ಸುದ್ದಿಮೂಲ ವಾರ್ತೆ ಜೇವರ್ಗಿ, ಜ.29:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾಾರಂಟಿ ಯೋಜನೆಗಳು ಜನಸಾಮಾನ್ಯರ ಅಭಿವೃದ್ಧಿಿಗೆ ಪೂರಕವಾಗಿವೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ. ಅಜಯ ಸಿಂಗ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗ್ಯಾಾರಂಟಿ ಅನುಷ್ಠಾಾನ ಪ್ರಾಾಧಿಕಾರದ ಕಾರ್ಯಾಲಯ ಉದ್ಘಾಾಟಿಸಿ ಮಾತನಾಡಿದರು. ನಮ್ಮದು ನುಡಿದಂತೆ ನಡೆದ ಸರಕಾರ. ಬಡವರು ಹಸಿವಿನಿಂದ ಬಳಲ ಬಾರದು ಹಾಗೂ ಮನೆಯ ಹೆಣ್ಣು ಮಗಳು ಕಷ್ಟದ ಜೀವನ ನಡೆಸಬಾರದು ಎನ್ನುವ ಕಾರಣದಿಂದ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆೆಸ್ ಸರ್ಕಾರ ಗ್ಯಾಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾಾರಂಟಿ ಯೋಜನೆ ಅನುಷ್ಠಾಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ತಾಲೂಕ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ಶೌಕತ್ ಅಲಿ ಆಲೂರ್ ಮಾತನಾಡಿ, ಡಾ.ಅಜಯ್ಸಿಂಗ್ ಅವರು ಜೇವರ್ಗಿ ಅಭಿವೃದ್ಧಿಿಗಾಗಿ ಶ್ರಮಿಸುತ್ತಿಿದ್ದಾರೆ. ಅವರ ಅಭಿವೃದ್ಧಿಿ ಕಾರ್ಯಗಳಿಗೆ ಪೂರಕವಾಗಿ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಕೆಲಸ ಮಾಡಲಿದೆ. ಗ್ಯಾಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿಸುವ ನಿಟ್ಟಿಿನಲ್ಲಿ ಕೆಲಸ ಮಾಡಿತ್ತೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಿಗೂ ಯೋಜನೆ ಸದುಪಯೋಗ ವಾಗುವಂತೆ ಕ್ರಮವಹಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿಿ ಪಾಟೀಲ್ ಇಟಗಾ, ರುಕುಮ್ ಪಟೇಲ್ ಪೊಲೀಸ್ ಪಾಟೀಲ್ ಇಜೇರಿ, ರಾಜಶೇಖರ್ ಸಿರಿ, ಕಾಸಿಮ್ ಪಟೇಲ್ ಮುದವಾಳ, ಶಾಂತಪ್ಪ ಕೂಡಲಗಿ, ವಸಂತ ನರಿಬೋಳ, ಕಾಸಿರಾಯ ಗೌಡ ಪಾಟೀಲ, ಪಿಎ ಡಿ ಬ್ಯಾಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿಿ, ತಾಲೂಕು ಪಂಚಾಯತ್ ಇ ಓ ರವಿಚಂದ್ರ ರೆಡ್ಡಿಿ, ಸಂಗನಗೌಡ ಗುಗಿಹಾಳ್, ಮುನ್ನಾಾ ಪಟೇಲ್ ಯಾಳವಾರ, ಮಹಿಬೂಬ್ ಸಾಬ್ ಕೆಂಭಾವಿ, ಮಲ್ಲಣ್ಣಗೌಡ ಲಕಣಪುರ ಇದ್ದರು.
ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಪೂರಕ – ಡಾ.ಅಜಯಸಿಂಗ್

