ಸುದ್ದಿಮೂಲ ವಾರ್ತೆ ರಾಯಚೂರು, ಅ.03:
ರಾಯಚೂರು ಜಿಲ್ಲೆೆಯಲ್ಲಿ ಅತಿವೃಷ್ಟಿಿ ಮತ್ತು ಪ್ರವಾಹದಿಂದ ಬೆಳೆ, ಮನೆ, ರಸ್ತೆೆ ಹಾನಿ ಸೇರಿ ಜನ ಜಾನುವಾರುಗಳ ನಷ್ಟ ಕುರಿತು ಜಂಟಿ ಸಮೀಕ್ಷೆೆ ನಡೆಸಿ ಶೀಘ್ರವೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಸೂಚನೆ ನೀಡಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದೊಂದು ವಾರದಿಂದ ಜಿಲ್ಲೆೆಯಲ್ಲಿ ಸುರಿದ ಮಳೆಗೆ ಮತ್ತು ಕೃಷ್ಣಾಾ ನದಿ ಪ್ರವಾಹದಿಂದ ಉಂಟಾದ ಬೆಳೆ ನಷ್ಠದ ಬಗ್ಗೆೆ ಜಂಟಿ ಸಮೀಕ್ಷೆೆ ನಡೆಸಿ ಶೀಘ್ರ ವರದಿ ಸಲ್ಲಿಸಬೇಕು. ಒಂದು ವೇಳೆ ಸಮೀಕ್ಷೆೆಯಲ್ಲಿ ಬೆಳೆ ನಷ್ಠದ ವರದಿ ಬಗ್ಗೆೆ ದೂರುಗಳು ಬಂದರೆ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಇದೆ ವೇಳೆ ತೋಟಗಾರಿಕೆ ಬೆಳೆಗಳ ಬಗ್ಗೆೆಯೂ ಸಮೀಕ್ಷೆೆ ಮಾಡಿ ವರದಿ ಸಲ್ಲಿಕೆಗೆ ಸಲಹೆ ನೀಡಿದರು.
ಬಹುತೇಕ ಕಡೆ ಗ್ರಾಾಮೀಣ ಹಾಗೂ ಜಿಲ್ಲಾಾ ರಸ್ತೆೆಗಳು ಮಳೆಯಿಂದ ಹದಗೆಟ್ಟಿಿದ್ದರೆ ಲೋಕೋಪಯೋಗಿ ಮತ್ತು ಗ್ರಾಾಮೀಣಾಭಿವೃದ್ದಿ ಇಲಾಖೆಯವರು ತುರ್ತು ದುರಸ್ತಿಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ವಾರ್ಷಿಕ ನಿರ್ವಹಣೆಗೆ ಇದ್ದ ಅನುದಾನ ಬಳಸಿಕೊಂಡು ದುರಸ್ತಿಿ ಮಾಡುವಂತೆ ನಿರ್ದೇಶನ ನೀಡಿದರು.
ನದಿ ತಟದಲ್ಲಿರುವ ಕೆಲವೆಡೆ ವಿದ್ಯುತ್ ಪಂಪ್ಸೆಟ್ ಮತ್ತು ಪರಿವರ್ತಕಗಳು ಮುಳುಗಡೆಯಾಗಿದ್ದು ಅವುಗಳ ಬಗ್ಗೆೆ ಸಹ ಸಮೀಕ್ಷೆೆ ಅವಧಿಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಜೆಸ್ಕಾಾಂ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ, ಜಿಲ್ಲೆೆಯಲ್ಲಿ ವಿದ್ಯುತ್ ಪರಿವರ್ತಕಗಳ ಮಾಹಿತಿ ಪಡೆದು ಬೇಕಾಗುವ 300 ಟಿಸಿಗಳ ನೀಡುವಂತೆ ಜೆಸ್ಕಾಾಂ ಎಮ್ಡಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ್ ಮಾತನಾಡಿ, ಸಾಮಾರ್ಥ್ಯಕ್ಕಿಿಂತ ಹೆಚ್ಚು ವಿದ್ಯುತ್ ಬಳಕೆಯ ಕಾರಣದಿಂದ ಟಿಸಿಗಳ ಮೇಲೆ ಭಾರ ಹೆಚ್ಚಾಾಗಿ ಸುಟ್ಟು ಹೋಗುತ್ತಿಿವೆ. ಅದಕ್ಕಾಾಗಿ ಆ ಬೇಡಿಕೆಗಿಂತ ಹೆಚ್ಚಿಿನ ಸಾಮರ್ಥ್ಯದ ಟಿಸಿಗಳ ಅಳವಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಜೆಸ್ಕಾಾಂ ಅಭಿಯಂತರರಿಗೆ ನಿರ್ದೇಶನ ನೀಡಿದರು.
