ಸುದ್ದಿಮೂಲ ವಾರ್ತೆ ಮಾನ್ವಿ, ಡಿ.11:
ಸಂಕಲ್ಪ ವಿಕಲಚೇತನರ ರಾಯಚೂರು ಜಿಲ್ಲಾ ಒಕ್ಕೂಟದ ವತಿಯಿಂದ ಮಾನ್ವಿಿ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಡಿಸೆಂಬರ್ 13 ರಂದು ಶನಿವಾರ ಬೆಳಿಗ್ಗೆೆ 11 ಗಂಟೆಗೆ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಹಮ್ಮಿಿಕೊಳ್ಳಲಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ದೇಸಾಯಿ ದೋತರಬಂಡಿ ತಿಳಿಸಿದರು.
ಬುಧವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ವಿಕಲಚೇತನರು ಎದುರಿಸುವ ಸವಾಲುಗಳನ್ನು ಸಮಾಜ ಅರಿತು, ಅವರ ಹಕ್ಕುಗಳು, ಗೌರವ, ಸಮಾನತೆ ಮತ್ತು ಸಬಲೀಕರಣಕ್ಕೆೆ ಪ್ರೋೋತ್ಸಾಾಹ ನೀಡುವ ಕುರಿತು ಚರ್ಚಿಸಿ ಪ್ರತಿಯೊಬ್ಬರಿಗೂ ವಿಕಲಚೇತನ ಬಗ್ಗೆೆ ಹೊಂದಿರಬೇಕಾದ ಜವಾಬ್ದಾಾರಿಗಳನ್ನು ಹಂಚಿಕೊಳ್ಳಲಾಗುವುದೆಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ ಚಲ್ಮಲ್ ಮಾತನಾಡಿ ಈ ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಮಠದ ಪೂಜ್ಯ ಶ್ರೀ ಷ. ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು, ಇಸ್ಲಾಾಂ ಧರ್ಮಗುರು ಸೈಯದ್ ಸಜ್ಜಾಾದ್ ಹುಸೇನ್ ಮತವಾಲೆ ಸಾಹೇಬ್ ಹಾಗೂ ಸೈಂಟ್ ಮೇರಿಸ್ ಕ್ಯಾಾಥೋಲಿಕ್ ಚರ್ಚಿನ ವಂದನೀಯ ಾ.ವಿನ್ಸೆೆಂಟ್ ಸುರೇಶ ಅವರು ವಹಿಸುವರು.
ಮಾನ್ವಿಿ ಶಾಸಕ ಹಂಪಯ್ಯ ನಾಯಕ ಅವರು ಕಾರ್ಯಕ್ರಮ ಉದ್ಘಾಾಟಿಸುವರು. ಸಾಹಿತಿ ದೇವರಾಜ ಎಸ್. ಬಪ್ಪೂೂರು ವಿಶೇಷ ಉಪನ್ಯಾಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ದೇಸಾಯಿ ದೋತರಬಂಡಿ ವಹಿಸುವರು. ಜಿಲ್ಲೆ ಹಾಗೂ ತಾಲೂಕು ಮಟ್ಟದ ರಾಜಕೀಯ ನಾಯಕರು, ಸರ್ಕಾರಿ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿಕಲಚೇತನರು ಭಾಗವಹಿಸುವರು. ಕಾರಣ ಜಿಲ್ಲಾ ಮಟ್ಟದ ಈ ಕಾರ್ಯಕ್ರಮ ಯಶಸ್ವಿಿಯಾಗಲು ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕೆಂದು ಕೋರಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಸಾವಿತ್ರಮ್ಮ, ಮಾನ್ವಿಿ ತಾಲೂಕಾಧ್ಯಕ್ಷೆ ಲಕ್ಷ್ಮೀ ಉಟಕನೂರು, ಸಿರವಾರ ತಾಲೂಕಾಧ್ಯಕ್ಷ ಅಮರೇಶ ಪಾಟೀಲ್ ಚಾಗಭಾವಿ, ಚಂದ್ರಶೇಖರ ಹಾಗೂ ಪದಾಧಿಕಾರಿಗಳು ಉಪಸ್ಥಿಿತರಿದ್ದರು.
ಡಿ.13 ರಂದು ಮಾನ್ವಿಯಲ್ಲಿ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ

