ಸುದ್ದಿಮೂಲವಾರ್ತೆ
ಕೊಪ್ಪಳ,ಮೇ19;ಸರಕಾರಿ ಶಾಲೆ ದುಸ್ಥಿತಿಯಲ್ಲಿವೆ. ಸರಕಾರದಿಂದ ಶಾಲೆಗಳ ಸುಣ್ಣ ಬಣ್ಣಕ್ಕೆ ಬರುವ ಅನುದಾನ ಎಲ್ಲಾ ಶಾಲೆಗೂ ಬರುವುದಿಲ್ಲ. ಸರಕಾರಿ ಶಾಲೆಗಳ ಉಳಿಸಿ ಅಭಿಯಾನವನ್ನು ಸಿಂಧನೂರು ಮೂಲದ ಅನು ಅಕ್ಕ ಎಂಬುವವರ ತಂಡ ಮಾಡುತ್ತಿದೆ.
ಕಳೆದ 7-8 ತಿಂಗಳಿನಿಂದ ಶಾಲೆಗಳ ಅಭಿವೃದ್ದಿ ಕಾರ್ಯದಿಂದ ಸ್ವಲ್ಪ ದೂರವಾಗಿದ್ದ ಅನು ಅಕ್ಕ ಈಗ ಯಲಬುರ್ಗಾ ತಾಲೂಕಿನ ತಾಳಕೇರಿಯಿಂದ ಆರಂಭಿಸಿದ್ದಾರೆ. ಅವರಿಗೆ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.
ಅನು ಅಕ್ಕ ಎಂಬ ಹೆಸರು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಂಧನೂರು ತಾಲೂಕಿನ ಅನು ಅಕ್ಕ ಕಳೆದ ನಾಲ್ಕೈದು ವರ್ಷಗಳಿಂದ ಸರಕಾರಿ ಶಾಲೆಗಳ ಸಬಲೀಕರಣ ಎಂಬ ಹೆಸರಿನಲ್ಲಿ ಶಾಲೆಗಳಿಗೆ ಸುಣ್ಣ ಬಣ್ಣ, ಸ್ವಚ್ಛತೆ ಹಾಗು ಅಗತ್ಯವಿದ್ದರೆ ವಸ್ತುಗಳನ್ನು ಕೊಡಿಸುತ್ತಿದ್ದಾರೆ. ಅನು ಅಕ್ಕ ಚಿಕ್ಕದಾಗಿ ಒಂದು ಸಮಾನಮನಸ್ಕರ ತಂಡವೊಂದನ್ನು ಕಟ್ಟಿಕೊಂಡಿದ್ದು ರಾಜ್ಯದಾದ್ಯಂತ ಸಂಚರಿ ಸರಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ.
ಸರಕಾರದಿಂದ ಯಾವುದೇ ಅನುದಾನ ಪಡೆಯದೇ ಸ್ಥಳೀಯರ ಸಹಕಾರದಿಂದ ಶಾಲೆಯನ್ನು ಅಂದ ಮಾಡುತ್ತಿದ್ದಾರೆ. ಈ ತಂಡ ಈಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಾಗು ಪ್ರೌಢಶಾಲೆಗಳನ್ನು ಸುಣ್ಣ, ಬಣ್ಣ ಬಳಿದು ಸುಂದರಗೊಳಿಸಿದ್ದಾರೆ. ಇದಕ್ಕೆ ಸ್ಥಳೀಯ ಯುವಕರು ಸಹ ಸಾಥ್ ನೀಡಿದ್ದಾರೆ.
ರಾಜ್ಯದ 22 ಜಿಲ್ಲೆಗಳಲ್ಲಿ ಇಲ್ಲಿಯವರೆಗೂ 114 ಶಾಲೆಗಳನ್ನು ಅಭಿವೃದ್ದಿ ಪಡಿಸಿದ ಅನು ಅಕ್ಕ. ಕಳೆದ ಏಳೆಂಟು ತಿಂಗಳಿನಿಂದ ಈ ಕಾರ್ಯಕ್ಕೆ ಸ್ವಲ್ಪ ಬಿಡುವು ನೀಡಿದ್ದರು. ಇದಕ್ಕೆ ಕಾರಣ ನೀಡಿದ ಅನು ಅಕ್ಕ, ತಂಡದಲ್ಲಿರುವವರಲ್ಲಿ ಕೆಲವರಿಗೆ ಪರೀಕ್ಷೆ, ಪರೀಕ್ಷೆಯ ಸಿದ್ದತೆ. ಶಾಲೆಗಳಲ್ಲಿ ಪರೀಕ್ಷೆ ಈ ಕಾರಣಕ್ಕೆ ಬಿಡುವು ಮಾಡಿಕೊಂಡಿದ್ದೇವು. ಆದರೆ ಈಗ ಶಾಲೆಗೆ ರಜೆ ಇರುವ ಕಾರಣದಿಂದಾಗಿ ಮತ್ತೆ ಶಾಲೆ ಅಭಿವೃದ್ದಿ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.
ಅನು ಅಕ್ಕ, ಶಾಲೆ ಅಭಿವೃದ್ಧಿ ಪಡಿಸುವವರು
ವಾಯ್: ಪ್ಯಾಂಟ್, ಶರ್ಟ್ ಹಾಕಿಕೊಂಡು ಕೈಯಲ್ಲಿ ಬಣ್ಣದ ಡಬ್ಬಿ ಹಾಗು ಬ್ರಷ್ ಹಿಡಿದು ಸ್ನೇಹಿತರೊಂದಿಗೆ ಸರಕಾರಿ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಅನು ಅಕ್ಕಳ ಕಾರ್ಯ ಶ್ಲಾಘನೀಯವಾಗಿದೆ.