ಸುದ್ದಿಮೂಲ ವಾರ್ತೆ ಜೇವರ್ಗಿ, ಸೆ.27:
ಅತಿಯಾದ ಮಳೆ ಮತ್ತು ತೀವ್ರ ಪ್ರವಾಹದಿಂದಾಗಿ ಹಾನಿಗೊಳಗಾದ ತಾಲೂಕಿನ ಕಟ್ಟಿಿಸಂಗಾವಿ ಹಾಗೂ ವಿವಿಧ ಗ್ರಾಾಮಗಳಿಗೆ ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನದಿ ನೀರು ನುಗ್ಗಿಿದ ಗ್ರಾಾಮಗಳಲ್ಲಿ ಸಾರ್ವಜನಿಕರಿಗೆ ಕಾಳಜಿ ಕೇಂದ್ರ ಪ್ರಾಾರಂಭ ಮಾಡಿ ಅವರಿಗೆ ಉಪಾಹಾರದ ವ್ಯವಸ್ಥೆೆ ಕಲ್ಪಿಿಸಬೇಕು ಎಂದು ತಾಲೂಕ ದಂಡಾಧಿಕಾರಿಗಳಿಗೆ ಸೂಚನೆ ನೀಡಿದರು. ಭೀಮಾ ನದಿಯಲ್ಲಿ ನೀರು ಹೆಚ್ಚಿಿನ ಪ್ರವಾಹದಿಂದ ನದಿ ಅಕ್ಕಪಕ್ಕದ ಗ್ರಾಾಮದ ಸಾರ್ವಜನಿಕರು ನದಿ ಕಡೆ ಹೋಗದಂತೆ ಮುನ್ನೆೆಚ್ಚರಿಕೆ ಕ್ರಮಗಳು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಇದೇ ವೇಳೆ ಕಟ್ಟಿಿಸಂಗಾವಿ ಗ್ರಾಾಮಕ್ಕೆೆ ಹೋಗುವ ರಸ್ತೆೆ ಸಂಪೂರ್ಣ ಜಲಾವೃತಗೊಂಡಿದ್ದು, ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಗ್ರಾಾಮಕ್ಕೆೆ ರಸ್ತೆೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.
ಇನ್ನೂ, ತಾಲೂಕಿನ ಗ್ರಾಾಮಗಳಾದ ಕೋನ ಹಿಪ್ಪರಗಾ, ಮಂದರವಾಡ, ಕೂಡಿ, ಕೊಬ್ಬಾಾಳ್ ಹಾಗೂ ಹಂದನೂರ್ ಗ್ರಾಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಸ್ಥಳಗಳನ್ನು ವೀಕ್ಷಣೆ ಮಾಡಿ, ನೀರು ನುಗ್ಗಿಿದ ಮನೆಗಳ ಕುಟುಂಬದವರಿಗೆ ಮತ್ತು ಹೊಲದ ರೈತರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಕಾಳಜಿ ಕೇಂದ್ರಕ್ಕೆೆ ಭೇಟಿ :
ತಾಲೂಕಿನ ಕೋನ ಹಿಪ್ಪರಗಾ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅತಿಯಾದ ಮಳೆ ಮತ್ತು ತೀವ್ರ ಪ್ರವಾಹದಿಂದಾಗಿ ಹಾನಿಗೊಳಗಾದ ಸ್ಥಳಗಳಿಗೆ ಮತ್ತು ಕಾಳಜಿ ಕೇಂದ್ರಕ್ಕೆೆ ಶಾಸಕ ಡಾ.ಅಜಯ್ ಸಿಂಗ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ನಾಗರೀಕರಿಗೆ ಸೂಕ್ತ ವ್ಯವಸ್ಥೆೆ ಕಲ್ಪಿಿಸಲು ಮತ್ತು ಹಾನಿಗೊಳಗಾದ ಬೆಳೆಗಳ ಬಗ್ಗೆೆ ಮಾಹಿತಿ ನೀಡಲು ಹಾಗೂ ಪರಿಹಾರದ ಬಗ್ಗೆೆ ಕ್ರಮವಹಿಸಿಲು ಅಧಿಕಾರಿಗಳಿಗೆ ಸೂಚಿಸಿದರು.
ಕಟ್ಟಿಿಸಂಗಾವಿ ಬ್ರಿಿಜ್ ಬಂದ್:
ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಾಗಿದರಿಂದ ಕಲಬುರಗಿ-ಜೇವರ್ಗಿ ಮುಖ್ಯರಸ್ತೆೆಯ ಕಟ್ಟಿಿಸಂಗಾವಿ ಬ್ರಿಿಜ್ ಮೇಲಿನ ವಾಹನ ಸಂಚಾರ ಶನಿವಾರ ಬೆಳಗ್ಗೆೆ ಬಂದ್ ಮಾಡಿಸಲಾಗಿತ್ತು. ನೀರಿನ ಪ್ರಮಾಣ ಕಡಿಮೆಯಾದಂತೆ ಕಾರು ಮತ್ತು ದ್ವಿಿಚಕ್ರ ವಾಹನ ಸಂಚಾರ ಮಾಡಬಹುದು ಎಂದು ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ್ ಸೀರಿ, ಶಾಂತಪ್ಪ ಕೂಡಲಗಿ, ಕಾಶಿರಾಯ ಗೌಡ ಯಲಗೋಡ, ಶೌಕತ್ ಅಲಿ ಆಲೂರು, ಅಧಿಕಾರಿಗಳಾದ ಡಾ.ಉಮೇಶ್ ಶರ್ಮಾ, ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ಪಿಎಸ್ಐ ಗಜಾನಂದ ಬಿರಾದಾರ, ಪ್ರತಾಪ ಕಟ್ಟಿಿ, ಸುರೇಶ್ ಕಟ್ಟಿಿಸಂಗಾವಿ, ತಾಲೂಕ ಆಡಳಿತ ಸಿಬ್ಬಂದಿ, ಕಟ್ಟಿಿಸಂಗಾವಿ ಗ್ರಾಾಮದ ಗ್ರಾಾಮ ಲೆಕ್ಕಾಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಉಪಸ್ಥಿಿತರಿದ್ದರು.
ಕಾಳಜಿ ಕೇಂದ್ರ ಪ್ರಾಾರಂಭಿಸಲು ಅಧಿಕಾರಿಗಳಿಗೆ ಸೂಚನೆ ಪ್ರವಾಹ ಪೀಡಿತ ಗ್ರಾಾಮಗಳಿಗೆ ಡಾ.ಅಜಯ್ ಸಿಂಗ್ ಭೇಟಿ, ಪರಿಶೀಲನೆ
