ಸುದ್ದಿಮೂಲವಾರ್ತೆ
ಕೊಪ್ಪಳ ಆ 29; ರಾಜ್ಯ ಸರಕಾರವು ಶಾಲೆಗಳಲ್ಲಿ ಗಿಡ ಮರಗಳನ್ನು ಬೆಳೆಸುವ ಉದ್ದೇಶದಿಂದ ಸಸ್ಯ ಶಾಮಲಾ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿ ನ ಶಾಲೆಗೆ ಸಸಿ ವಿತರಣೆ ಕಾರ್ಯಕ್ಕೆ ಡಿಡಿಪಿಐ ಶ್ರೀಶೈಲ ಬಿರಾದಾರ ಚಾಲನೆ ನೀಡಿದರು.
ಕೊಪ್ಪಳ ತಾಲೂಕಿನ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನಡೆಯುವ ಉದ್ದೇಶ ಹೊಂದಲಾಗಿದೆ. ಕೊಪ್ಪಳ ತಾಲೂಕಿನ 136 ಶಾಲೆಗಳಿಗೆ ಸುಮಾರು 2700 ವಿವಿಧ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಇಒ ಶಂಕರಯ್ಯ,ಅಯ್ಯನಗೌಡರು, ಪ್ರಕಾಶ್ ತಗದಿನಮನಿ, ಅನುಷ್ಠಾನಾಧಿಕಾರಿ ಚೇತನ ಮುದಗಲ್, ಬಿಜೆಪಿ ಮಾಧ್ಯಮ ಪ್ರಮುಖರಾದ ಮಹೇಶ್ ಹಾದಿಮನಿ ಉಪಸ್ಥಿತರಿದ್ದರು.