ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.30: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಪಕ್ಷಕ್ಕೆ ಧಕ್ಕಿದೆ.
ಒಟ್ಟು 13 ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 12 ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಹುಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನ, ಪರಿಶಿಷ್ಟ ಪಂಗಡ ಮೀಸಲು ಸ್ಥಾನ, ಹಿಂದುಳಿದ ವರ್ಗ ಪ್ರವರ್ಗ (ಎ) ಮೀಸಲು ಸ್ಥಾನ, ಹಿಂದುಳಿದ ವರ್ಗ (ಬಿ) ಮೀಸಲು ಸ್ಥಾನ, ಮಹಿಳಾ ಮೀಸಲು ಸ್ಥಾನ ಹಾಗೂ ಸಾಮಾನ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಚುನವಣೆಯಲ್ಲಿ 13 ಬಿಜೆಪಿ ಬೆಂಬಲಿತ ಹಾಗೂ 136 ಕಾಂಗ್ರೆಸ್ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿದರು. ಚುನಾವಣೆ ನಡೆದ ಸಂದರ್ಭದಲ್ಲಿ 13 ಕ್ಕೆ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೇ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರೆ ಒಂದು ಸ್ಥಾನ ಖಾಲಿ ಉಳಿದಿದೆ. ಉಳಿದಂತೆ ಬಿಜೆಪಿ ಬೆಂಬಲಿತರು ಒಂದೂ ಸ್ಥಾನವನ್ನು ಗೆಲ್ಲಲಾಗದೆ ಕ್ಲೀನ್ ಸ್ವೀಫ್ ಆಗುವಂತಾಯಿತು.
ನೂತನ ನಿರ್ದೇಶಕರುಗಳಾದ ಅಶ್ವಥನಾರಾಯಣ (143), ಕೃಷ್ಣಪ್ಪ (143),ಚಂದ್ರಪ್ಪ.ಪಿ (140), ಚಂದ್ರಪ್ಪ ಎಂ.(135), ದ್ಯಾವಪ್ಪ ಪಿ (134), ಮಂಜುನಾಥ ಹೆಚ್(129), ವಿಜಯಕುಮಾರ್. ಎಂ(127), ದ್ಯಾನಪ್ಪ ಎಂ(143), ಪರಿಶಿಷ್ಠ ಪಂಗಡ ಮೀಸಲು ಸ್ಥಾನ ಖಾಲಿ ಇರುತ್ತದೆ. ನಾರಾಯಣಪ್ಪ ಎಂ. (140), ಆಂಜಿನಪ್ಪ (139), ಸುಜಾತ (145),ಸಾವಿತ್ರಮ್ಮ (139) ನಿರ್ದೇಶಕರಾಗಿ ಆಯ್ಕೆಯಾದರು.
ನೂತನ ನಿರ್ದೇಶಕರನ್ನು ಉದ್ದೇಶಿಸಿ ಮಾತನಾಡಿದ ದೊಡ್ಡನಲ್ಲಾಲ ಶಂಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿಯತ್ತ ಡೈರಿಯನ್ನು ಕೊಂಡೊಯ್ಯಬೇಕು. ಹಾಗೂ ಹಾಲು ಉತ್ಪಾದಕರನ್ನು ಉತ್ತೇಜಿಸುವ ರೀತಿ ಕೆಲಸ ಮಾಡಿ ಪ್ರೋತ್ಸಾಹ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ, ಕೋಡಿಹಳ್ಳಿ ಸುರೇಶ್, ರೇಂಜರ್ ವೆಂಕಟೇಶಪ್ಪ ಹಾಗೂ ಬಿ.ಜಿ. ನಾರಾಯಣಗೌಡ ನೂತನ ನಿರ್ದೇಶಕರನ್ನು ಅಭಿನಂಧಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಗೌಡ, ಪ್ರಕಾಶ್, ಆಲಗೊಂಡಹಳ್ಳಿ ಸುಬ್ಬಣ್ಣ, ಉಮ್ಮಲು ಕೃಷ್ಣಮೂರ್ತಿ, ಅಪ್ಪಸಂದ್ರ ಎಂ. ನಾರಾಯಣಸ್ವಾಮಿ, ಮೈಲಾಪುರ ನಾರಾಯಣಸ್ವಾಮಿ, ಚಿಕ್ಕನಲ್ಲಾಲ ನಾರಾಯಣಸ್ವಾಮಿ, ದೊಡ್ಡನಲ್ಲಾಲ ಮುರಳಿ, ನಾಗರಾಜು, ಶ್ರೀನಿವಾಸು, ಗೂಗುಟ್ಟಹಳ್ಳಿ ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.