ಸುದ್ದಿಮೂಲ ವಾರ್ತೆ ಮಾನ್ವಿ, ಡಿ.07:
ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಂಜೂರು ಮಾಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಇವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ರವಿವಾರ ಬಲ್ಲಟಗಿ ಗ್ರಾಾಮದ ತಮ್ಮ ನಿವಾಸದ ಆವರಣದಲ್ಲಿ ಕಾರ್ಮಿಕ ಇಲಾಖೆಯ ಲಾನುಭವಿ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಸೇಫ್ಟಿಿ ಕಿಟ್ ವಿತರಿಸಿ ಮಾತನಾಡುತ್ತಿಿದ್ದರು.
ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸಲಕರಣೆಗಳನ್ನು ಹಾಗೂ ಸುರಕ್ಷ ಪರಿಕರಗಳ ಕಿಟ್ ಗಳನ್ನು ವಿತರಿಸಲಾಗುತ್ತಿಿದೆ. ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಮಿಕ ಇಲಾಖೆಯ ನಿರೀಕ್ಷಕ ಮಲ್ಲಪ್ಪ, ಸಿಬ್ಬಂದಿಗಳಾದ ಶರಣಬಸವ, ರುದ್ರಪ್ಪನಾಯಕ ಹಾಗೂ ಮಾನ್ವಿಿ ಮತ್ತು ಸಿರವಾರ ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಿ.ಆರ್.ಸುಧಾನಂದ, ಪರಶುರಾಮ ಬಾಗಲವಾಡ, ಪಂಪ್ಪಣ್ಣ ಚಾಗಿ, ರಮೇಶ, ಜಾರ್, ಅಬ್ರಹಾಂ, ಮಾರೇಶ, ಉಮೇಶ, ಮೌನೇಶ ಹಾಗೂ ಕಾರ್ಮಿಕರು ಉಪಸ್ಥಿಿತರಿದ್ದರು.
ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಂಜೂರಿಗೆ ಕ್ರಮ – ಶಾಸಕ ಹಂಪಯ್ಯ ನಾಯಕ

