ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಷ್ಟೇ ದ್ಯೇಯವಾಗಿರಬಾರದು. ಅವರಿಗೆ ಉತ್ತಮ ಸಂಸ್ಕಾರ ಕೊಡುವತ್ತ ಗಮನಹರಿಸಬೇಕು ಎಂದು ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ದೊಡ್ಡಣ್ಣ ಅವರು ಹೇಳಿದರು.
ಅವರು ಕುಷ್ಟಗಿ ಪಟ್ಟಣದ ಎನ್.ಸಿ.ಎಚ್. ಪ್ಯಾಲೇಸ್ ನಲ್ಲಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಿತ್ಯ ಶರಣ, ಸಂತ, ಮಹಾತ್ಮರ ಚಿಂತನೆಗಳು ಹಾಗೂ ವಚನಗಳು, ರಾಮಾಯಣ, ಮಹಾಭಾರತ ದ ನೀತಿಗಳ ಬಗ್ಗೆ ತಿಳಿಸಿ ಕೊಡಬೇಕು ಎಂದರು.
ಸ್ಥಳೀಯ ಮದ್ಧಾನಿ ಹಿರೇಮಠದ ಪೀಠಾಧಿಪತಿ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಬಣಜಿಗ ಸಮಾಜ ತಾಲೂಕ ಘಟಕದ ಅಧ್ಯಕ್ಷ ವಿಶ್ವನಾಥ ಗುರಪ್ಪ ಕನ್ನೂರ ಅವರು ಅಧ್ಯಕ್ಷತೆವಹಿಸಿದ್ದರು. ಕನ್ನಡ ಚಲನಚಿತ್ರ ರಂಗದ ಹಿರಿಯನಟ ದೊಡ್ಡಣ್ಣ ಹಾಗೂ ನೂತನ ಶಾಸಕರಾದ ಕುಷ್ಟಗಿಯ ದೊಡ್ಡನಗೌಡ ಎಚ್. ಪಾಟೀಲ ಅವರನ್ನು ಹಾಗೂ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ನಿವೃತ್ತ ಎಸ್.ಪಿ. ಲೋಕಾಯುಕ್ತ ವಿಜಯಕುಮಾರ ಬಿಸನಳ್ಳಿ ಅವರನ್ನು ಸೇರಿದಂತೆ ಮಾದ್ಯಮ ಕ್ಷೇತ್ರದಲ್ಲಿ ಗಮನಾರ್ಹವಾಗಿ ಸೇವೆ ಸಲ್ಲಿಸಿದ ಸ್ಥಳೀಯ ಹಿರಿಯ ಪತ್ರಕರ್ತರಾದ ನಾರಾಯಣರಾವ್ ಕುಲಕರ್ಣಿ, ಮಂಜುನಾಥ ಮಹಲಿಂಗಪುರ, ಸಮಾಜಮುಖಿ ಸೇವೆಯಲ್ಲಿರುವ ಪುರಸಭೆ ಸದಸ್ಯ ಬಸವರಾಜ ಬುಡಕುಂಟಿ, ಪೌರಕಾರ್ಮಿಕ ನಾಗರಾಜ ಚೆಲುವಾದಿ, 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಇನಾಯತ್ ಸಾಬ್ ರೈಟ್ ಹಾಗೂ ಎನ್.ಸಿ.ಹೆಚ್ ಪ್ಯಾಲೇಸ್ ಮಾಲೀಕ ನಾಗಪ್ಪ ಹೊಸವಕಲ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಇದೇವೇಳೆ ಬಣಜಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಸೂಳೆಭಾವಿ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಡಾ.ಶಿವಗಂಗಾ ರಂಜಣಗಿ ಅವರು ‘ ಬಣಜಿಗ ಸಮುದಾಯ ನಡೆದುಬಂದ ದಾರಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕೊಪ್ಪಳ ಬಣಜಿಗ ಸಮಾಜ ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ತಾಲೂಕು ಘಟದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕವಲಿ, ಕುಷ್ಟಗಿ ನಿಕಟಪೂರ್ವ ತಾಲೂಕಾಧ್ಯಕ್ಷ ಬಸೆಟ್ಟೆಪ್ಪ ಕುಂಬಳಾವತಿ, ನಿಕಟಪೂರ್ವ ಮಹಿಳಾ ಅಧ್ಯಕ್ಷೆ ರತ್ನ ಬಸವರಾಜ ಪಡಿ, ಸರಕಾರಿ ನೌಕರರ ಬಣಜಿಗ ಸಂಘದ ಪ್ರಮುಖ ಬಸೆಟ್ಟೆಪ್ಪ ಸಿಳ್ಳಿನ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ವಿರೇಶ ಬಂಗಾರಶೆಟ್ಟರ್, ನಗರ ಘಟಕದ ಅಧ್ಯಕ್ಷ ಸಚಿನ್ ಬಿ. ಕುಡತಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈರಣ್ಣ ಸೊಬರದ ಕಾರ್ಯಕ್ರಮ ನಿರೂಪಿಸಿದರು.