ಬೆಂಗಳೂರು, ಮೇ 13: ಅಖಂಡ ಕರ್ನಾಟಕದ ಮಹಾಜನತೆಗೆ, ಅವರ ಎಲ್ಲಾ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ನಮ್ಮ ಮೇಲೆ ವಿಶ್ವಾಸ ಇಟ್ಟು ನಿಚ್ಚಳ ಬಹುಮತ ನೀಡಿದ್ದಾರೆ. ಈಗ ಮುಂದಿನ ನಿರ್ಧಾರಗಳ ಬಗ್ಗೆ ಏನೂ ಮಾತನಾಡುವುದಿಲ್ಲ. ಜನರು ಎಲ್ಲಾ ಆವೇಶದಲ್ಲಿ ಇದ್ದಾರೆ ಈಗ ಏನೂ ಮಾತನಾಡುವುದು ಸರಿಯಾಗುವುದಿಲ್ಲ ಎಂದು ಹೇಳಿದರು.
ಸೋನಿಯಾಗಾಂಧಿ, ರಾಹುಲ್ಗಾಂಧಿ, ಪ್ರಿಯಾಂಕ ಗಾಂಧಿ ಅವರಿಗೆ ಈ ಗೆಲವು ಸಮರ್ಪಣೆ ಮಾಡುತ್ತಿದ್ದೇನೆ. ಸೋನಿಯಾಗಾಂಧಿ ಅವರು ನಾನು ತಿಹಾರ್ ಜೈಲಿನಿಲ್ಲಿ ಇದ್ದಾಗ ಅಲ್ಲಿಗೆ ಬಂದು ಸಮಾಧಾನಪಡಿಸಿದ್ದರು. ಆಗಲೇ ಅವರಿಗೆ ನನ್ನ ನಿರ್ಧಾರ ತಿಳಿಸಿದ್ದೆ ಎಂದು ಭಾವಾವೇಶದಿಂದ ಕಣ್ಣೀರು ಹಾಕುತ್ತಾ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಸಿದ್ದರಾಮಯ್ಯ ಮತ್ತು ಎಲ್ಲಾ ಶಾಸಕರಿಗೂ ಸಹ ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸುತ್ತೇನೆ. ಎಲ್ಲಾ ಹೈಕಮಾಂಡ್ ನಾಯಕರು ಶ್ರಮ ವಹಿಸಿದ್ದಾರೆ. ಎಐಸಿಸಿ ಕೇಡರ್ ನಾಯಕರು, ರಾಜ್ಯ ಮುಖಂಡರು ಎಲ್ಲರ ಶ್ರಮದಿಂದಾಗಿ ಈ ಗೆಲವು ಲಭಿಸಿದೆ ಎಂದು ಹೇಳಿದರು.
ರಾಮನಗರದಲ್ಲಿ ಗೆಲುವು ಸಾಧಿಸಿದ್ದ, ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕಿದೆ. ಹೀಗಾಗಿ ರಾಮನರಕ್ಕೆ ಹೋಗಿ ಬಂದು ಮತ್ತೆ ಮಾತನಾಡುತ್ತೇನೆ ಎಂದು ಹೇಳಿದರು.