ಸುದ್ದಿಮೂಲ ವಾರ್ತೆ ಚೇಳೂರು, ಜ.27:
ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಾಭ್ಯಾಾಸಕ್ಕೆೆ ನೆರವಾಗಲಿ ಎಂದು ರಾಶ್ಚರುವು ಗ್ರಾಾಮದ ಸರ್ಕಾರಿ ಪ್ರಾಾಥಮಿಕ ಶಾಲೆಗೆ ಸ್ಥಳೀಯ ಸಮಾಜ ಸೇವಕರು ನಾರಾಯಣಪಲ್ಲಿ ನಾಗರಾಜು ಹೈಟೆಕ್ ಪ್ರೊೊಜೆಕ್ಟರ್ ಒಂದನ್ನು ದಾನವಾಗಿ ನೀಡಿದರು.
ತಾಲೂಕಿನ ರಾಶ್ಚರುವು ಗ್ರಾಾಮದ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ಉದ್ಘಾಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು ಎಂದು ಹಾರೈಸಿದರು.
ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆೆಯಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಗ್ರಾಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳೂ ಕೂಡ ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದಾತ್ತ ಉದ್ದೇಶದಿಂದ ಇಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ ಉಚಿತವಾಗಿ ಪ್ರೊೊಜೆಕ್ಟರ್ ಹಾಗೂ ಸೌಂಡ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಹೇಳಿದರು.
ಈ ಪ್ರೊೊಜೆಕ್ಟರ್ ಮೂಲಕ ಇನ್ನು ಮುಂದೆ ಮಕ್ಕಳಿಗೆ ದೃಶ್ಯ,ಶ್ರವಣ ಮಾಧ್ಯಮದ ಮೂಲಕ ಪಾಠಗಳನ್ನು ಸುಲಭವಾಗಿ ಅರ್ಥೈಸಲು ಅನುಕೂಲವಾಗಲಿದೆ. ಶಿಕ್ಷಣಕ್ಕೆೆ ನೀಡುವ ದಾನವು ಅತ್ಯಂತ ಶ್ರೇೇಷ್ಠವಾದುದು. ಈ ಡಿಜಿಟಲ್ ಸಾಧನವು ಮಕ್ಕಳ ಕಲಿಕಾ ಆಸಕ್ತಿಿಯನ್ನು ಹೆಚ್ಚಿಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಲೆಯ ಮುಖ್ಯೋೋಪಾಧ್ಯಾಾಯ ಕಾಲೇಶ್ ಅಭಿಪ್ರಾಾಯಪಟ್ಟರು.
ಸಿ ಆರ್ ಪಿ ಮುತ್ತಪ್ಪ ಮಾತನಾಡಿ, ಇಂದು ನಮ್ಮ ಶಾಲೆಯ ಮಕ್ಕಳಿಗೆ ಡಿಜಿಟಲ್ ಲೋಕದ ಬಾಗಿಲು ತೆರೆದಿದೆ. ಸಮಾಜ ಸೇವಕರಾದ ನಾರಾಯಣಪಲ್ಲಿ ನಾಗರಾಜು ರವರು ಶಾಲೆಗೆ ಸುಸಜ್ಜಿಿತ ಪ್ರೊೊಜೆಕ್ಟರ್ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಇನ್ನು ಮುಂದೆ ನಮ್ಮ ಮಕ್ಕಳು ಪಠ್ಯಗಳನ್ನು ಬರಿ ಪುಸ್ತಕದಲ್ಲಲ್ಲ, ಪರದೆಯ ಮೇಲೆ ದೃಶ್ಯಗಳ ಮೂಲಕ ಕಲಿಯಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಗ್ರಾಾಮಸ್ಥರು ಇದ್ದರು.
ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ಕೊಡುಗೆ

