ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.13 : ಭವ್ಯ ಭಾರತದ ಭವಿಷ್ಯ ಅಂಗನವಾಡಿ ಮಕ್ಕಳಿಂದ ಪ್ರಾರಂಭವಾಗುತ್ತದೆ. ಇಂತಹ ಮಕ್ಕಳ ಭವಿಷ್ಯವು ಉಜ್ವಲವಾಗಬೇಕು ಎಂದು ಜೇನುಗೂಡು ಗ್ರಾಮೀಣ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಿರಿಯ ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇಠ್ಹೇಳಿದರು.
ಹೊಸಕೋಟೆ ತಾಲ್ಲೂಕಿನ ಗಿಡ್ಡಪ್ಪನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಿದ್ದೇನಹಳ್ಳಿ ಗ್ರಾಮದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಮಾತನಾಡಿದರು.
ಟ್ರಸ್ಟ್, ನಾಡಪ್ರಭು ಕೆಂಪೇಗೌಡ ಯುವಕರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಟ್ರಸ್ಟಿನ ವಿನೂತನ ಕಾರ್ಯಕ್ರಮ. ಪ್ರಥಮವಾಗಿ ಸಿದ್ದೇನಹಳ್ಳಿಯಿಂದ ಪ್ರಾರಂಭವಾಗಿದೆ ಇದು ತಾಲ್ಲೂಕಿನ ಎಲ್ಲಾ ಅಂಗನವಾಡಿಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯತ್ ವಿರೋಧಪಕ್ಷ ನಾಯಕ ಡಾ.ಡಿ.ಟಿ.ವೆಂಕಟೇಶ್ ಮಾತನಾಡಿ,
ಹೊಸಕೋಟೆ ತಾಲೂಕಿನಲ್ಲಿ ಕಲೆ ಮತ್ತು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಅಂಗನವಾಡಿ ಮಕ್ಕಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್ ಮಾತನಾಡಿ, ಪ್ರತಿ ತಿಂಗಳಿಗೊಂದು ವಿಭಿನ್ನ ಕಾರ್ಯಕ್ರಮ ರೂಪಿಸುತ್ತದೆ ಹಾಗೂ ಶಿಕ್ಷಣ ಇಲಾಖೆಯ ಬಗ್ಗೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಹೊಂದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಮಾತನಾಡಿ,ಹೊಸಕೋಟೆ ತಾಲ್ಲೂಕಿನಲ್ಲಿ 311 ಅಂಗನವಾಡಿ ಕೇಂದ್ರಗಳಿದ್ದು, ತಾಲ್ಲೂಕಿನ ಇತರೆ ಸಂಘ ಸಂಸ್ಥೆಗಳು, ಸಂಘಟನೆಗಳು ಸಹ ಆಯಾ ಗ್ರಾಮಗಳಲ್ಲಿ ಅಂಗನವಾಡಿಗಳ ಸಬಲೀಕರಣಕ್ಕೆ ಮಕ್ಕಳ ಏಳಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಬೆಟ್ಟಹಳ್ಳಿ ಗೋಪಿನಾಥ್, ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್, ನಿರ್ದೇಶಕ ತರಬಹಳ್ಳಿ ಹರೀಶ್, ಸೈಯದ್ ಮಹಬೂಬ್, ಎಂ.ಆರ್.ಉಮೇಶ್, ಗ್ರಾ.ಪಂ.ಸದಸ್ಯೆ ನವನೀತ, ಸುರೇಶ್, ಅಂಗನವಾಡಿ ಶಿಕ್ಷಕಿ ಪ್ರಮೀಳ, ಬೆಂಡಿಗಾನಹಳ್ಳಿ ಕೇಂದ್ರದ ರಾಜೇಶ್ವರಿ, ಕೃಷ್ಣಮ್ಮ, ಇತರರು ಇದ್ದರು.