ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.31
ಕಸ ಆಯುವ ಸಮುದಾಯದ ಮಕ್ಕಳ ಪಾಲಿಗೆ ಹೊಸ ವರ್ಷವೆಂದರೆ ಉಳಿದ ದಿನಗಳಂತೆಯೇ ಸಾಮಾನ್ಯ. ಮೈ ಕೊರೆಯುವ ಚಳಿಯಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಕಸದ ರಾಶಿಯಲ್ಲಿ ಪ್ಲಾಾಸ್ಟಿಿಕ್ ಆಯುವುದು ಅವರ ಬದುಕು.
ಜಗತ್ತು ಸಂಗೀತ ಮತ್ತು ಪಾರ್ಟಿಗಳೊಂದಿಗೆ ಮಧ್ಯರಾತ್ರಿಿಯ ಕೌಂಟ್ಡೌನ್ನಲ್ಲಿ ಮಗ್ನವಾಗಿದ್ದಾಾಗ, ನಮ್ಮ ನಡುವೆಯೇ ಕಸ ಆಯುವ ಮಕ್ಕಳಿಗೆ ಅವರಿಗೆ ಹೊಸ ವರ್ಷ ಎಂದರೆ ಎಂದಿಗೂ ಹೊಸ ಬಟ್ಟೆೆ ಅಥವಾ ಉಡುಗೊರೆಗಳಲ್ಲ. ಅದು ಬರೀ ಬದುಕಿನ ಹೋರಾಟವಷ್ಟೇ.
ಬದಲಾವಣೆಯ ಹೆಜ್ಜೆೆ:
ಈ ವರ್ಷ ಸಹನಾ ಮಕ್ಕಳ ಆಸ್ಪತ್ರೆೆ ಮತ್ತು ಡಾ.ಕೆ.ಶಿವರಾಜ್ ಅವರು ಅದ್ಧೂರಿ ಹೊಸವರ್ಷದ ಆಚರಣೆಗಳನ್ನು ಬದಿಗಿಟ್ಟು, ಮಾನವೀಯತೆ ಆಯ್ದುಕೊಂಡಿದ್ದಾಾರೆ. ಕಸ ಆಯುವ ಈ ನೂರು ಮಕ್ಕಳಿಗೆ ಹೊಸದಾದ, ಬೆಚ್ಚಗಿನ, ಬಣ್ಣಬಣ್ಣದ ಬಟ್ಟೆೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾಾರೆ.
ಪ್ರಕಾಶಮಾನ:
ಕಸ ಆಯುವ ಮಕ್ಕಳ ಮೊಗದಲ್ಲಿ ಮೂಡಿದ ನಗು ಕೇವಲ ಬಟ್ಟೆೆಗಾಗಿ ಇರಲಿಲ್ಲ. ಅದು ಅವರಿಗೆ ನೀಡಿದ ಪ್ರೀೀತಿ, ಗೌರವ, ಘನತೆಗಾಗಿ ಇತ್ತು. ಪಟಾಕಿಗಳ ಬೆಳಕಿಗಿಂತ ಆ ಮಕ್ಕಳ ಕಣ್ಣಿಿನ ಮಿಂಚು ಹೆಚ್ಚು ಪ್ರಕಾಶಮಾನವಾಗಿತ್ತು. ಅವರನ್ನು ಯಾರೂ ಗುರುತಿಸದ ಸಂದರ್ಭದಲ್ಲಿ ಸಹನಾ ಮಕ್ಕಳ ಆಸ್ಪತ್ರೆೆಯ ವೈದ್ಯರು ತೋರಿದ ಪ್ರೀೀತಿ, ಕಾಳಜಿಗೆ ಧ್ಯೋೋತಕವಾಗಿತ್ತು.
ತಮ್ಮ ಹೊಸ ಬಟ್ಟೆೆಗಳನ್ನು ಧರಿಸಿದ ಆ ಮಕ್ಕಳು, ಯಾರ ಬಳಿಯೂ ಏನನ್ನೂ ಬೇಡದೆ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರುತ್ತಾಾ ಸಂಭ್ರಮ ಹಂಚಿದರು. ಯುಕೆ (ಯುನೈಟೆಡ್ ಕಿಂಗ್ಡಂ) ಲಿವರ್ಪೂಲ್ನ ನ್ಯೂಕ್ಲಿಿಯರ್ ಮೆಡಿಸಿನ್ ವಿಜ್ಞಾಾನಿ ಡಾ.ಶೋಭಾನ್, ಬೆಂಗಳೂರು ಮಣಿಪಾಲ ಆಸ್ಪತ್ರೆೆಯ ಡಾ.ಕೀರ್ತಿ ಅಗರವಾಲ್, ಬಿಜಿಎಸ್ ಗ್ಲೋೋಬಲ್ ಎಂಸಿಹೆಚ್ ಆಸ್ಪತ್ರೆೆಯ ಡಾ.ಗಾಯತ್ರಿಿದೇವಿ, ಮುಧೋಳದ ಡಾ.ಶಿವಾನಂದ ಕುಬ್ಸದ್ ಈ ಪುಣ್ಯದ ಕಾರ್ಯಕ್ಕೆೆ ಕೈ ಜೋಡಿಸಿದ್ದಾಾರೆ.
ಕಸ ಆಯುವ ಸಮುದಾಯದ 100 ಮಕ್ಕಳಿಗೆ ಹೊಸ ಬಟ್ಟೆ ವಿತರಣೆ ಹೊಸ ವರ್ಷ… ಹೊಸ ಬಟ್ಟೆ… ಹೊಸ ಭರವಸೆ..!

