ಸುದ್ದಿಮೂಲವಾರ್ತೆ
ಸಿರವಾರ: ಏ.೩ ಹೊಸ ತಾಲ್ಲೂಕು ಸಿರವಾರಕ್ಕೆ ಮಿನಿವಿಧಾನ ಸೌಧ ನಿರ್ಮಾಣ ನನ್ನ ಗುರಿಯಾಗಿತ್ತು, ಆದರೆ ನಿವೇಶನ, ಸರಕಾರದ ಅನುದಾನದ ಕೊರತೆಯಿಂದ ನಿರ್ಮಾಣ ಸಾಧ್ಯವಾಗಿಲ್ಲ, ಮುಂದೆ ಅವಕಾಶ ಸಿಕ್ಕಲಿ ಮೊದಲ ಆದ್ಯತೆಯಾಗಿದೆ ಎಂದು ಮಾನ್ವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಸೋಮವಾರ ಪಟ್ಟಣದ ಶ್ರೀಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಹಾಗೂ ಪಂಚರತ್ನ ಯೋಜನೆಗಳ ಕರಪತ್ರ ನೀಡಿ, ಮನೆ ಮನೆಗೆ ಜೆಡಿಎಸ್ ಎಂದು ಹೇಳುತ್ತಾ,ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಿ
ಕಳೆದ ಐದು ವರ್ಷಗಳಲ್ಲಿ ಸಿರವಾರ ಪಟ್ಟಣಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ, ಸಿರವಾರ ಪಟ್ಟಣದಲ್ಲಿ ರಸ್ತೆ ವಿಭಜಕ, ಹೈಮಾಸ್ಟ್ ಲೈಟ್, ಬಸ್ ನಿಲ್ದಾಣ ಕಾಮಗಾರಿ, ವಿವಿಧ ವಾರ್ಡ್ ಗಳಲ್ಲಿ ಸಿಸಿರಸ್ತೆ ಕಾಮಗಾರಿ, ರಸ್ತೆ ಅಗಲೀಕರಣ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ತಾಲ್ಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಿಗಿ, ಜಿ.ಲೋಕರೆಡ್ಡಿ, ಗ್ಯಾನಪ್ಪ, ಬಂದೇನವಾಜ್, ಎಂ.ಡಿ.ವಲಿಸಾಬ್,ರಾಜಾ ಆದರ್ಶ ನಾಯಕ, ಕಾಶಿನಾಥ ಸರೋದ್,ಈಶಪ್ಪ ಹೂಗಾರ,ನಾಗರಾಜ ಭೋಗಾವತಿ,ದಾನಪ್ಪ, ಚಂದ್ರಶೇಖರಗೌಡ,ಸತ್ತರ್ ಸಾಬ್,ಪಿ ರವಿಕುಮಾರ, ಗೋಪಾಲ ನಾಯಕ ಹರವಿ,ಯಂಕಪ್ಪ ಗುಜ್ಜಲ್, ಪ.ಪಂ.ಮಾಜಿ ಸದಸ್ಯ ಇಮಾಮ್,ರಮೇಶ ಭೋವಿ, ಪಕ್ಷದ ಮುಂಖಡರು ಕಾರ್ಯಕರ್ತರು ಇದ್ದರು.