ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಕೌಶಲ್ಯ ಅಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾಾ ಪಂಚಾಯತ್ ರಾಯಚೂರು, ತಾಲೂಕಾ ಪಂಚಾಯಿತಿ ಸಿಂಧನೂರು, ಇಂದಿರಾ ಗಾಂಧಿ ತಾಲೂಕ ಸೀಶಕ್ತಿಿ ಒಕ್ಕೂಟ, ಜ್ಞಾಾನ ಸಂಜೀವಿನಿ, ಗ್ರಾಾಮ ಪಂಚಾಯಿತಿ ಮಟ್ಟದ ಒಕ್ಕೂಟ ಆರ್.ಎಚ್.ನಂ-1 ಗಳ ಸಂಯುಕ್ತಾಾಶ್ರಯದಲ್ಲಿ ತಾಲೂಕಿನ ಅಂಬಾಮಠದಲ್ಲಿ ಜಾತ್ರಾಾ ಮಹೋತ್ಸವದ ಅಂಗವಾಗಿ ಹಮ್ಮಿಿಕೊಂಡಿದ್ದ ಜಿಲ್ಲಾಾಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಾಟಿಸಿ ಅವರು ಮಾತನಾಡಿದರು.
ಮಹಿಳೆಯರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅಗತ್ಯ ತರಬೇತಿ ನೀಡಬೇಕಿದೆ. ಮಹಿಳೆಯರು ಉತ್ಪಾಾದಿಸುವ ವಸ್ತುಗಳಿಗೆ ಮಾರುಕಟ್ಟೆೆ ಒದಗಿಸಿದಾಗ ಮಾತ್ರ ಮಹಿಳೆ ಆರ್ಥಿಕವಾಗಿ ಸ್ವಾಾವಲಂಬಿಯಾಗಲು ಸಾಧ್ಯ. ಅಂಬಾಮಠದಲ್ಲಿ ಜಿಲ್ಲಾಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಿಕೊಂಡಿರುವದು ಶ್ಲಾಾಘನೀಯ ಎಂದರು.
ರಾಜ್ಯ ಒಕ್ಕೂಟದ ಕಾರ್ಯದರ್ಶಿ, ಜಿಲ್ಲಾಾ ಹಾಗೂ ತಾಲೂಕ ಸೀ ಶಕ್ತಿಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಿಳೆಯರು ಸಿದ್ದಪಡಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಿಕೊಳ್ಳಲಾಗಿದೆ. ಮಹಿಳೆ ಇಂದು ಎಲ್ಲಾಾ ರಂಗದಲ್ಲೂ ಛಾಪು ಮೂಡಿಸುತ್ತಿಿದ್ದು, ಪುರುಷನಿಗೆ ಸರಿಸಮನಾಗಿ ಬೆಳೆಯುತ್ತಿಿದ್ದಾಾಳೆ. ಮಹಿಳೆಯರಿಗೆ ಅನುಕಂಪಕ್ಕಿಿಂತ ಅವಕಾಶ ಬೇಕಿದೆ. ಸರಕಾರವೂ ಮಹಿಳಾ ಸಬಲೀಕರಣಕ್ಕೆೆ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳ ಸದ್ಭಳಕೆಯಾಗಬೇಕಿದೆ ಎಂದರು.
ಜಿಲ್ಲಾಾ ಮಟ್ಟದ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ ಜಿಲ್ಲೆೆಯ ರಾಯಚೂರು, ಮಾನ್ವಿಿ, ದೇವದುರ್ಗ, ಮಸ್ಕಿಿ, ಸಿರವಾರ, ಲಿಂಗಸೂಗುರು, ಸಿಂಧನೂರು ತಾಲೂಕಿನ ಲಾನುಭವಿಗಳು ಯೋಜನೆಯ ಸೌಲಭ್ಯ ಪಡೆದು ಸ್ವಂತ ಚಟುವಟಿಕೆಗಳನ್ನು ಪ್ರಾಾರಂಭಿಸಿದ್ದು, ತಾವು ಮಾಡಿದ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆೆ ಪ್ರತಿದಿನ 35ಕ್ಕೂ ಹೆಚ್ಚು ಗುಂಪು ಉತ್ಪನ್ನಗಳು, ವಿವಿಧ ಬಗೆಯ ಚಟ್ನಿಿಗಳು, ಬಗೆ ಬಗೆಯ ರೊಟ್ಟಿಿಗಳು, ವಿವಿಧ ಸಿಹಿ ತಿನಿಸುಗಳು, ಕೈಕಸೂತಿಗಳು (ಹಾರ, ಬ್ಯಾಾಸ್ಕೆೆಟ್, ಶಾಲು), ಊದುಬತ್ತಿಿ, ದೂಪ, ಕರ್ಪೂರ, ಲಂಬಾಣಿ ಡ್ರೆೆಸ್ಗಳು ಆಕರ್ಷಕವಾಗಿದ್ದವು.
ದೇವಸ್ಥಾಾನದ ವ್ಯವಸ್ಥಾಾಪನಾ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಾ.ಪಂ.ಸಹಾಯಕ ನಿರ್ದೇಶಕ ಅಮರಗುಂಡಪ್ಪ ಸಹಾಯಕ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಲಿಂಗನಗೌಡ, ಅಶೋಕ್, ಎನ್ಆರ್ಎಂಎಲ್ ಜಿಲ್ಲಾಾ ವ್ಯವಸ್ಥಾಾಪಕ ಶ್ರೀಕಾಂತ ಬನ್ನಿಿಗೋಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಂಬಾಮಠದಲ್ಲಿ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆರ್ಥಿಕ ಸ್ವಾವಲಂಬನೆಯಿಂದ ಮಹಿಳಾ ಸಬಲೀಕರಣ ಸಾಧ್ಯ – ಬಾದರ್ಲಿ

