ಸುದ್ದಿಮೂಲ ವಾರ್ತೆ ಮಂಡ್ಯ, ನ.06:
ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಈ ಸರ್ಕಾರ ರೈತರ ಲವತ್ತಾಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾವ ರೈತರು ಕೂಡ ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ರೈತರ ಜತೆ ನಾನಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರು ಅಭಯ ನೀಡಿದರು.
ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಟಿಿಯಲ್ಲಿ ಕೇಂದ್ರ ಸಚಿವರು ಮಾತನಾಡಿದರು.
ರಾಜ್ಯ ಸರ್ಕಾರದ ಬಿಡದಿ ಟೌನ್ಶಿಪ್ಗೆ ರೈತರು ವಿರೋಧ ಮಾಡುತ್ತಿಿದ್ದಾರೆ. ಕಳೆದ ಎರಡು ತಿಂಗಳಿನಿಂದ ರೈತರು ಅಹೋರಾತ್ರಿಿ ಧರಣಿ ನಡೆಸುತ್ತಿಿದ್ದಾರೆ. ರೈತರಿಗೆ ಮಿಡಿಯುವುದು ಬಿಟ್ಟು ಈ ಸರ್ಕಾರದ ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬಿಡದಿ ಟೌನ್ ಶಿಪ್ ಮಾಡುವುದು ಕುಮಾರಸ್ವಾಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಶೆಲ್ಟರ್ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿಿನ ತೀರ್ಮಾನಗಳು ಬೇರೆ ಇವೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ.
9 ಸಾವಿರ ಎಕರೆ ಭೂಮಿಯನ್ನು ಟೌನ್ಶಿಪ್ಗೆ ಸ್ವಾಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ರೈತರು ಇದಕ್ಕೆೆ ವಿರೋಧ ಇದ್ದಾರೆ. ನಾನು ರೈತರ ಪರ ಇದೇನೆ ಎಂದರು.
ಈಗಲ್ ಟನ್ಗೆ ನಿಗದಿ ಮಾಡಿದಷ್ಟು ಪರಿಹಾರ ನೀಡಲಿ:
ಬಿಡದಿಯಲ್ಲಿ ಸರ್ಕಾರ ಸ್ವಾಾಧೀನ ಮಾಡಿಕೊಳ್ಳಲು ಹೊರಟಿರುವ ಭೂಮಿಯ ವ್ಯಾಾಪ್ತಿಿಯಲ್ಲಿಯೇ ಈಗಲ್ಟನ್ ಗಾಲ್ಫ್ ಕ್ಲಬ್ ಇದೆ. ಅದು ಸರಕಾರಿ ಕರಾಬು ಭೂಮಿ ಅತಿಕ್ರಮಿಸಿದೆ ಆರೋಪ ಮಾಡಲಾಗಿತ್ತು. ಆ ಸಂಸ್ಥೆೆಯ ಮೇಲೆ ಆರೋಪಗಳನ್ನು ಹೊರೆಸಿ 2018ರಲ್ಲಿ ಚದರ ಅಡಿ ಲೆಕ್ಕದಲ್ಲಿ ದಂಡ ವಿಧಿಸಿದ್ದಾರೆ. 70 ಎಕರೆ ಕರಾಬು ಭೂಮಿಗೆ 984 ಕೋಟಿ ರೂ. ದಂಡ ವಿಧಿಸಿದರು. ಅಂದರೆ, ಪ್ರತಿ ಎಕರೆಗೆ 13 ಕೋಟಿ ರೂ. ದಂಡ ವಿಧಿಸಬೇಕು ಎಂದು ಸಂಪುಟ ಸಭೆ ತೀರ್ಮಾನ ಕೈಗೊಂಡಿತು. ನಿಮ್ಮ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ನಿಮ್ಮವರೇ ಸಿಎಂ, ಸಚಿವರು ಇದ್ದಾಗ ನೀವೆ ನಿಗದಿ ಮಾಡಿದ ದರ ಅದಲ್ಲವೇ. ಈಗ ನೀವೇ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಟ್ಟುಬಿಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಾಮಿ ಅವರು ಒತ್ತಾಾಯಿಸಿದರು.
