ಸುದ್ದಿಮೂಲ ವಾರ್ತೆ ಮಾನ್ವಿ, ಡಿ.21:
ಪತ್ರಿಿಕಾ ವಿತರಕರಿಗೆ ಹಾಗೂ ರಾತ್ರಿಿ ವೇಳೆ ವಿವಿಧ ಕಡೆ ಕಾರ್ಯನಿರ್ವಹಿಸುವ ಕಾವಲುಗಾರರಿಗೆ ಮಾನ್ವಿಿಯ ಲಯನ್ಸ್ ಕ್ಲಬ್ ವತಿಯಿಂದ ಸ್ವೆೆಟರುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮಾನ್ವಿಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಾಂಕ್ ಸಭಾಂಗಣದಲ್ಲಿ ಶನಿವಾರ ಸಾಯಂಕಾಲ ಹಮ್ಮಿಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಾಟಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ನಾಗರಾಜ ಮಾತನಾಡಿ ಪ್ರತಿ ದಿನ ಪತ್ರಿಿಕೆಗಳಲ್ಲಿ ಬರುವ ಸುದ್ದಿಗಳನ್ನು ಹೊತ್ತು ಮೈಕೊರೆವ ಚಳಿಯಲ್ಲಿ ನಸುಕಿನ ವೇಳೆ ಪತ್ರಿಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಹುಡುಗರಿಗೆ ಹಾಗೂ ರಾತ್ರಿಿ ವೇಳೆ ಎಟಿಎಂ, ಬ್ಯಾಾಂಕ್, ಮುಂತಾದ ಮಿಲ್, ಕೈಗಾರಿಕೆ, ಕಚೇರಿಗಳನ್ನು ಕಾಯುವ ಕಾವಲುಗಾರರಿಗೆ ಸ್ವೆೆಟರ್ ವಿತರಣೆ ಮಾಡುವ ಯೋಜನೆಯನ್ನು ನಮ್ಮ ಲಯ್ಸ್ ಕ್ಲಬ್ ನಿಂದ ರೂಪಿಸಿದ ಪ್ರಕಾರ ಇಂದು 20 ಕ್ಕೂ ಹೆಚ್ಚು ಪತ್ರಿಿಕಾ ವಿತರಕರಿಗೆ ಮತ್ತು 10 ಕ್ಕೂ ಹೆಚ್ಚು ಕಾವಲುಗಾರರಿಗೆ ಸ್ವೆೆಟರ್ ವಿತರಣೆ ಮಾಡಲಾಗಿದೆ. ಪತ್ರಿಿಕೆ ಹಂಚುವ ಹುಡುಗರು ಬಹುತೇಕ ವಿದ್ಯಾಾರ್ಥಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಾನ್ವಿಿ ಲಯ್ಸ್ ಕ್ಲಬ್ ವತಿಯಿಂದ ಪತ್ರಿಿಕಾ ವಿತರಕರಿಗೆ, ಕಾವಲುಗಾರರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾಾ ಶಿಬಿರ, ವಿತರಕರಿಗೆ ಹಾಗೂ ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾಾರ ಮಾಡಲಾಗುವುದು. ಅದೇರೀತಿ ಪತ್ರಿಿಕೆಗಳನ್ನು ಹಂಚುವ ವಿದ್ಯಾಾರ್ಥಿಗಳ ಉನ್ನತ ಶಿಕ್ಷಣಕ್ಕೆೆ ಆರ್ಥಿಕ ನೆರವು ನೀಡುವುದಾಗಿ ಎಂ.ನಾಗರಾಜ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ತಜ್ಞೆ ವೈದ್ಯೆೆ ಡಾ. ರೋಹಿಣಿ ಮಾನ್ವಿಿಕರ್, ದಂತ ವೈದ್ಯ ಡಾ.ಸುರೇಶ ಬಾಬು, ನಗರೇಶ್ವರ ಆರ್ಯ ವೈಶ್ಯ ಸಂಘದ ಅಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿಿ, ವಿಪ್ರ ಸಮಾಜದ ಅಧ್ಯಕ್ಷ ಮುದ್ದುರಂಗರಾವ್ ಮುತಾಲಿಕ್, ಲಯ್ಸ್ ಕ್ಲಬ್ ಉಪಾಧ್ಯಕ್ಷ ರಾಮಲಿಂಗಪ್ಪ, ಕಾರ್ಯದರ್ಶಿ ಶಾಂತಮೂರ್ತಿ, ಖಜಾಂಚಿ ರಾಮರಾಜು, ಸದಸ್ಯರಾದ ಈರಣ್ಣ ಮರ್ಲಟ್ಟಿಿ, ವೆಂಕಟೇಶ ಇಲ್ಲೂರು, ಡಾ. ಬಸವರಾಜ ಸಜ್ಜನ್, ಬಸವರಾಜ, ಶಂಭುಲಿಂಗಯ್ಯಸ್ವಾಾಮಿ ಹಿರೇಮಠ, ಪತ್ರಿಿಕಾ ವಿತರಕರ ಸಂಘದ ಅಧ್ಯಕ್ಷ ಬಸನಗೌಡ ಮೇಟಿ, ಪತ್ರಿಿಕಾ ವರದಿಗಾರ ಜಿತೇಂದ್ರಸ್ವಾಾಮಿ ಇದ್ದರು.
ಮಾನ್ವಿ : ಪತ್ರಿಕಾ ವಿತರಕರಿಗೆ, ರಾತ್ರಿ ಕಾವಲುಗಾರರಿಗೆ ಲಯ್ಸ್ ಕ್ಲಬ್ ವತಿಯಿಂದ ಸ್ವೆಟರ್ ವಿತರಣೆ

