ಸುದ್ದಿಮೂಲ ವಾರ್ತೆ ರಾಯಚೂರು, ಡಿ.07:
ಕಾರ್ಮಿಕರು ಸರ್ಕಾರದಿಂದ ಬರುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಬದುಕು ಕಟ್ಟಿಿಕೊಳ್ಳಬೇಕು ಎಂದು ರಾಯಚೂರು ಗ್ರಾಾಮಾಂತರ ಶಾಸಕ ಬಸನಗೌಡ ದದ್ದಲ್ ಸಲಹೆ ನೀಡಿದರು.
ಶನಿವಾರ ನಗರದ ಗ್ರಾಾಮೀಣ ಶಾಸಕರ ಕಚೇರಿ ಯಲ್ಲಿ ಗ್ರಾಾಮೀಣ ಕ್ಷೇತ್ರಕ್ಕೆೆ ಒಳಪಡುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಾಣ ಮಂಡಳಿಯಲ್ಲಿ ನೋಂದಾಯಿತ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸುರಕ್ಷತಾ ಕಿಟ್ ಗಳ ವಿತರಿಸಿ ಮಾತನಾಡಿದರು.ದೇಶದ ಅಭಿವೃದ್ದಿ ಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಆದರೆ, ಜೀವನ ಅತ್ಯಂತ ಕಷ್ಟಕರವಾಗಿದ್ದು, ಕೆಲಸ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿಿನಲ್ಲಿ ಕಾರ್ಮಿಕರ ಕುಟುಂಬದ ರಕ್ಷಣೆಗಾಗಿ ಹಾಗೂ ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ನಾನಾ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಕಡ್ಡಾಾಯ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಯೋಜನೆಗಳ ಕುರಿತು ಇಡೀ ದೇಶವೇ ಕರ್ನಾಟಕ ರಾಜ್ಯದತ್ತ ತಿರುಗಿ ನೋಡುವ ರೀತಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ರಾಜ್ಯಾಾದ್ಯಂತ ಸುತ್ತಿಿ, ಕಾರ್ಮಿಕ ವರ್ಗದ ನಾಡಿಮಿಡಿತ ಅರಿತು ಕಾರ್ಮಿಕರಿಗೆ ಅನುಕೂಲವಾಗುವ ರೀತಿಯ ಅನೇಕ ಯೋಜನೆಗಳ ಜಾರಿ ಮಾಡಿದ್ದಾರೆ ಎಂದರು.
ಕಾರ್ಮಿಕ ಕೆಲಸಗಳಾದ ಮೇಸನ್, ಎಲೆಕ್ಟ್ರಿಿಶಿಯನ್, ವೆಲ್ಡರ್, ಕಾರ್ಪೆಂಟರ್, ಪೇಂಟರ್ ಮತ್ತು ಪ್ಲಂಬರ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ವಿವಿಧ ಬಗೆಯ ರೀತಿಯ ಸುರಕ್ಷತಾ ಕಿಟ್ ಗಳು ಅತೀ ಮುಖ್ಯವಾಗಿದ್ದು, ಕೆಲಸದ ಸ್ಥಳಗಳಲ್ಲಿ ಯಾವುದೇ ಅಪಘಾತ ಸಂಭವಿಸದಂತೆ ಸುರಕ್ಷತಾ ವಿಧಾನಗಳನ್ನು ಉಪಯೋಗಿಸಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಎಲ್ಲಾ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಮಿಕರಿಗೆ ತಿಳವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ನಿರೀಕ್ಷಕ ಪ್ರಿಿಯಾಂಕ ಸೇರಿದಂತೆ ಕಾರ್ಮಿಕರ ಮುಖಂಡರು ಹಾಗೂ ಲಾನುಭವಿಗಳು ಇದ್ದರು.
ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ ಕಾರ್ಮಿಕರು ಸವಲತ್ತು ಬಳಸಿಕೊಂಡು ಬದುಕು ಕಟ್ಟಿಕೊಳ್ಳಿ – ದದ್ದಲ್

