತಿಯ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿಿರುವ ಹಮಾಲಿ ಕಾರ್ಮಿಕರಿಗೆ ಸ್ವಂತ ಮನೆ ಇರಲಿ ಎನ್ನುವ ಉದ್ದೇಶದಿಂದ 2004-05 ನೇ ಸಾಲಿನಲ್ಲಿ ಅಂದಿನ ಎಪಿಎಂಸಿ ಅಧ್ಯಕ್ಷರಾಗಿದ್ದ ಹಾಲಿ ಶಾಸಕ ಹಂಪಯ್ಯ ನಾಯಕ ಅವರು ಪಟ್ಟಣದ ಮುಸ್ಟೂರು ರಸ್ತೆೆಯಲ್ಲಿ ಎಪಿಎಂಸಿ ಹಮಾಲರಿಗಾಗಿ ನಿವೇಶನ ಕಲ್ಪಿಿಸುವುದಕ್ಕಾಾಗಿ 2 ಎಕರೆ 25 ಗುಂಟೆ ಜಾಗ ಖರೀದಿಸಿ ನಿವೇಶನ ನಿಗದಿ ಮಾಡಿದ್ದರೂ ಹಕ್ಕು ಪತ್ರ ನೀಡುವಲ್ಲಿ ಕೆಲವು ಕಾರಣಾಂತರಗಳಿಂದ ವಿಳಂಬವಾಗಿತ್ತು.
ಈ ಕುರಿತು ಶಾಸಕ ಹಂಪಯ್ಯ ನಾಯಕ, ಸಚಿವ ಎನ್.ಎಸ್.ಬೋಸರಾಜು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆೆ ಸಮಿತಿಯ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ ನಂತರ ಮಾನ್ವಿಿ ಕೃಷಿ ಉತ್ಪನ್ನ ಮಾರುಕಟ್ಟೆೆ ಸಮಿತಿಯ ಸಭೆಯಲ್ಲಿ ತೀರ್ಮಾನವಾದಂತೆ ನವೆಂಬರ್ 20 ರಂದು ವಿವಿಧ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟು ನಿಯಮಾನುಸಾರ ಪರಿಶೀಲಿಸಿ 73 ನಿವೇಶನಗಳನ್ನು ಹಮಾಲರಿಗೆ ಹಂಚಿಕೆ ಮಾಡುವುದಕ್ಕೆೆ ಸರಕಾರ ಅದೇಶ ನೀಡಿದ್ದರಿಂದ ಈಗ ಹಕ್ಕು ಪತ್ರ ವಿತರಿಸುವ ಕಾಲ ಕೂಡಿ ಬಂದಿದೆ. ಜನವರಿ 9 ರಂದು ಮಾನ್ವಿಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆೆ ಸಮಿತಿಯ ಆವರಣದಲ್ಲಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ಹಮಾಲರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.
ನಿವೇಶನ ಹಂಚಿಕೆ ಮಾಡುವುದಕ್ಕೆೆ ಸಹಕಾರ ನೀಡಿದ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯನಾಯಕ ಹಾಗೂ ಎ.ಪಿ.ಎಂ.ಸಿ. ಕಾರ್ಯದರ್ಶಿರವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾಾನಿಸಲಾಗುವುದು ಎಂದು ಸಿದ್ರಾಾಮಯ್ಯಸ್ವಾಾಮಿ ತಿಳಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಹಮಾಲರ ಸಂಘದ ಅಧ್ಯಕ್ಷ ಹನುಮಂತ, ಖಜಾಂಚಿ ರಾಮಣ್ಣ, ಹಮಾಲಿ ಕಾರ್ಮಿಕರಾದ ಕೀರಯ್ಯ, ಬಾಷಾ, ಹಂಪಯ್ಯ, ಶರಣಪ್ಪ, ಕೊಂಡಯ್ಯ, ವೀರೇಶ, ಕ್ರುದ್ದೀನ್, ದೇವಪ್ಪ, ಜಂಬಯ್ಯಸ್ವಾಾಮಿ ಉಪಸ್ಥಿಿತರಿದ್ದರು.