ಹೆಚ್ಚಿಿನ ಮಳೆಯಿಂದ ಹಾನಿಗೀಡಾದ ಹತ್ತಿಿಘಿ, ಭತ್ತ ಮತ್ತಿಿತರ ಬೆಳೆಗಳ ಸಮಗ್ರ ಸಮೀಕ್ಷೆೆ ನಡೆಸಬೇಕು ಮತ್ತು ಈಗ ಮಳೆಗೆ ಹಾನಿಯಾಗುತ್ತಿಿರುವ ಬೆಳೆ ರಕ್ಷಣೆಗೆ ನಿಯಂತ್ರಣ ಕ್ರಮಗಳ ಬಗ್ಗೆೆ ರೈತರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ಸಲಹೆ :
ಕೆಲ ಕಡೆಗೆ ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿವೆ. ಅದಕ್ಕೆೆ ದುರಸ್ತಿಿ ಮಾಡಿ ಮತ್ತು ತೋಟಗಾರಿಕೆ ಬೆಳೆ ಸೇರಿ ಕೃಷಿ ಬೆಳೆಗಳ ಸಮೀಕ್ಷೆೆ ಸರಿಯಾಗಿ ಮಾಡಬೇಕು ಹಾಗೂ ಕುರಿಗಳು ಸತ್ತರೂ ಆ ಬಗ್ಗೆೆ ಮಾಹಿತಿ ಪಡೆದಿಲ್ಲ ಅದನ್ನೂ ಸಹ ಸೇರಿಸಿ ವರದಿ ಮಾಡಲು ಶಾಸಕ ಬಸನಗೌಡ ದದ್ದಲ್ ಸಲಹೆ ನೀಡಿದರು.
ಟ್ರಾಾನ್ಸಪಾರ್ಮರ್ ಖರೀದಿಸಿ :
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ದಿನೇ ದಿನೆ ಟಿಸಿಗಳು ಸುಟ್ಟು ರೈತರು ಸೇರಿ ಸಾರ್ವಜನಿಕರು ಪರದಾಡುತ್ತಿಿದ್ದಾಾರೆ. ಬೇಡಿಕೆಯಂತೆ ಟಿಸಿಗಳು ಸಿಗುತ್ತಿಿಲ್ಲವಾದ್ದರಿಂದ ಕೆಕೆಆರ್ಡಿಬಿಯಿಂದ ಟಿಸಿಗಳ ಖರೀದಿಗೆ ನಿರ್ಧರಿಸಲು ಒತ್ತಾಾಯಿಸಿದರು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಮಳೆಯಿಂದಾಗಿ ರಸ್ತೆೆ ಹಾಳಾಗಿದ್ದು ವಾರ್ಷಿಕ ದುರಸ್ತಿಿಗೆ ಟೆಂಡರ್ ಕರೆದು ಹಲವಾರು ತಿಂಗಳಾದರೂ, ದುರಸ್ತಿಿ ಕಾರ್ಯ ನಡೆಯುತ್ತಿಿಲ್ಲ ಎಂದು ದೂರಿದ ಅವರು ತಕ್ಷಣವೇ ಹದಗೆಟ್ಟ ರಸ್ತೆೆಗಳ ದುರಸ್ತಿಿ ಕೈಗೆತ್ತಿಿಕೊಳ್ಳಬೇಕು ಎಂದಾಗ ಮಧ್ಯೆೆ ಪ್ರವೇಶಿಸಿದ ಸಚಿವ ಶರಣಪ್ರಕಾಶ ಪಾಟೀಲರು ಆ ರೀತಿ ನಿರ್ಲಕ್ಷಿಿಸಿದ ಗುತ್ತೆೆದಾರರನ್ನು ಕಪ್ಪುು ಪಟ್ಟಿಿಗೆ ಸೇರಿಸಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಶನಿವಾರದಿಂದಲೇ ಜಂಟಿ ಸಮೀಕ್ಷೆ ಆರಂಭವಾಗಿದೆ. ತೀವ್ರ ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ಶೇ.18ರಷ್ಟು ಸಮೀಕ್ಷೆ ಆಗಿದೆ. ಇನ್ನು ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಹಂಪಯ್ಯ ನಾಯಕ, ಕರೆಮ್ಮ ಜಿ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಇದ್ದರು.
ಅತಿವೃಷ್ಠಿಿ , ಪ್ರವಾಹ ಪರಿಸ್ಥಿಿತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಾ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಶೀಘ್ರವೇ ಜಂಟಿ ಸಮೀಕ್ಷೆೆಗೆ ಸೂಚನೆ
