ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಐದು ಕೆಜೆ ಅಕ್ಕಿಿ ,ಜೊತೆಗೆ ಇಂದಿರಾ ಕಿಟ್ ವಿತರಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಇಂದಿರಾ ಪೌಷ್ಠಿಿಕಾಂಶ ಕಿಟ್ ವಿತರಣೆಗೆ ಶೀಘ್ರದಲ್ಲಿಯೇ ಟೆಂಡರ್ ಕರೆದು ಯಾವ ತಿಂಗಳಿಂದ ವಿತರಣೆ ಮಾಡಲಾಗುವುದು ಎಂಬುದನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಸದ್ಯ 10 ಕೆ.ಜಿ. ಅಕ್ಕಿಿ ವಿತರಿಸಲಾಗುತ್ತದೆ. ಆದರೆ, ಕೆಲವು ಕಡೆ ಅಕ್ಕಿಿ ದುರ್ಬಳಕೆ ಆಗುತ್ತಿಿರುವ ದೂರುಗಳು ಬಂದಿರುವ ಹಿನ್ನೆೆಲೆಯಲ್ಲಿ ಮತ್ತು ಅಕ್ಕಿಿ ಜೊತೆಗೆ ಕುಟುಂಬಗಳಿಗೆ ಅಧಾರವಾಗುವ ಇತರೆ ಪೌಷ್ಠಿಿಕಾಂಶದ ಕಿಟ್ ಸಹ ನೀಡಬೇಕು ಎಂಬ ಆಲೋಚನೆಯಲ್ಲಿ ಇಂದಿರಾ ಕಿಟ್ ವಿತರಣೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಾಗಿ 61.19 ಕೋಟಿಗಳ ಮೊತ್ತ ಒದಗಿಸಲು ಸಂಪುಟ ಸಭೆ ನಿರ್ಣಯಿಸಿದೆ ಎಂದರು.
ಕಿಟ್ನಲ್ಲಿ ಏನೇನು ಇರುತ್ತದೆ?
ಪ್ರತಿ ಕಿಟ್ನಲ್ಲಿ 2 ಕೆ.ಜಿ. ತೊಗರಿಬೇಳೆ, 1ಕೆಜಿ ಸಕ್ಕರೆ, 1ಕೆಜಿ ಅಡುಗೆ ಎಣ್ಣೆೆ ಮತ್ತು 1 ಕೆಜಿ. ಉಪ್ಪುು ಇರುತ್ತದೆ. ಇದನ್ನು ಪ್ರತಿ ಕಾರ್ಡ್ದಾರರಿಗೂ ವಿತರಣೆಗೆ ಕ್ರಮ ವಹಿಸಲಾಗುವುದು. ಅಂತ್ಯೋೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬ ಪಡಿತರ ಚೀಟಿ ಹೊಂದಿರುವವರಿಗೆ ಈ ಸೌಲಭ್ಯ ಸಿಗಲಿದೆ ಎಂದು ಸಚಿವರು ವಿವರಿಸಿದರು.
ಪ್ರಧಾನ ಮಂತ್ರಿಿ ಕೃಷಿ ಸಿಂಚಾಯಿ ಯೋಜನೆ-2 ಹಾಗೂ ಜಲಾನಯನ ಕೃಷಿ ಅಭಿವೃದ್ಧಿಿ ಘಟಕದ ಸಹಯೋಗದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 15 ಯೋಜನೆಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ. 15 ತಾಲೂಕುಗಳಲ್ಲಿನ 39 ಸಾವಿರದ 413 ಹೆಕ್ಟೇರ್ ಪ್ರದೇಶದಲ್ಲಿ 90 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
2025-26ನೇ ಸಾಲಿಗೆ ರಸಗೊಬ್ಬರ ದಾಸ್ತಾಾನು ಮಾಡುವ ಉದ್ದೇಶಕ್ಕಾಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಂಡಳಿಗಳು ಪಡೆಯುವ ತಲಾ 200 ಕೋಟಿ ರೂಪಾಯಿ ಬಂಡವಾಳ ಸಾಲಕ್ಕೆೆ ರಾಜ್ಯ ಸರ್ಕಾರದ ಖಾತ್ರಿಿ ನೀಡಲು ಸಂಪುಟ ಒಪ್ಪಿಿಗೆ ನೀಡಿದೆ ಎಂದರು.
ಶಾಸಕ ನಾರಾಯಣಸ್ವಾಾಮಿ ಅಧ್ಯಕ್ಷತೆಯಲ್ಲಿನ 5ನೇ ಹಣಕಾಸು ಆಯೋಗದ ಅವಧಿಯನ್ನು ನವೆಂಬರ್ವರೆಗೆ ವಿಸ್ತರಿಸಲು ಒಪ್ಪಿಿಗೆ ನೀಡಲಾಗಿದೆ. ರಾಜ್ಯದ ಸಿವಿಲ್ ಸೇವೆಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಸಡಿಲಿಸುವ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆೆಂಬರ್ 29ರಂದು ಹೊರಡಿಸಿದ್ದ ಆದೇಶಕ್ಕೆೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿದರು.
ಸೇತುವೆಗಳ ಪುನಶ್ಚೇತನಕ್ಕೆೆ 2000 ಕೋಟಿ:
ಲೋಕೋಪಯೋಗಿ ಇಲಾಖೆಯಡಿ ಸೇತುವೆಗಳು ಪುನರ್ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು 2000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಿಕೊಳ್ಳಲು ತಾತ್ವಿಿಕ ಅನುಮೋದನೆ ನೀಡಲಾಗಿದೆ.
ಮೊದಲನೇ ಹಂತದಲ್ಲಿ ಪಿಆರ್ಎಎಂಸಿ ಅಧ್ಯಯನದಲ್ಲಿ ಗುರುತಿಸಿರುವ 39 ಬೃಹತ್ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು 1000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಸಚಿವ ಪಾಟೀಲ ಹೇಳಿದರು.
ಸಂಪುಟ ಸಭೆಯ ಇತರೆ ನಿರ್ಣಯಗಳು:
* ಬೀದರ್ ಜಿಲ್ಲೆ ಔರಾದ್ (ಬಿ) ಪಟ್ಟಣ ಪಂಚಾಯತಿಯಿಂದ ’ಔರಾದ್ ಪುರಸಭೆ’ ಯನ್ನು ರಚಿಸುವ ಬಗ್ಗೆೆ ಸಚಿವ ಸಂಪುಟ ನಿರ್ಣಯಿಸಿದೆ.
* ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025 ರಂದು ಹೊರಡಿಸಿರುವ ಆದೇಶಕ್ಕೆೆ ಘಟನೋತ್ತರ ಅನುಮೋದನೆ.
* ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶಕ್ಕಾಾಗಿ ವಾರ್ಷಿಕ 38.33 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹೊಸ ತಂತ್ರಾಾಂಶಗಳನ್ನು ಅಳವಡಿಸಲು ನಿರ್ಣಯ.
* 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ನವೆಂಬರ್ 2025 ರವರೆಗೆವಿಸ್ತರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
* ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು 405.55 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
* ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕರಿವೋಬನಹಳ್ಳಿಿಯಿಂದ ನಾಗಸಂದ್ರ ಹೊಸ ಬಳಸಿದ ನೀರು ಸಂಸ್ಕರಣಾ ಘಟಕದವರೆಗೆ ಇರುವ ರೈಸಿಂಗ್ ಮೇನ್ ಸೇರಿ ನಾಗಸಂದ್ರದಲ್ಲಿ 20 ಎಂಎಲ್ಡಿಿ ಬಳಸಿದ ನೀರು ಸಂಸ್ಕರಣಾ ಘಟಕ ಮತ್ತು 5 ಎಂಎಲ್ಡಿಿ ಮಧ್ಯಂತರ ತ್ಯಾಾಜ್ಯ ನೀರಿನ ಯಂತ್ರಾಾಗಾರಗಳ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 26.02 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ .
* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ವಾಾಯತ್ತ ಸ್ಥಾಾನಮಾನದೊಂದಿಗೆ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾಾರಂಭಿಸಲು ಮತ್ತು ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆೆ, ವಸತಿ ನಿಲಯಗಳು ಮತ್ತಿಿತರ ಕಾಮಗಾರಿಗಳನ್ನು 550 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
* ಧಾರವಾಡ ಜಿಲ್ಲೆಯ ಅಣ್ಣಿಿಗೇರಿ ಮತ್ತು ನವಲಗುಂದ ಪುರಸಭೆ ವ್ಯಾಾಪ್ತಿಿ, ಕಲಬುರಗಿ ಜಿಲ್ಲೆಯ ಅಜಲಪುರ್, ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪುರಸಭೆ ವ್ಯಾಾಪ್ತಿಿಯಲ್ಲಿ ನಾಗರೀಕ ಸೌಲಭ್ಯ (ಸಿಎ) ನಿವೇಶನಗಳನ್ನು ಕಾಂಗ್ರೆೆಸ್ ಭವನ ನಿರ್ಮಾಣ ಮಾಡಲು ಕಾಂಗ್ರೆೆಸ್ ಭವನ ಟ್ರಸ್ಟ್ಗೆ ಗುತ್ತಿಿಗೆ ಆಧಾರದ ಮೇಲೆ ಮಂಜೂರು.
* ವಿದ್ಯುನ್ಮಾಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಮಂಗಳೂರಿನ ದೇರೆಬೈಲ್ನ ಬ್ಲೂಬೆರಿ ಹಿಲ್ಸ್ ರಸ್ತೆೆಯಲ್ಲಿರುವ 3,285 ಎಕರೆ ಭೂಮಿಯನ್ನು ವಾಣಿಜ್ಯ ಕಛೇರಿ ಟೆಕ್ ಪಾರ್ಕ್ ಉದ್ದೇಶಕ್ಕಾಾಗಿ ಪಿಪಿಪಿ ಮಾದರಿಯಲ್ಲಿ ನಗದೀಕರಿಸಲು ಮತ್ತು ಅಭಿವೃದ್ಧಿಿಪಡಿಸಲು ಅನುಮೋದನೆ ನೀಡಿದೆ.
* ಸಿಪಿಸಿ ಪಾಲಿಟೆಕ್ನಿಿಕ್, ಮೈಸೂರು ಸಂಸ್ಥೆೆಯ ಕಟ್ಟಡದ ನವೀಕರಣ ಮತ್ತು ಹೊಸ ಸಂಸ್ಥೆೆಯ ಕಟ್ಟಡದ ನವೀಕರಣ ಮತ್ತು ಆಡಿಟೋರಿಯಂ ಅನ್ನು ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ತಲಾ ರೂ.70 ಕೋಟಿ ರೂ. ಹಾಗೂ 50 ಕೋಟಿ ರೂ.ಗಳ ಮೊತ್ತದಲ್ಲಿ ಒದಗಿಸಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
* ಕೇಂದ್ರ ಪುರಸ್ಕೃತ ಎಸ್ಎ ಎಸ್ಸಿಐ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ತಾತಗುಣಿಯಲ್ಲಿರುವ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರ ಅಭಿವೃದ್ಧಿಿಪಡಿಸುವ 99.17 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಮೊದಲನೇ ಹಂತದ ಕಾಮಗಾರಿಗಳನ್ನು 55.33 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

