ಕೋವಿಡ್ ಸಮಯದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ: ಪ್ರತಿಭಾ ಶರತ್
ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು.2: ನಿತ್ಯ ನೂರಾರು ಜನರ ಆರೋಗ್ಯ ರಕ್ಷಣೆಯಲ್ಲಿ ತೊಡಗುವ ವೈದ್ಯರು ಜೀವ ರಕ್ಷಕರು. ರೋಗಿಗಳ ಪಾಲಿಗೆ ದೇವರ ಸ್ಥಾನದಲ್ಲಿರುವ ವೈದ್ಯರನ್ನು ನಾವೆಲ್ಲ ಸದಾ ಗೌರವಿಸಬೇಕು. ಸಾರ್ವಜನಿಕ ಸೇವೆಯಲ್ಲಿರುವ ಅವರಿಗೆ ಸಹಕಾರ ಕೊಟ್ಟು ಮಾನಸಿಕ ಮತ್ತು ನೈತಿಕವಾಗಿ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ಪ್ರೋತ್ಸಾಹಿಸಬೇಕು ಎಂದು ಎಸ್ಬಿಜಿ ತಂಡದ ಮುಖ್ಯಸ್ಥೆ ಸಮಾಜ ಸೇವಕಿ ಪ್ರತಿಭಾ ಶರತ್ ಬಚ್ಚೇಗೌಡರು ಹೇಳಿದರು.
ಹೊಸಕೋಟೆ ನಗರದಲ್ಲಿರುವ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಸರಕಾರಿ ಆಸ್ಪತ್ರೆಗಳಿಗೆ ಹಳ್ಳಿಗಾಡಿನ ಬಡ ಜನರು, ಆರ್ಥಿಕವಾಗಿ ಶಕ್ತಿಯಿಲ್ಲ ದವರು ಆಗಮಿಸುವುದರಿಂದ ಉತ್ತಮ ಆರೋಗ್ಯ ಸೇವೆ ಸರಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ಸಿಗುವಂತಾಗಬೇಕು. ನಿಸ್ವಾರ್ಥವಾಗಿ ಬಡ ರೋಗಿಗಳ ಆರೈಕೆಯಲ್ಲಿ ತೊಡಗಿ ಜೀವ ರಕ್ಷಣೆ ಮಾಡುವ ಕಾರ್ಯವನ್ನು ದೇವರ ಸ್ಥಾನದಲ್ಲಿ ನಿಂತು ಸಮಸ್ಯೆಯನ್ನು ಆಲಿಸಿ ಗುಣಪಟ್ಟಿಸುವ ವೈದ್ಯರು ಮಾಡುತ್ತಿದ್ದಾರೆ. ತಾಳ್ಮೆ, ಸಹನೆ ದಿಕ್ಕಿನಲ್ಲಿ ಕೆಲಸ ಮಾಡುವ ವೈದ್ಯರ ಸೇವೆ ಮತ್ತು ಪ್ರೀತಿಯಿಂದ ರೋಗಿಗಳ ಸದಾ ಸ್ಮರಣೀಯವಾಗಿದೆ. ರೋಗಿಗಳು ಪ್ರತಿನಿತ್ಯ ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಅವರ ಸೇವೆಗೆ ಸಹಕಾರ ಕೊಡು ವುದು ನಮ್ಮಲ್ಲರ ಕರ್ತವ್ಯವಾಗಬೇಕು ಎಂದರು.
ಈ ವೇಳೆ ಆಸ್ಪತ್ರೆಯ ಹಿರಿಯ ಮೂಳೆ ತಜ್ಞ ಡಾ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಯನ್ನು ಗೌರವಿಸಲಾಯಿತು. ಆಡಳಿತಾಧಿಕಾರಿ ಡಾ .ಸತೀಶ್ ಸೇರಿದಂತೆ ಎಸ್ಬಿಜಿ ತಂಡದ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.