
ಕಲಬುರಗಿ : ಮಂಡ್ಯ ಜಿಲ್ಲಾ ಚುನಾವಣೆ ರಾಯಭಾರಿ ಆಗಿರುವುದರಿಂದ ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂದು ಖ್ಯಾತ ನಟ ನಿನಾಸಂ ಸತೀಶ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೆಲ ನಟರು ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಸಿ, ಯಾರು ಯಾರಿಗೆ ಬೇಕಾದರೂ ಓಟ ಹಾಕಿ ಅನ್ನಬಹುದು, ಅದು ಅವರವರ ನಿರ್ಧಾರ ಎಂದರು.
ಮತದಾರರು ಒಳ್ಳೆಯ ವ್ಯಕ್ತಿ, ಜನರ ಕೈಗೆ ಸಿಗುವ ವ್ಯಕ್ತಿಗೆ ಮತ ನೀಡಿ ಬೇಕು. ನಿಮ್ಮನ್ನೆ ದಬಾಯಿಸುವ, ನಿಮ್ಮ ಹಕ್ಕನ್ನು ಕಿತ್ತಿಕೊಳ್ಳುವ ವ್ಯಕ್ತಿಗೆ ಮತ ಹಾಕಬೇಡಿ ಎಂದು ಮತದಾರರಿಗೆ ನಟ ಸತೀಶ್ ಸಲಹೆ ನೀಡಿದರು.

