ಸುದ್ದಿಮೂಲ ವಾರ್ತೆ ರಾಯಚೂರು, ಡಿ.01:
ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆೆ ಅಧಿವೇಶನದಲ್ಲಿ ಒತ್ತಾಾಯ ಮಾಡಬೇಕು ಎಂದು ಕಲ್ಯಾಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾಾ ಸಮಿತಿ ಒತ್ತಾಾಯಿಸಿದೆ.
ಇಂದು ಸಚಿವ ಎನ್.ಎಸ್.ಬೋಸರಾಜ್ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು ಪಾರಂಪರಿಕ ವೈದ್ಯ ಪದ್ದತಿ ಭಾರತೀಯ ಸಂಪ್ರದಾಯ ಪದ್ದತಿಯಾಗಿದೆ ಎಲ್ಲದಕ್ಕೂ ಮೂಲ ತಳಹದಿಯಾಗಿದೆ.
ದೇಶಿವೈದ್ಯಘಿ,ಜನಪದ, ನಾಟಿ, ಸಾಂಪ್ರದಾಯಿಕ, ಪಾರಾಂಪರಿಕ ವೈದ್ಯ ಪದ್ದತಿಗಳಿದ್ದು ಸರ್ಕಾರ ಇವುಗಳಿಗೆ ಪ್ರೋೋತ್ಸಾಾಹ ನೀಡಿ ಮಾನ್ಯತೆ ಕೊಡಬೇಕು, ಸದ್ಯ ಸಾರ್ವಜನಿಕರಿಗೆ ಇದರ ಅನುಕೂಲತೆಗಳು ಹೆಚ್ಚಿಿವೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ಹಿನ್ನೆೆಲೆಯಲ್ಲಿ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆೆ ಸರ್ಕಾರದ ಗಮನಕ್ಕೆೆ ತಂದು ಮಾನ್ಯತೆ ಕೊಡಿಸಬೇಕು ಈ ಪರಂಪರೆ ಉಳಿದು ಮುಂದುವರಿಯಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಾಧ್ಯಕ್ಷ ಎಜಾಜ್ ಹುಸೇನ್ ಅನ್ಸಾಾರಿ, ಪ್ರಘಿ.ಕಾರ್ಯದರ್ಶಿ ಮಾರೆಪ್ಪಘಿ,ಮಾರುಗಡ್ಡಿಿನ್ ಮದನೀಸಾಬ್, ಮುರುಗೇಶ ಹಾಸದ್ ಮಿಯ ಇತರರಿದ್ದರು.
ಸಚಿವ ಬೋಸರಾಜ್ಗೆ ವೈದ್ಯರ ಮನವಿ ಪಾರಂಪರಿಕ ವೈದ್ಯರಿಗೆ ಸರ್ಕಾರ ಮಾನ್ಯತೆ ನೀಡಲು ಆಗ್ರಹ

