ಸುದ್ದಿಮೂಲ ವಾರ್ತೆ ಮುದ್ದೇಬಿಹಾಳ, ೆ.26:
ನಮ್ಮ ಮಕ್ಕಳು ಕೇವಲ ಅಂಕ ಗಳಿಕೆಯ ಮಾಕ್ಸ್ ರ್ ಕಾರ್ಡಗಾಗಿ ಬೇಕೋ ಅಥವಾ ಮಕ್ಕಳೇ ಮುಖ್ಯವೋ ಎಂದು ಆಲೋಚಿಸಿದಾಗ ಮಕ್ಕಳಿಗೆ ಪ್ರಾಾಧಾನ್ಯತೆ ಕೊಡದೇ ಅಂಕಪಟ್ಟಿಿಗೆ ಪ್ರಾಾಧಾನ್ಯತೆ ಕೊಡುತ್ತಿಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ಶ್ರೀ ಶಂಕರಭಾರತಿ ಪ್ರಾಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಮಾರ್ಕ್ಸ್ಕಾರ್ಡ್ಗಳಿಗಾಗಿ ತಯಾರು ಮಾಡದೇ ಮಕ್ಕಳನ್ನು ಸದೃಢ ಪ್ರಜೆಯನ್ನಾಾಗಿ ತಯಾರು ಮಾಡಬೇಕು.ಇಂದಿನ ಮಕ್ಕಳಲ್ಲಿ ಸಂವೇದನಾಶೀಲ ಗುಣ ಅಧಿಕವಾಗಿದ್ದು ಅವರ ಆಸೆ,ಗುರಿಗಳಿಗೆ ತಕ್ಕಂತೆ ಬೆಳೆಸಬೇಕು.ಪಾಲಕರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆೆ ಒತ್ತಡ ಹೇರಬಾರದು.ಮಕ್ಕಳಲ್ಲಿ ಪ್ರೀೀತಿಯ ಸಂಬಂಧ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನಿಡಗುಂದಿ ತಹಶೀಲ್ದಾಾರ್ ಎ.ಡಿ.ಅಮರವಾದಗಿ ಮಾತನಾಡಿ, ಭವಿಷ್ಯದಲ್ಲಿ ಸಾಧನೆಗೈದ ಶಾಲೆ ಹಳೆ ವಿದ್ಯಾಾರ್ಥಿಗಳು ಇತರರಿಗೆ ಮಾದರಿಯಾಗಿ ಕಾಣಿಸುತ್ತಾಾರೆ. ಅವರಂತೆ ಉಳಿದ ವಿದ್ಯಾಾರ್ಥಿಗಳು ಆಗಬೇಕು ಎಂದರು.
ಕೊಡೆಕಲ್ ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಶ್ರೀಗಳು ಮಾತನಾಡಿದರು.
ಬ್ರಹ್ಮಾಾಂಡಬೇರಿ ಮಠದ ಗಂಗಾಧರ ಸ್ವಾಾಮೀಜಿ, ಸಂಸ್ಥೆೆ ಅಧ್ಯಕ್ಷ ಗೋವಿಂದಗೌಡ ಎಸ್. ತಾತರಡ್ಡಿಿ, ಕಾರ್ಯದರ್ಶಿ ಸಿದ್ದು ದಲಾಲಿ, ವೆಂಕಟರೆಡ್ಡಿಿ ಎಸ್.ಜಿ, ಮುಖ್ಯಶಿಕ್ಷಕ ಬಸವರಾಜ ಕೆಂಚನಗುಡ್ಡ, ಶಿಕ್ಷಕರಾದ ಎಂ.ಎಂ.ಮಸ್ಕಿಿ ಪ್ರಕಾಶ ಮಂಕಣಿ, ಸಿಆರ್ಪಿ ಬಿ.ವೈ.ಮಾದರ ಇದ್ದರು. ಬಿಎಸ್ಎ್ಗೆ ಆಯ್ಕೆೆಯಾದ ಆಯೇಷಾ ವಾಲೀಕಾರ, ಕಾಶಿಬಾಯಿ ಚಲವಾದಿ, ಶಾಲೆಯ ಹಳೆ ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಸನ್ಮಾಾನಿಸಲಾಯಿತು.
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್ಸ್ ಕಾರ್ಡ್ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ – ಬೆಳಗಲ್

