ಸುದ್ದಿಮೂಲ ವಾರ್ತೆ ಸಿಂಧನೂರು, ನ.05:
ಪರಂಪರಾಗತವಾಗಿ ಒಂದೇ ಬೆಳೆಯನ್ನು ಬೆಳೆಯುವದರಿಂದ ಭೂಮಿ ಗುಣಮಟ್ಟ ಕುಸಿಯುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ತಾತ, ಮುತ್ತಾಾತನ ಕಾಲದ ಅಭ್ಯಾಾಸ ಕೃಷಿ ಬಿಟ್ಟು ಎಣ್ಣೆೆ ಬೀಜಗಳನ್ನು ಬೆಳೆಯುವ ಮೂಲಕ ಆದಾಯ ತರುವ ಕೃಷಿಯತ್ತ ರೈತರು ವಾಲಬೇಕಿದೆ ಎಂದು ಕೆಓಎ್ ವ್ಯವಸ್ಥಾಾಪಕ ನಿರ್ದೇಶಕ ಗೋಪಾಲ ಹೆಚ್.ಎಸ್. ಸಲಹೆ ನೀಡಿದರು.
ಶುಕ್ರವಾರ ನಗರ ಜೈನ್ ಕಲ್ಯಾಾಣ ಮಂಟಪದಲ್ಲಿ ಕೃಷಿ ಇಲಾಖೆ, ಕರ್ನಾಟಕ ಸಹಕಾರಿ ಎಣ್ಣೆೆ ಬೀಜ ಬೆಳೆಗಾರರ ಮಹಾಮಂಡಳಿಯ ಸಹಯೋಗದಲ್ಲಿ ರಾಷ್ಟ್ರೀಯ ಖಾದ್ಯತೈಲ ಅಭಿಯಾನ-ಎಣ್ಣೆೆ ಕಾಳು ಯೋಜನೆಯಡಿಯಲ್ಲಿ ಹಮ್ಮಿಿಕೊಂಡಿದ್ದ ರೈತರ ಜಿಲ್ಲಾಾ ಮಟ್ಟದ ಕಾರ್ಯಾಗಾರ ಉದ್ಘಾಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಎಣ್ಣೆೆ ಬೀಜ ಉತ್ಪಾಾದನೆ ಕೊರತೆಯಿಂದ ಮಲೇಶಿಯಾ, ಇಂಡೋನೇಶಿಯಾ, ಉಕ್ರೇೇನ್, ರಷ್ಯಾಾ, ಕೆನಡಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿಿದ್ದೇವೆ. ಇದರಿಂದ ಅಪಾರ ಪ್ರಮಾಣದ ವ್ಯಯವಾಗುತ್ತಿಿದೆ. ಎಣ್ಣೆೆ ಬೀಜ ಉತ್ಪಾಾದನೆಯಲ್ಲಿ ನಾವು ಸ್ವಾಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ರೈತರಿಗೆ ಪ್ರಮುಖವಾಗಿ ಬೇಕಾಗಿರುವದು ಮಾರುಕಟ್ಟೆೆ. ಎಣ್ಣೆೆ ಬೀಜಗಳಲ್ಲಿ ಎಲ್ಲೆೆಡೆಯೂ ಉತ್ತಮ ಮಾರುಕಟ್ಟೆೆಯಿದೆ. ಕೃಷಿ ಇಲಾಖೆಗೆ ಕೆಓಎ್ ಸಹಕಾರ ನೀಡುತ್ತಿಿದೆ ಎಂದರು.
ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ ಮಾತನಾಡಿ, ಮೊದಲು ನಮ್ಮ ಭಾಗದಲ್ಲಿ ಶೇಂಗಾ, ಸೂರ್ಯಕಾಂತಿ ಹೆಚ್ಚು ಬೆಳೆಯುತ್ತಿಿದ್ದೆೆವು. ಕೃಷಿ ಕಾರ್ಮಿಕರ ಕೊರತೆ, ನಮ್ಮಲ್ಲಿ ಎಣ್ಣೆೆ ಬೀಜಗಳಿಗೆ ಉತ್ತಮ ಮಾರುಕಟ್ಟೆೆಯಿಲ್ಲದಿರುವದರಿಂದ ಈ ಬೆಳೆಗಳು ಕಡಿಮೆಯಾಗುತ್ತಾಾ ಬಂದಿವೆ. ಸರಕಾರದ ನೇತೃತ್ವದಲ್ಲಿ ಪ್ರತಿ ಹೋಬಳಿಗಳಲ್ಲಿ ಸುಮಾರು 30-40 ಎಕರೆ ಭೂಮಿಯಲ್ಲಿ ಎಣ್ಣೆೆ ಬೀಜಗಳನ್ನು ಬೆಳೆಯಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಚೂರಿನ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಆರ್.ಚವ್ಹಾಾಣ ಮಾತನಾಡಿ, ಸತತ ಒಂದೇ ಬೆಳೆಯನ್ನು ಬೆಳೆಯುವದರಿಂದ ಮಣ್ಣಿಿನ ಗುಣಧರ್ಮ ಹಾಳಾಗುತ್ತದೆ. ಈ ಭಾಗದಲ್ಲಿ ಬರೀ ಭತ್ತ ಬೆಳೆಯುತ್ತಿಿರುವದರಿಂದ ಭೂಮಿಯಲ್ಲಿ ಸೂಕ್ಷ್ಮಾಾಣು ಜೀವಿಗಳ ಕೊರತೆಯುಂಟಾಗುತ್ತಿಿದ್ದು, ಲವಣಾಂಶ ಹೆಚ್ಚುತ್ತಿಿದೆ. ಮಣ್ಣಿಿನ ಸಂರಕ್ಷಣೆ ನಮ್ಮೆೆಲ್ಲರ ಹೊಣೆಯಾಗಿದೆ. ಖಾದ್ಯತೈಲ ಬೀಜಗಳ ಬೆಳೆಯಲು ರೈತರಿಗೆ ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಗುಚ್ಛ ಗ್ರಾಾಮಗಳನ್ನು ಆಯ್ಕೆೆ ಮಾಡಿಕೊಂಡು ರೈತಕ್ಷೇತ್ರ ಪಾಠಶಾಲೆ ಮಾಡಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿಿದೆ. ರೈತರಿಗೆ ಒಳ್ಳೆೆಯ ಆದಾಯ ದೊರೆಯಬೇಕು. ಖಾದ್ಯತೈಲ ಆಮದು ಕಡಿಮೆ ಮಾಡಬೇಕು ಎನ್ನುವದು ಸರಕಾರದ ಉದ್ದೇಶವಾಗಿದೆ. ಪರ್ಯಾಯ ಬೆಳೆಯಾಗಿ ಎಣ್ಣೆೆ ಬೀಜಗಳನ್ನು ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ ಎಂದರು.
ಉಪಕೃಷಿ ನಿರ್ದೇಶಕರಾದ ನಯೀಮ್ ಹುಸೇನ್, ಮುತ್ತರಾಜ ಎಸ್. ರಸಗೊಬ್ಬರ, ಕ್ರಿಿಮಿನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷ ಎನ್.ಭೀಮನಗೌಡ ಗೊರೇಬಾಳ, ಶರಭನಗೌಡ, ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ ಮಾಲಿಪಾಟೀಲ್ ವೇದಿಕೆಯಲ್ಲಿದ್ದರು. ನಂತರ ರಾಯಚೂರಿನ ಕೃಷಿ ವಿವಿಯ ಪ್ರಾಾಧ್ಯಾಾಪಕ ಡಾ.ಬಸವಣ್ಣೆೆಪ್ಪ ಎಂ.ಎ, ಮುಖ್ಯ ಸಂಶೋಧನಾ ಕೇಂದ್ರದ ಬೇಸಾಯ ಶಾಸಜ್ಞ ಡಾ.ಉಮೇಶ ಆರ್ ಹಾಗೂ ಸಿರಗುಪ್ಪಾಾ ಕೃಷಿ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾಾನಿ ಡಾ.ಶ್ರೀನಿವಾಸ ಅವರು ಎಣ್ಣೆೆ ಬೀಜ ಬೆಳೆ, ಪರ್ಯಾಯ ಕೃಷಿ, ಸಮಗ್ರ ಕೃಷಿ ಕುರಿತು ಮಾಹಿತಿ ನೀಡಿದರು.
ಕೃಷಿ ಇಲಾಖೆಯಿಂದ ರೈತರಿಗೆ ಜಿಲ್ಲಾಾಮಟ್ಟದ ಕಾರ್ಯಾಗಾರ ಅಭ್ಯಾಾಸದ ಕೃಷಿ ಬೇಡ.. ಆದಾಯದ ಕೃಷಿ ಮಾಡಿ – ಗೋಪಾಲ