ಸರ್ಕಾರದಿಂದ ಕಬ್ಬು ಬೆಳೆಗಾರರ ನಿರ್ಲಕ್ಷ್ಯ :
ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಿಯಾಗಿ ಕೆಲಸ ಮಾಡಿದ್ದೇನೆ. ಈಗ ರೈರು ಕಬ್ಬಿಿಗೆ ದರ ನಿಗದಿ ಮಾಡಿ ಎಂದು ಕೇಳುತ್ತಿಿದ್ದಾರೆ. 136 ಸೀಟಿನ ಸ್ವಾಾತಂತ್ರ ಸರ್ಕಾರಕ್ಕೆೆ ಏನಾಗಿದೆ.
ರೈತರನ್ನು 7 ದಿನದಿಂದ ರಸ್ತೆೆಯಲ್ಲಿ ಮಲಗಿಸದಿದ್ದಾರೆ. ರೈತರ ಬಗ್ಗೆೆ ಕಾಳಜಿ ಇದ್ದಿದ್ದರೆ ಸರ್ಕಾರ ಈ ರೀತಿ ಮಾಡುತ್ತಿಿರಲಿಲ್ಲ. ಸಿಎಂ ಪ್ರವಾಸ ಮಾಡಿದರೂ ಸ್ಥಳಕ್ಕೆೆ ಹೋಗಿ ರೈತರ ಕಷ್ಟ ಕೇಳಲಿಲ್ಲ. ಶಾಸಕ ಮೇಟಿ ಅವರ ಅಂತಿಮ ದರ್ಶನಕ್ಕೆೆ ಹೋದವರು ಅಲ್ಲೇ ಪಕ್ಕದಲ್ಲೇ ನಡೆಯುತ್ತಿಿದ್ದ ಪ್ರತಿಭಟನೆ ಜಾಗಕ್ಕೆೆ ಹೋಗಬಹುದಿತ್ತಲ್ವಾಾ. ಅಹಿಂದಾ ಹೆಸರಲ್ಲಿ ದೊಡ್ಡ ರ್ಯಾಲಿ ಮಾಡುವೆ ಎನ್ನುತ್ತಾಾರೆ. ಅದೆಲ್ಲಾ ಯಾವ ಪುರುಷಾರ್ಥಕ್ಕೆೆ ಎಂದು ಸಚಿವರು ಪ್ರಶ್ನಿಿಸಿದರು.
ರೈತರು ಬೆಲೆ ನಿಗದಿ ಕೇಳಿದರೆ ನಮ್ಮದಲ್ಲ ಕೇಂದ್ರ ಸರ್ಕಾರ ಹಣ ಕೊಡಬೇಕು ಎನ್ನುತ್ತಾಾರೆ. ಸಾಲ ಮನ್ನಾಾಡುವಾಗ ನಾನೇನು ಕೇಂದ್ರ ಸರ್ಕಾರದ ಬಳಿಗೆ ಹೋಗಿರಲಿಲ್ಲ. ಎಲ್ಲಕ್ಕೂ ರಾಜಕೀಯ ಬೆರೆಸುವ ಆರೋಪ ನಮ್ಮ ಮೇಲೆ ಮಾಡುತ್ತಾಾರೆ. ಹಾಗಾಗಿ ನಾನು ಪ್ರತಿಭಟನಾ ಸ್ಥಳಕ್ಕೆೆ ಹೋಗಿಲ್ಲ. ಆದರೂ ನಾವು ರೈತರ ಪರವೇ ಇದ್ದೇವೆ. ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ. ರೈತರ ಬದುಕಿನ ಜತೆ ಕಾಂಗ್ರೆೆಸ್ ಸರ್ಕಾರ ಚೆಲ್ಲಾಟ ಆಡುತ್ತಿಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಾಮಿ ಹೇಳಿದರು.

