ಸುದ್ದಿಮೂಲ ವಾರ್ತೆ ಜೇವರ್ಗಿ, ಡಿ.07:
ತಾಲೂಕಿನ ಆಲೂರು ಬಹುಗ್ರಾಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಣೆಯನ್ನು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಮಾಡಿದರು.
ಜೇವರ್ಗಿ ಮತ್ತು ಯಡ್ರಾಾಮಿ ತಾಲೂಕಿನ 99 ಗ್ರಾಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆಯಾದ ತಾಲೂಕಿನ ಆಲೂರು ಬಹುಗ್ರಾಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಣೆಯನ್ನು ಮಾಡಿದರು.
ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಾದ ಗುರುಶಾಂತಯ್ಯ ಗದ್ದಗಿಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಅವರಿಂದ ಕಾಮಗಾರಿಯ ಪ್ರಗತಿ ಮತ್ತು ಗುಣಮಟ್ಟದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಶಾಖಾಧಿಕಾರಿಗಳಾದ ಕಾಶಿಂಪಟೇಲ್ ಮುಡಬಾಳ, ಮುನ್ನ ಪಟೇಲ್ ಯಳವಾರ್, ಪ್ರಮೋದ್ ತಿವಾರಿ, ಬಹದ್ದೂರ್ ರಾಥೋಡ್, ಪ್ರತಾಪ್ ಕಟ್ಟಿಿ ಮತ್ತು ಕಾಂಗ್ರೆೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿಿತರಿದ್ದರು.
ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಿದ ಡಾ. ಅಜಯ್ ಸಿಂಗ್

