ಸುದ್ದಿಮೂಲ ವಾರ್ತೆ
ತುಮಕೂರು,ಏ.15:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರುಗಳೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ನಿನ್ನೆ ಸಭೆ ನಡೆಸಿ ಚರ್ಚಿಸಿದರು.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರುಗಳಾದ ಐಆರ್ಎಸ್ ಅಧಿಕಾರಿಗಳಾದ ತ್ಸೆರಿಂಗ್ ಜೋರ್ಡನ್ ಬುಟಿಯಾ, ರೆಂದಮ್ ವೆಂಕಪ್ರಧಾಮೇಶ್ಭಾನು, ನವಾಬ್ ಸಿಂಗ್, ಮಾಯಾಂಕ್ ಶರ್ಮ, ಯಾಸರ್ ಅರಾಫತ್, ಎಂ.ಸ್ವಾಮಿನಾಥನ್ ಮತ್ತು
ಸತೇಂದ್ರಸಿAಗ್ಮೆಹರಾ ಅವರುಗಳನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸ್ವಾಗತಿಸಿ ಜಿಲ್ಲೆಯ ಸಮಗ್ರ ಪರಿಚಯ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 11 ವಿಧಾನ ಸಭಾ ಕ್ಷೇತ್ರಗಳಿದ್ದು, 2683 ಮತಗಟ್ಟೆಗಳಿದ್ದು, 1117866 ಪುರುಷ, 1122880 ಮಹಿಳಾ, ಇತರೆ 6 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಏಪ್ರಿಲ್ 14ಕ್ಕೆ ಒಟ್ಟು 2240852 ಮತದಾರರಿದ್ದಾರೆ ಎಂದು ವಿವರಿಸಿದರು. ಈ ಪೈಕಿ ಕೊರಟಗೆರೆ ಮತ್ತು ಪಾವಗಡ ಪ.ಜಾತಿ ಮೀಸಲಾತಿ ಕ್ಷೇತ್ರವಾಗಿದ್ದು, ಉಳಿದೆಲ್ಲವೂ ಸಾಮಾನ್ಯ ವರ್ಗಕ್ಕೆ ಸೇರಿರುತ್ತವೆ ಎಂದು ವಿವರಿಸಿದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11 ಆರ್.ಓ.ಗಳು ಹಾಗೂ 12 ಎಆರ್ಓಗಳು(ತು.ನಗರ/ಗ್ರಾ) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಅಂತರರಾಜ್ಯ 12, ಅಂತರಜಿಲ್ಲಾ 17 ಸೇರಿದಂತೆ ಒಟ್ಟು 45 ಚೆಕ್ಪೋಸ್ಟ್ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಒಟ್ಟು 232 ಸೆಕ್ಟರ್ ಅಧಿಕಾರಿಗಳು, 18 ಎಇಓ, 18 ಅಕೌಂಟಿAಗ್ ಟೀಮ್, 45 ಎಸ್ಎಸ್ಟಿ, 52 ಎಫ್ಎಸ್ಟಿ, 26 ಇಎಸ್ಟಿ ಮತ್ತು 11 ವಿವಿಟಿ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇದುವರೆವಿಗೂ ಜಿಲ್ಲೆಯಲ್ಲಿ ಎಂಸಿಸಿ ಮತ್ತು ಕೇಬಲ್ ಆಪರೇಟರ್, ಪ್ರಿಂಟರ್ಗಳ ಸಭೆ, ಎಸ್ಎಸ್ಟಿ, ಎಫ್ಎಸ್ಟಿ, ಲೆಕ್ಕಪತ್ರ, ಚುನಾವಣಾ ವೆಚ್ಚ ಇತ್ಯಾದಿ ಸೇರಿದಂತೆ ಚುನಾವಣೆಗೆ ಸಂಬAಧಿಸಿದ ಬಹುತೇಕ ಎಲ್ಲಾ ತರಬೇತಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 29-3-2023 ರಿಂದ 14-4-2023ರವರೆಗೆ ಒಟ್ಟು 9208209 ಮೊತ್ತದ 33763.54 ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 81,33,000 ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ 63,11,312 ಮೊತ್ತದ ಉಚಿತ ಉಡುಗೊರೆಗಳಾದ 720 ಎಲ್ಇಡಿ ಬಲ್ಬ್, 2321 ಸೀರೆ, ಬಟ್ಟೆ, ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 14ರವರೆಗೆ ಬಿಜೆಪಿ ಪಕ್ಷಕ್ಕೆ 5,17,374 ರೂ., ಐಎನ್ಸಿ ಪಕ್ಷಕ್ಕೆ 8,20,055 ರೂ., ಜೆ.ಡಿ.ಎಸ್. ಪಕ್ಷಕ್ಕೆ 10,94,216 ರೂ. ಹಾಗೂ ಇತರೆ ಪಕ್ಷಗಳಿಗೆ 710 ಸೇರಿದಂತೆ ಒಟ್ಟಾರೆ 24,32,355 ರೂ.ಗಳನ್ನು ವಿವಿಧ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ 11 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.