ಸುದ್ದಿಮೂಲ ವಾರ್ತೆ
ಜು.7:ತಿಪಟೂರು ಜಿಲ್ಲಾ ಜನತಾದಳ ಜಾತ್ಯಾತೀತ ಪಕ್ಷದ ಮುಖಂಡರು, ಕಲ್ಪತರು ವಿದ್ಯಾ ಸಂಸ್ಥೆಯ ನಿವೃತ್ತ ಉಪನ್ಯಾಸಕರು ಹಾಗೂ ಶಿಕ್ಷಣ ಪ್ರೇಮಿಯಾಗಿದ್ದ, ಮಾದಿಹಳ್ಳಿಯ ಪ್ರೊಫೆಸರ್ ಎಂ ರೇಣುಕಾರ್ಯ(75) ಮಾದಿಹಳ್ಳಿಯ ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.
ಪತ್ನಿ, ಪುತ್ರಿ, ಪುತ್ರ ಸೇರಿದಂತೆ, ಅಪಾರ ಬಂದು ಬಳಗವನ್ನು ಶ್ರೀಯುತರು ಅಗಲಿದ್ದಾರೆ, ಕಳೆದ 40 ವರ್ಷಗಳಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರೇಣುಕಾರ್ಯ ರವರು, ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿಯೂ ಕೂಡ ಶ್ರಮಿಸಿದರು,1999 ರ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಜನತಾದಳ ಪಕ್ಷದಿಂದ ಸ್ಪರ್ಧಿಸಿದರು, ಜಿಲ್ಲಾ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ರೇಣುಕಾರ್ಯ ಕಾರ್ಯನಿರ್ವಹಿಸಿದ್ದಾರೆ.
ಪ್ರೊಫೆಸರ್ ಎಂ ರೇಣುಕಾರ್ಯ ರವರ ನಿಧನಕ್ಕೆ ಶಾಸಕ ಕೆ ಷಡಕ್ಷರಿ, ಮಾಜಿ ಸಚಿವ ಬಿಸಿ ನಾಗೇಶ್, ಮಾಜಿ ಶಾಸಕ ಬಿ ನಂಜಾಮರಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಲೋಕೇಶ್ವರ, ಜೆಡಿಎಸ್ ಪಕ್ಷದ ಮುಖಂಡರಾದ ಕೆ ಟಿ ಶಾಂತಕುಮಾರ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಧಮ್ಮನಾರಾಯಣಗೌಡ, ತಡಸೂರು ಗುರುಮೂರ್ತಿ,ಮತ್ತಿಘಟ್ಟಶಿವ ಸ್ವಾಮಿ, ಎಚ್ ಡಿ ದೇವೇಗೌಡರ ಅಭಿಮಾನಿ ಬಳಗದ ಎಸ್ ಗಣೇಶ್,ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.