ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಮಕ್ಕಳಲ್ಲಿ ದೇಶಾಭಿಮಾನ, ಸಹೋದರತೆ ಮಾನವೀಯ ಮೌಲ್ಯಗಳ ಬೆಳೆಸುವಲ್ಲಿ ಸ್ಕೌೌಟ್ಸ್ ಮತ್ತು ಗೈಡ್ಸ್ ಪಾತ್ರ ಬಹು ದೊಡ್ಡದು ಎಂದು ತಹಶೀಲ್ದಾಾರ್ ಸುರೇಶ ವರ್ಮಾ ಹೇಳಿದರು.
ನಗರದ ಸ್ಕೌೌಟ್ಸ್ ಭವನದಲ್ಲಿ ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆೆಯಿಂದ ಕಲ್ಯಾಾಣ ಕರ್ನಾಟಕ ವಿಭಾಗ ಮಟ್ಟದ ಗೀತಗಾಯನ ಸ್ಪರ್ಧೆ ಉದ್ಘಾಾಟಿಸಿ ಮಾತನಾಡಿದರು.
ಮಕ್ಕಳ ಬದುಕಲ್ಲಿ ಶಿಸ್ತು, ಸಂಯಮ ಬೆಳೆಸಿಕೊಂಡರೆ ತಮ್ಮ ಜೀವನವನ್ನು ಉತ್ತಮಗೊಳಿಸುವಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಲ್ಯಾಾಣ ಕರ್ನಾಟಕದ ಏಳು ಜಿಲ್ಲೆಯಿಂದ ಕಬ್, ಬುಲ್ -ಬುಲ್ಸ್, ಸ್ಕೌೌಟ್ಸ್ ಗೈಡ್ಸ್ ರೋವರ್ಸ, ರೇಂಜರ್ಸ್ ಮಕ್ಕಳು ಗೀತಗಾಯನ ಸ್ಪರ್ಧೆಯಲ್ಲಿ ಪಾಲ್ಗೊೊಂಡರು ವಿಜೇತರಿಗೆ ಬಹುಮಾನ ವಿತರಿಸಿ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಾ ಮುಖ್ಯ ಆಯುಕ್ತ ಬಸವರಾಜ ಬೋರೆಡ್ಡಿಿ, ಕಾರ್ಯದರ್ಶಿ ಬಸಪ್ಪ ಗದ್ದಿ, ಸ್ಕೌೌಟ್ಸ್ ಜಿಲ್ಲಾಾ ಆಯುಕ್ತ ಬಸವರಾಜ ಗದಗಿನ, ಸರ್ಕಾರಿ ಪದವಿ ಕಾಲೇಜಿನ ಪ್ರಾಾಂಶುಪಾಲ ಪ್ರೊೊಘಿ.ಯಂಕಣ್ಣ, ಎಪಿಎಂಸಿ ಉಪಾಧ್ಯಕ್ಷ ಬಶೀರ್ ಆಹ್ಮದ್, ಪ್ರಬಣ್ಣ ಗೌಡ ಪಾಟೀಲ್ ಹಂಚಿನಾಳ, ಮಹೇಶ, ಗುತ್ತಿಿಗೆದಾರ ಚಿನ್ನಿಿ, ಪಿಡಿಓ ಶೇಖರ, ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ ಗವಾಯಿ ರೋವರ್ ಆಯುಕ ಡಾ. ಪ್ರಾಾಣೇಶ್ ಕುಲಕರ್ಣಿ, ಗೈಡ್ಸ್ನ ಜಿಲ್ಲಾಾ ಆಯುಕ್ತೆೆ ಅಲೀಯಾ ಖಾನಂ, ದಾನಮ್ಮ ಆರ್.ಎಚ್. ಸಾಗರ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
ವಿಭಾಗ ಮಟ್ಟದ ಗೀತಗಾಯನ ಸ್ಪರ್ಧೆ ಮಾನವೀಯ ವೌಲ್ಯ ಬೆಳೆಸುವಲ್ಲಿ ಸ್ಕೌಟ್ಸ್, ಗೈಡ್ಸ್ ಸಹಕಾರಿ – ಸುರೇಶ ವರ್ಮಾ

