ಸುದ್ದಿಮೂಲ ವಾರ್ತೆ
ಮೈಸೂರು, ಜೂ. 22 : ಹುಣಸೂರು ಪಟ್ಣಣದ ಬೋಟಿ ಬಜಾರ್ ರಸ್ತೆಯ ಪರಸಯ್ಯ ಛತ್ರದ ಸಮೀಪ ಇರುವ ಎಸ್.ಎಸ್ ಸಾಮಿಲ್ ಕಾವಲುಗಾರ ಮತ್ತು ಬುದ್ದಿಮಾಂದ್ಯ ವ್ಯಕ್ತಿಗಳ ತಲೆ ಮೇಲೆ ಭಾರದ ಮರದ ದಿಂಬಿಯನ್ನು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯ ಕಾವಲುಗಾರ ವೆಂಕಟೇಶ್ (75) ವರ್ಷ ಹಾಗೂ ಮತ್ತೊಬ್ಬರು ಷಣ್ಮುಖ (65) ವರ್ಷ ಹತ್ಯೆಯಾದ ನತದೃಷ್ಟರು. ವೆಂಕಟೇಶ್ ಇದೇ ಸಾ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಷಣ್ಮುಖರಿಗೆ ಯಾರು ದಿಕ್ಕುದೆಸೆ ಇಲ್ಲದೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಇದೇ ಮಿಲ್ ಬಳಿ ಮಲಗುತ್ತಿದರು. ಬುದ್ದಿ ವಿಕಲತೆ ಇತ್ತು ಎನ್ನಲಾಗಿದೆ. ಯಾಕೆ ಈ ಹತ್ಯೆ ನಡೆದಿದೆ ಎಂಬುದಕ್ಕೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಈ ಹಿಂದೆ ಕೂಡ ಇಲ್ಲಿನ ಪಕ್ಕದ ಸಾಮಿಲ್ ನಲ್ಲಿ ಇದೆ ರೀತಿ ಕಾವಲಗಾರನ ಹತ್ಯೆಯಾಗಿದನ್ನು ಇಲ್ಲಿ ಸ್ಮರಿಸಹುದು.