ಸುದ್ದಿಮೂಲ ವಾರ್ತೆ
ಮೈಸೂರು,ನ.25:ನನ್ನನ್ನು ಪದೇ ಪದೇ ಡಿ.ಕೆ.ಶಿವಕುಮಾರ್ ಮಗಳು ಎಂದು ಕರೆಯಬೇಡಿ. ಹಾಗೇ ಹೇಳಿದರೇ ಬೇಜಾರಾಗುತ್ತೇ, ಹಾಗಾಗಿ ನನ್ನನ್ನು ಆ ರೀತಿ ಕರೆಯಬೇಡಿ.
ಹೀಗೇಂದು ಹೇಳಿದವರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಶನಿವಾರ ಮೈಸೂರಿನ ಮಹಾರಾಣಿ ಕಾಲೇಜಿನ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗವಕಾಶ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ತಂದೆಯ ಕಾರಣಕ್ಕೆ ನನ್ನನ್ನು ಗುರುತಿಸಬೇಡಿ. ನಾನು ಡಿ.ಕೆ. ಶಿವಕುಮಾರ್ ಮಗಳು ಎಂದು ಹೇಳಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಐಶ್ವರ್ಯ, ಡಿ ಕೆ ಶಿವಕುಮಾರ್ ಅವರ ಮಗಳಂತೆ ಎಂದು ಸಮಾಜ ಗುರುತಿಸಬೇಕೆಂದು ಶ್ರಮಿಸುತ್ತಿದ್ದೇನೆ ಎಂದರು.
ನನಗೆ ಮೈಸೂರು ಅಂದರೆ ತುಂಬಾ ಇಷ್ಟ. ನಾನು ಡಾಕ್ಟರ್ ಆಗಬೇಕೆಂದು ಬಯಸಿದ್ದೆ. ಆದರೆ ನನ್ನ ತಂದೆ ಅದಕ್ಕೆ ಅವಕಾಶ ಕೊಡಲಿಲ್ಲ, ನೀನು ಡಾಕ್ಟರ್ ಓದಲು ಸಾಧ್ಯವಿಲ್ಲ ಎಂದು ತಂದೆಯವರು ಹೇಳಿದ ಕಾರಣ ನಾನು ಡಾಕ್ಟರ್ ಓದಲಿಲ್ಲ. ನನ್ನ ತಂದೆ ತಾಯಿಯ ಆಶಯದಂತೆ ವಿದ್ಯಾಭ್ಯಾಸ ಮಾಡಿದೆ ಎಂದು ತಮ್ಮ ಮನದಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಾವಕಾಶ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜನೆ ಮಡಲಾಗಿತ್ತು. ಮಹಾರಾಣಿ ಕಾಲೇಜಿನ ಸಾವಿರಾರು ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.