ಸುದ್ದಿಮೂಲ ವಾರ್ತೆ ರಾಯಚೂರು, ನ.30:
ನಗರದ ನವಯುಗ ಶಿಕ್ಷಣ ಸಂಸ್ಥೆೆಯಿಂದ ಜಿಲ್ಲೆಯ ಎಸ್ಎಸ್ಎಲ್ಸಿ ಮಕ್ಕಳ ಲಿತಾಂಶ ಸುಧಾರಿಸುವ ನಿಟ್ಟಿಿನಲ್ಲಿ ಈ ವರ್ಷವೂ ರಸಪ್ರಶ್ನೆೆ ಸ್ವರ್ಧೆ ಏರ್ಪಡಿಸ ಲಾಗಿದೆ ಎಂದು ನವಯುಗ ಪಿಯು ಕಾಲೇಜಿನ ಪ್ರಾಾಚಾರ್ಯ ರಮೇಶ್ ಉಪ್ರಾಾಳ್ ತಿಳಿಸಿದರು.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನವಯುಗ ಶಿಕ್ಷಣ ಸಂಸ್ಥೆೆ ಆರಂಭವಾಗಿ 12 ವರ್ಷಗಳಾಗಿದ್ದು ಕಳೆದ 7 ವರ್ಷಗಳಿಂದ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಜಿಲ್ಲಾ ಮಟ್ಟದ ಪಠ್ಯಾಾಧಾರಿತ ರಸಪ್ರಶ್ನೆೆ ಕಾರ್ಯಕ್ರಮ ಹಮ್ಮಿಿಕೊಂಡು ಬರುತ್ತಿಿದೆ. ಈ ಹಿನ್ನೆೆಲೆಯಲ್ಲಿ ಜಿಲ್ಲೆಯ ಪ್ರತಿ ಪ್ರೌೌಢಶಾಲೆಯಿಂದ ಮೂವರು ಮಕ್ಕಳು ಈ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ವಿಘ್ನೇಶ್ವರನ್, ಹೇಮಲತಾ ಸತೀಶಕುಮಾರ, ನರಸಿಂಹಲು, ಪದವಿ ವಿಭಾಗದ ಪ್ರಾಾಚಾರ್ಯ ಡಾ. ಈರಣ್ಣ ಪೂಜಾರಿ, ಜೈಭೀಮ್, ನಾಹೀದ್ ಪಾಶಾ, ಶೇಖ್ ಅಖ್ತರ್ ಇದ್ದರು.

