ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ತಿಂಗಳ ಕೊನೆಯಲ್ಲಿ ಜರುಗುವ ರಾಯಚೂರು ಜಿಲ್ಲಾಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಾಮೀಣ ಭಾಗದ ಕಲಾವಿದರಿಗೂ ವೇದಿಕೆ ನೀಡುವಂತೆ ಶಾಸಕ ಬಸನಗೌಡ ದದ್ದಲ್ ಸಲಹೆ ಮಾಡಿದರು.
ಇಂದು ರಾಯಚೂರಿನ ತಾಲ್ಲೂಕ ಪಂಚಾಯತ ಸಂಭಾಗಣದಲ್ಲಿ ನಡೆದ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಗ್ರಾಾಮೀಣ ಕ್ಷೇತ್ರದ ವಿವಿಧ ಕಲಾತಂಡಗಳು, ಸಾಹಿತಿಗಳು, ವಿದ್ವಾಾಂಸರು, ಲೇಖಕರು, ಕ್ರೀೆಡಾಸಕ್ತರು ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಡಾ. ಹಂಪಣ್ಣ, ಡಿಎಸ್ಪಿ ಶಾಂತವೀರ,ತಹಶೀಲ್ದಾಾರ ಸುರೇಶ ವರ್ಮಾ, ಇಓ ಚಂದ್ರಶೇಖರ ಪವಾರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಗ್ಯಾಾರಂಟಿ ಸಮಿತಿ ಅಧ್ಯಕ್ಷ ಪವನ ಪಾಟೀಲ್, ನಾಗೇಂದ್ರಪ್ಪ ಮಟಮಾರಿ, ಹಿರಿಯ ಮುಖಂಡರು, ಅಧಿಕಾರಿಗಳು ಉಪಸ್ಥಿಿತರಿದ್ದರು.
ಜಿಲ್ಲಾ ಉತ್ಸವ ಸಾಂಸ್ಕೃತಿಕ ಸಮಿತಿ ಸಭೆ ಗ್ರಾಾಮೀಣ ಕಲಾವಿದರು, ತಂಡಗಳಿಗೂ ಅವಕಾಶ ಇರಲಿ-ದದ್ದಲ್

